Wed 17 Jan 2018, 4:05PM

468X60

ಅಗ್ರ ಸ್ಥಾನಕ್ಕೇರಿದ ಆಸಿಸ್

Wednesday, February 24th, 2016 | webnews | no responses

ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್ ಚರ್ಚ್‌ನಲ್ಲಿ ನಡೆದ ೨ನೇ ಟೆಸ್ಟ್‌ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ೭ ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿದೆ. ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸಮನ್ ಬ್ರೆಂಡನ್ ಮೆಕ್ಕಲಮ್ ಅವರ ವಿದಾಯದ ಪಂದ್ಯವಾಗಿದ್ದ ೨ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಜಯಭೇರಿ ಬಾರಿಸಿದೆ. ಜಾಕ್ಸನ್ ಬರ್ಡ್ (೫೯ಕ್ಕೆ ೫) ಹಾಗೂ ಜೇಮ್ಸ್ ಪ್ಯಾಟಿನ್‌ಸನ್(೭೭ಕ್ಕೆ ೪) ಮಾರಕ ದಾಳಿಗೆ ನ್ಯೂಜಿಲೆಂಡ್ ಬ್ಯಾಟ್ಸಮನ್‌ಗಳು ತತ್ತರಿಸಿ ಹೋಗಿದ್ದಾರೆ. ಅಂತಿಮವಾಗಿ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ಕಿವೀಸ್ ಪಡೆ ಕೇವಲ ೩೩೫ ರನ್‌ಗಳಿಗೆ ಆಲ್ ಔಟ್ ಆಯಿತು. ಅದರೊಂದಿಗೆ ಆಸ್ಟ್ರೇಲಿಯಾಗೆ ಗೆಲ್ಲಲು ೨೦೧ ರನ್ ಗಳ ಗುರಿ ನೀಡಿತು. ನ್ಯೂಜಿಲೆಂಡ್ ನೀಡಿದ ೨೦೧ ರನ್‌ಗಳ ಗುರಿ ಬೆನ್ನುಹತ್ತಿದ ಆಸ್ಟ್ರೇಲಿಯಾ ತಂಡ ಸ್ಮಿತ್(ಅಜೇಯ ೫೩) ಮತ್ತು ಜೆಎ ಬರ್ನ್ಸ್(೬೫ ರನ್) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಪಂದ್ಯದ ಐದನೇ ದಿನ ಗುರಿಯನ್ನು ನಿರಾಯಾಸವಾಗಿ ತಲುಪಿತು.

Leave a Reply


ಸುಭಾಷಿತ

ಯಾವುದೇ ಮಗು ತತ್ವಜ್ಞಾನಿಯಾಗುವಂತೆ ಮಾಡುವುದೇ ಶಿಕ್ಷಣ.

– ಫ್ಲೇಟೋ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top