Mon 15 Jan 2018, 10:28PM

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ರೋಡ್ ಶೋಗೆ ಬಿಜೆಪಿ ಟಾಂಗ್ ನೀಡಿದ್ದು, ಬೀದಿಗಿಳಿದಿರುವ ಕಾಂಗ್ರೆಸ್ ಮುಂದೆ ಬೀದಿಯಲ್ಲಿಯೇ ನಿಲ್ಲಲಿದೆ ಎಂದು ಮಂಗಳವಾರ ಹೇಳಿದೆ. ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಶಹ್ನಾವಾಜ್ ಹುಸೇನ್ ಅವರು, ಕಾಂಗ್ರೆಸ್ ಎಷ್ಟು ಬೇಕಾದರೂ ರೋಡ್‌ಶೋಗಳಲ್ಲಿ ಭಾಗಿಯಾಗಲಿ. ಆದರೆ, ಅವರು ೨೦೧೭ರ ಉತ್ತರ ಪ್ರದೇಶದಲ್ಲಿ ನಡೆಯುವ ಚುನಾವಣೆಯಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಎಂದಿಗೂ ವಿಧಾನಸಭೆ ಮೆಟ್ಟಿಲು ಹತ್ತಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ರೋಡ್ ಶೋಗೆ ಬಿಜೆಪಿ ಟಾಂಗ್ ನೀಡಿದ್ದು, ಬೀದಿಗಿಳಿದಿರುವ ಕಾಂಗ್ರೆಸ್ ಮುಂದೆ ಬೀದಿಯಲ್ಲಿಯೇ ನಿಲ್ಲಲಿದೆ ಎಂದು ಮಂಗಳವಾರ ಹೇಳಿದೆ. ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಶಹ್ನಾವಾಜ್ ಹುಸೇನ್ ಅವರು, ಕಾಂಗ್ರೆಸ್ ಎಷ್ಟು ಬೇಕಾದರೂ ರೋಡ್‌ಶೋಗಳಲ್ಲಿ ಭಾಗಿಯಾಗಲಿ. ಆದರೆ, ಅವರು ೨೦೧೭ರ ಉತ್ತರ ಪ್ರದೇಶದಲ್ಲಿ ನಡೆಯುವ ಚುನಾವಣೆಯಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಎಂದಿಗೂ ವಿಧಾನಸಭೆ ಮೆಟ್ಟಿಲು ಹತ್ತಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಲಖಿಂಪುರ್ ಖೇರಿ ಜಿಲ್ಲೆಯಿಂದ ಅಕ್ಕಿಯ ಹೊಟ್ಟು ತುಂಬಿಸಿ ಅದರಲ್ಲಿ ೭೭ ಕ್ವಿಂಟಾಲ್ ದನದ ಮಾಂಸವನ್ನು ಅಡಗಿಸಿಟ್ಟು ಅಮ್ರೋರಾಗೆ ಸಾಗಣೆ ಮಾಡುತ್ತಿದ್ದ ಮಿನಿಟ್ರಕ್‌ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಕ್ಕಿ ಹೊಟ್ಟು ತುಂಬಿದ್ದ ಚೀಲದೊಳಗೆ ದನದ ಮಾಂಸ ಇರಿಸಲಾಗಿತ್ತು, ಒಬ್ಬಾತನನ್ನು ಸ್ಥಳದಲ್ಲಿಯೇ ಬಂಧಿಸಲಾಗಿದ್ದು, ಇಬ್ಬರು ಪರಾರಿಯಾಗಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಿನಿಟ್ರಕ್‌ನಲ್ಲಿ ಬೃಹತ್ ಪ್ರಮಾಣದ ಗೋಮಾಂಸ ಸಾಗಣೆಯಾಗುತ್ತಿರುವ ಬಗ್ಗೆ ಹಿಂದಿನ ದಿನ ಸುಳಿವು ಲಭಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಈ ದಾಳಿ ನಡೆಸಿದ್ದಾರೆ.

ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗಿಯಾಗುವ ಬದಲು ಒಳ್ಳೆಯ ಶಿಕ್ಷಣ ಪಡೆಯುವತ್ತಾ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಮರಹಬೂಬ ಮುಫ್ತಿ ಹೇಳಿದ್ದಾರೆ. ಅವರು ಮಂಗಳವಾರ ಜಮ್ಮುವಿನಲ್ಲಿ ಸರಕಾರಿ ದಂತ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಿ ಭವಿಷ್ಯದ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದಾರೆ. ಪ್ರಮುಖ ವಿಷಯಗಳನ್ನು ಸರಿಪಡಿಸಲು ಹಿರಿಯ ವ್ಯಕ್ತಿಗಳಿರುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಇಂತಹ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸಣ್ಣ ಸಣ್ಣ ವಿಷಯಗಳಿಗೆ ಕಾಲೇಜು ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡು ಕಲ್ಲು ತೂರಾಟ ಮಾಡಿ ಇತರರಿಗೆ ಹಾನಿ ಮಾಡಬೇಡಿ ಎಂದಿದ್ದಾರೆ.

ದೆಹಲಿಯಲ್ಲಿ ಬಹುದೊಡ್ಡ ಸೆಕ್ಸ್ ರಾಕೆಟ್‌ನ್ನು ಬಯಲು ಮಾಡಿರುವ ದೆಹಲಿ ಪೊಲೀಸರು, ಮಾನವ ಕಳ್ಳಸಾಗಣೆ ಜಾಲದಲ್ಲಿ ತೊಡಗಿದ್ದ ಮುಸ್ಲಿಂ ದಂಪತಿಯನ್ನು ಬಂಧಿಸಿದ್ದಾರೆ. ಹುಡುಗಿಯರ ಮಾರಾಟ ಜಾಲದ ಕಿಂಗ್‌ಪಿನ್ ದೆಹಲಿಯ ಜಿ.ಬಿ.ರಸ್ತೆಯ ನಿವಾಸಿ ಸಾಯಿರಾ ಬೇಗಂ(೪೫) ಹಾಗೂ ಆಕೆಯ ಪತಿ ಆಫಾಕ್ ಹುಸೇನ್(೫೦) ಮತ್ತು ಅವರ ಆರು ಮಂದಿ ಸಹಾಯಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ೧೯೯೯ರಿಂದ ಈ ತನಕ ಮಾನವ ಕಳ್ಳಸಾಗಣೆ ಜಾಲದಲ್ಲಿ ತೊಡಗಿದ್ದ ಈ ಮುಸ್ಲಿಂ ದಂಪತಿ, ಸುಮಾರು ೫ ಸಾವಿರ ಹುಡುಗಿಯರನ್ನು ಮಾರಾಟ ಮಾಡಿ ಕನಿಷ್ಠ ನೂರು ಕೋಟಿ ರೂಪಾಯಿ ಸಂಪಾದಿಸಿರುವ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

ದಿಲ್ಲಿ ರಾಜ್ಯಪಾಲ ಲೆ| ಗವರ್ನರ್ ನಜೀಬ್ ಜಂಗ್ ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಹಾಗೆ ಫೋರ್‌ಟ್ವೆಂಟಿ. ದಿಲ್ಲಿ ರಾಜ್ಯಪಾಲರ ಹುದ್ದೆಗೆ ಓರ್ವ ಸಂಘ ವ್ಯಕ್ತಿ ಬೇಕಾಗಿದ್ದಾರೆ ಎಂದು ಬಿಜೆಪಿಯ ವಿವಾದಿತ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕಟಕಿಯಾಡಿದ್ದಾರೆ. ದಿಲ್ಲಿ ರಾಜ್ಯಪಾಲ ಲೆ| ಗವರ್ನರ್ ಜಂಗ್ ಅವರು ಉನ್ನತ ಹುದ್ದೆಗೆ ಹೇಳಿದ ವ್ಯಕ್ತಿಯೇ ಅಲ್ಲ. ಅವರನ್ನು ಆ ಹುದ್ದೆಯಿಂದ ತೆಗೆದು ಅಲ್ಲಿಗೆ ಸಂಘದ ವ್ಯಕ್ತಿಯೋರ್ವರನ್ನು ಕೂರಿಸುವುದೇ ಒಳಿತು ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಮುನ್ನ ಆಮ್ ಆದ್ಮಿ ಪಕ್ಷ ದಿಲ್ಲಿ ರಾಜ್ಯಪಾಲ ನಜೀಬ್ ಜಂಗ್ ಪ್ರಜಾಸತ್ತೆಗೊಂದು ಬೆದರಿಕೆಯಾಗಿದ್ದಾರೆ ಎಂದು ಹೇಳಿತ್ತು. ಇದೀಗ ಸ್ವಾಮಿ ಅವರು ಕೂಡ ಜಂಗ್ ವಿರುದ್ಧ ತಿರುಗಿ ಬಿದ್ದಿರುವುದು ಅಚ್ಚರಿಯ ಸಂಗತಿಯಾಗಿದೆ.

ಫಲ್ಗುಣಿ-ಮುಲಾರ್ ಪಟ್ನ ಮುತ್ತೂರು ಸೇತುವೆಯು ಪ್ರಮುಖ ಸೇತುವೆಯಾಗಿದ್ದು, ಈ ಸೇತುವೆಯ ಅತೀ ಸಮೀಪದಲ್ಲಿ/ಅಡಿಯಲ್ಲಿ ಕೂಡ ಮರಳುಗಾರಿಕೆ ನಡೆಸುತ್ತಿರುವುದರಿಂದ ಮತ್ತು ನದಿಯ ಇಕ್ಕೆಲಗಳಲ್ಲಿ ಇರುವ ಮಣ್ಣಿನ ಧರೆಯಂತಹ ಪ್ರದೇಶಗಳು ನೀರಿನಲ್ಲಿ ಕೊಚ್ಚಿ ಹೋಗುವುದರಿಂದ ಈ ಪ್ರದೇಶದಲ್ಲಿ ನಿರ್ಮಿಸಿರುವ ಸೇತುವೆಯ ಅಸ್ತಿತ್ವಕ್ಕೆ ತೊಂದರೆ ಉಂಟಾಗುತ್ತದೆ. ಸಾರ್ವಜನಿಕ ಹಿತದೃಷ್ಟಿ ಮೇರೆಗೆ ಸೇತುವೆಯ ಅಸ್ತಿತ್ವವನ್ನು ಕಾಪಾಡುವ ಉದ್ದೇಶದಿಂದ ಸೇತುವೆಯ ಮೇಲ್ಭಾಗದಲ್ಲಿ ೫೦೦ ಮೀಟರ್ ಹಾಗೂ ಸೇತುವೆಯ ಕೆಳಭಾಗದಲ್ಲಿ ೫೦೦ ಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮರಳುಗಾರಿಕೆ ನಡೆಸುವುದನ್ನು ನಿಷೇಧಿಸಿ ಮಂಗಳೂರು ಉಪ ವಿಭಾಗಾಧಿಕಾರಿ ಡಾ| ಡಿ.ಆರ್.ಅಶೋಕ್ ಆದೇಶ ಹೊರಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವಿಚಾರದಲ್ಲಿ ಅವಹೇಳನಕಾರಿಯಾಗಿ ಬರಹವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಮೂಡ ನಿವಾಸಿಯೋರ್ವನ ವಿರುದ್ದ ಬಂಟ್ವಾಳ ನಗರ ಠಾಣಾ ಎಸೈ ನಂದಕುಮಾರ್ ಅವರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ. ಮೂಡ ನಿವಾಸಿ ಎನ್ನಲಾದ ಜಬ್ಬಾರ್ ಬಿ.ಸಿ.ರೋಡು ಎಂಬಾತನ ಮೇಲೆ ಕಲಂ೨೯೫(ಎ)ರನ್ವಯ ಪ್ರಕರಣ ದಾಖಲಾಗಿದೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಧಾರ್ಮಿಕ ವಿಚಾರವಾಗಿ ಅವಹೇಳನಕಾರಿಯಾದ ಬರಹಗಳು ಹರಿದಾಡುತ್ತಿದ್ದುದರಿಂದ ಸ್ಥಳೀಯವಾಗಿ ಶಾಂತಿಭಂಗ ಉಂಟಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರ ನಿರ್ದೇಶನದ ಮೇರೆಗೆ ಜಬ್ಬಾರ್ ವಿರುದ್ಧ ಕೇಸು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಪ್ರಸವಪೂರ್ವ ಮತ್ತು ಗರ್ಭಪೂರ್ವ ಲಿಂಗಪತ್ತೆ ಕಾಯ್ದೆ ತಿದ್ದುಪಡಿ ಮಾಡುವಂತೆ ಆಗ್ರಹಿಸಿ ಸೆ.೧ರಂದು ಇಂಡಿಯನ್ ರೇಡಿಯೋಲಾಜಿಕಲ್ ಆಂಡ್ ಇಮೇಜಿಂಗ್ ಅಸೋಸಿಯೇಶನ್ ವತಿಯಿಂದ ದೇಶಾದ್ಯಂತ ಎಲ್ಲ ರೀತಿಯ ಸಿಟಿಸ್ಕ್ಯಾನ್, ಎಂಆರ್‌ಐ ಮತ್ತು ಅಲ್ಟ್ರಾ ಸ್ಕ್ಯಾನ್‌ಸೆಂಟರ್‌ಗಳು ಬಂದ್ ನಡೆಸಿ ಪ್ರತಿಭಟಿಸಲಿವೆ ಎಂದು ಡಾ.ರಾಘವೇಂದ್ರ ಭಟ್ ಹೇಳಿದ್ದಾರೆ. ಅಂದು ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ದೈನಂದಿನ ಸ್ಕ್ಯಾನಿಂಗ್ ನಡೆಸುವುದಿಲ್ಲ. ತುರ್ತು ಅನಾರೋಗ್ಯ ಸಂದರ್ಭದಲ್ಲಿ ದೊಡ್ಡ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳಬಹುದು ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಅವರು ಹೇಳಿದ್ದಾರೆ.

ಶ್ರೀಸಿದ್ಧಿವಿನಾಯಕ ಪ್ರತಿಷ್ಠಾನದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ೧೩ನೇ ವರ್ಷದ ಬಂಟ ಕ್ರೀಡೋತ್ಸವದಲ್ಲಿ ಸತತವಾಗಿ ೧೧ನೇ ಬಾರಿಗೆ ಪುತ್ತೂರು ಬಂಟ ಸಂಘದ ಕ್ರೀಡಾಪಟುಗಳು ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರು. ಪ್ರವೀಣ್ ಶೆಟ್ಟಿಯವರು ನಾಯಕತ್ವ ವಹಿಸಿದ್ದರು. ಪ್ರೇಮನಾಥ ಶೆಟ್ಟಿ ಕಾವು, ಪ್ರವೀಣ್ ಶೆಟ್ಟಿ, ಜಯಪ್ರಸಾದ್ ರೈ, ಚಂದ್ರಹಾಸ್ ಶೆಟ್ಟಿ, ಅಶೋಕ್ ಶೆಟ್ಟಿ, ಶರಣ್ ಶೆಟ್ಟಿ, ಮಹೇಶ್ ರೈ ಅಂಕೊತ್ತಿಮಾರು, ಕೀರ್ತನ್ ಶೆಟ್ಟಿ, ಅಂಕಿತ ಶೆಟ್ಟಿ, ಸುಧಾಕರ್ ಶೆಟ್ಟಿ, ಸನ್ಮತ್ ಮೇಲಾಂತ ಉಪಸ್ಥಿತರಿದ್ದರು.

ಸಾಂಪ್ರದಾಯಿಕ ವಿವಾದಿತ ಜಲ್ಲಿಕಟ್ಟು ಕ್ರೀಡೆ ಸುಮಾರು ೫೦೦೦ ವರ್ಷಗಳ ಇತಿಹಾಸ ಹೊಂದಿದೆ ಎಂಬ ಕಾರಣಕ್ಕೆ ಕಾನೂನುಬಾಹಿರವಾಗಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ. ಜಲ್ಲಿಕಟ್ಟು ಕ್ರೀಡೆಗೆ ೫೦೦೦ ವರ್ಷಗಳ ಇತಿಹಾಸವಿದೆ. ಆದ್ದರಿಂದ ಅನುಮತಿ ನೀಡಬೇಕೆಂದು ಆಗ್ರಹಿಸುವುದು ಹಾಸ್ಯಾಸ್ಪದವಾಗಿದೆ. ೧೯೮೯ರಿಂದ ಇಲ್ಲಿಯವರೆಗೆ ಒಂದು ಸಾವಿರಕ್ಕೂ ಅಧಿಕ ಬಾಲ್ಯವಿವಾಹದ ಪ್ರಕರಣಗಳು ಬೆಳಕಿಗೆ ಬಂದಿವೆ. ಹಾಗಂತ ಬಾಲ್ಯವಿವಾಹಕ್ಕೆ ಅನುಮತಿ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದು, ಇದೊಂದು ಸಾಂವಿಧಾನಿಕ ಹಾಗೂ ಶಾಸನಬದ್ಧ ಸಮಸ್ಯೆಯಾಗಿದೆ. ಆದ್ದರಿಂದ ಕಾನೂನಿನ ಮಾನ್ಯತೆ ಪಡೆಯದ ಇಂತಹ ಸಾಂಪ್ರದಾಯಿಕ ಕ್ರೀಡೆಗಳಿಗೆ ಪರವಾನಿಗೆ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.

ಕುಸ್ತಿಪಟು ನರಸಿಂಗ್ ಯಾದವ್ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಾಧ್ಯತೆ ಅಕ್ಷರಶಃ ಮುಗಿದಿದ್ದು, ಕುಸ್ತಿಪಟುವಿಗೆ ಅವರನ್ನು ಸಮರ್ಥಿಸಿ ಕೊಳ್ಳಲು ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಸುಳಿವು ನೀಡಿದ್ದಾರೆ. ಸುಶೀಲ್‌ಕುಮಾರ್ ಅವರನ್ನು ಹಿಂದಿಕ್ಕಿ ರಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದ ನರಸಿಂಗ್ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ನರಸಿಂಗ್ ರಾವ್ ಡೋಪ್ ಪ್ರಕರಣವನ್ನು ವಾಡಾ ಸಂಹಿತೆಯ ಕಠಿಣ ಅನುಷ್ಠಾನದ ಮೂಲಕ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ನಿರ್ವಹಿಸಲಾಗುತ್ತದೆ. ನಾಡಾ ವಾಡಾ ಸಂಹಿತೆಯಡಿ ಸ್ಥಾಪನೆಯಾದ ಸ್ವಯಮಾಧಿಕಾರದ ಸಂಸ್ಥೆಯಾಗಿದ್ದು, ಸ್ವಚ್ಛ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತದೆ ಮತ್ತು ಡೋಪಿಂಗ್ ತಡೆಯುತ್ತದೆ. ನರಸಿಂಗ್ ಪ್ರಕರಣದಲ್ಲಿ ವಾಡಾ ಸಂಹಿತೆ ಅನುಷ್ಠಾನಕ್ಕೆ ತರುವುದನ್ನು ಖಾತರಿ ಮಾಡುತ್ತೇವೆ ಎಂದು ಜುಲೈ ೩೧ರಿಂದ ಆರಂಭವಾಗುವ ರನ್ ಫಾರ್ ಒಲಿಂಪಿಕ್ಸ್ ಕಾರ್ಯಕ್ರಮ ಪ್ರಕಟಿಸುತ್ತಾ ಗೋಯೆಲ್ ಹೇಳಿದ್ದಾರೆ.

ಭಾರತದ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಒಂದೇ ಟೆಸ್ಟ್‌ನಲ್ಲಿ ಶತಕ ಹಾಗೂ ೫ ವಿಕೆಟುಗಳನ್ನು ಉರುಳಿಸಿದ ಸಾಧನೆ ಎರಡು ಬಾರಿ ಮಾಡಿದ್ದಾರೆ. ಹಿಂದೆ  ವಿನೂ ಮಂಕದ (ಇಂಗ್ಲೆಂಡ್ ಎದುರು ೧೯೫೨) ಹಾಗೂ ಪಾಲಿ ಉಮಿಗ್ರಾರಾ (ವೆಸ್ಟ್ ಇಂಡೀಸ್ ಎದುರು ೧೯೬೨), ಒಂದೊಂದು  ಬಾರಿ, ಈ ಸಾಧನೆ ಮಾಡಿದ್ದರು.ಅಶ್ವಿನ್ ಇಂದಿನ ತನಕ ೩೩ ಟೆಸ್ಟ್‌ಗಳಲ್ಲಿ ೧೩೧೭ ರನ್ನ್  ಹಾಗೂ ೧೮೩ ವಿಕೆಟುಗಳನ್ನು ಪಡೆದಿದ್ದಾರೆ.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತದ ಅಭಿನವ ಬಿಂದ್ರಾ ಶೂಟಿಂಗ್ ವಿಭಾಗದಲ್ಲಿ ಬಂಗಾರದ ಪದಕ ಗೆದ್ದಿದ್ದರು.ಈ ಭಾರಿಯ ರಿಯೋ ಒಲಿಂಪಿಕ್ಸ್‌ನಲ್ಲಿ, ನನ್ನ ಕ್ರೀಡಾ ಜೀವನದ ಅತ್ಯುತ್ತಮ ಸಾಧನೆ ತೋರಿಸಲಿದ್ದೇನೆ ಇದಕ್ಕಾಗಿ ಎಲ್ಲಾ ತಯಾರಿ ನಡೆಸಿದ್ದೇನೆ ಎಂಬುದಾಗಿ ಹೇಳಿದ್ದಾರೆ.

ಶ್ರೀಲಂಕಾದಲ್ಲಿ ನಿನ್ನೆ ಆರಂಭವಾದ ಪ್ರಥಮ ಟೆಸ್ಟ್‌ನ ಟಿ-ವಿರಾಮದ ಸಮಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ೨ ವಿಕೆಟುಗಳಿಗೆ ೬೬ ರನ್ನುಗಳನ್ನು ಮಾಡಿದೆ.ಇದಕ್ಕೆ ಮೊದಲು ಶ್ರೀಲಂಕಾ ಬರೇ ೧೧೭ ರನ್ನುಗಳಿಗೆ ಆಲ್-ಔಟಾಗಿದೆ.ಆಸ್ಟ್ರೇಲಿಯಾದ  ಹಾಜಲವುದ್(೩), ಲೈಯನ್ (೨) ಹಾಗೂ ಜಕೀಪ್(೨) ವಿಕೆಟ್‌ಗಳನ್ನು  ಪಡೆದುಕೊಂಡಿದ್ದಾರೆ.

ಮಾಂಚೆಸ್ಟರ್‌ನಲ್ಲಿ ನಡೆದ ೨ನೇಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪಾಕಿಸ್ಥಾನವನ್ನು ಬೃಹತ್ ೩೩೦ ರನ್ನುಗಳ ಅಂತರದಲ್ಲಿ ಸೋಲಿಸಿದೆ.ಹೀಗಾಗಿ ೪ ಟೆಸ್ಟ್‌ಗಳ ಸರಣಿ, ಈಗ ೧-೧ ಸಮಬಲದಲ್ಲಿ ಇದೆ. ೩ನೇಯ ದಿನದ ಆಟವು ಮುಕ್ತಾಯ ಆದಾಗ ಇಂಗ್ಲೆಂಡ್ ೧ ವಿಕೆಟು ನಷ್ಟಕ್ಕೆ ೯೮  ರನ್ನುಗಳನ್ನು ಗಳಿಸಿತ್ತು. ೪ನೇಯ ದಿನ ಆಟ ಮುಂದುವರಿಸಿ, ೧ ವಿಕೇಟಿಗೆ ೧೭೩ ರನ್ನುಗಳಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಡಿಕ್ಲೇರ‍್ಡ್ ಮಾಡಿಕೊಂಡಿತು. ನಾಯಕ ಕೌರ್ (೭೩) ಹಾಗೂ ರೂಟ (೭೧) ಅಜೇಯರಾಗಿ ಉಳಿದರು. ಜಯಗಳಿಸಲು ೫೬೫ ರನ್ನುಗಳ ಗುರಿ ಇದ್ದ ಪಾಕಿಸ್ಥಾನ, ೨೩೪ ರನ್ನುಗಳಿಗೆ ಆಲ್ ಔಟಾಗಿ, ಸೋಲನ್ನು ಪಡೆಯಿತು. ಹಫೀಜ (೪೨), ಶಫೀಕ್ (೩೯) ಬಿಟ್ಟರೆ ಉಳಿದ  ಯಾರೂ ಹೆಚ್ಚು ಬ್ಯಾಟಿಂಗ್ ಮಾಡಲಿಲ್ಲ.ಇಂಗ್ಲೆಂಡ್ ಪರವಾಗಿ ಆಂಡರ್‌ಸನ್ (೩/೪೧),  ಮೊಯಿನ್‌ಆಲಿ (೩/೮೮),  ವೋಕ್ಸ್ (೩/೪೧) ಜಯಕ್ಕೆ ಕಾರಣರಾದರು. ಸ್ಕೋರು: ಪ್ರಥಮ ಇನ್ನಿಂಗ್ಸ್: ಇಂಗ್ಲೆಂಡ್:೮ ವಿಕೆಟಿಗೆ ೫೮೯ ಡಿಕ್ಲೇರ‍್ಡ್  ಪಾಕಿಸ್ತಾನ:೧೯೮  ೨ನೇಯ ಇನ್ನಿಂಗ್ಸ್ :ಇಂಗ್ಲೆಂಡ್: ೧ ವಿಕೆಟಿಗೆ ೧೭೩ ಡಿಕ್ಲೇರ‍್ಡ್  ಪಾಕಿಸ್ತಾನ:೨೩೪.

ಜಾಗತಿಕ ಆನ್‌ಲೈನ್ ಶಾಪಿಂಗ್ ಜಬಾಂಗ್‌ನ್ನು ಫ್ಲಿಪ್ ಕಾರ್ಟ್ ಸ್ವಾಧೀನದ ಮಿಂತ್ರಾ ಮಂಗಳವಾರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಜಗತ್ತಿನಲ್ಲೇ ಅತ್ಯಂತ ಖ್ಯಾತಿ ಪಡೆದ ಆನ್‌ಲೈನ್ ಶಾಪಿಂಗ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಿಂತ್ರಾಗೆ ಜಬಾಂಗ್ ಸೇರ್ಪಡೆಯಾಗುವ ಮೂಲಕ ಮಾರಾಟ ಕೇಂದ್ರಕ್ಕೆ ಇನ್ನಷ್ಟು ಬಲ ಬಂದಿದೆ. ಆದರೆ ಇದನ್ನು ಎಷ್ಟು ಮೊತ್ತಕ್ಕೆ ಖರೀದಿಸಲಾಗಿದೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ. ೨೦೧೪ರಲ್ಲಿ ಫ್ಲಿಪ್‌ಕಾರ್ಟ್ ಮಿಂತ್ರಾವನ್ನು ಖರೀದಿಸಿತ್ತು. ಇದೀಗ ಜಬಾಂಗ್‌ನ್ನು ಕೂಡ ತನ್ನ ತೆಕ್ಕೆಗೆ ಹಾಕಿಕೊಂಡು ವ್ಯಾಪಾರ-ವ್ಯವಹಾರಗಳನ್ನು ಮತ್ತಷ್ಟು ವಿಸ್ತರಿಸುವಲ್ಲಿ ಮುಂದಾಗಿದೆ.

ಶಸ್ತ್ರಾಸ್ತ್ರ ಸಹಿತ ಪೊಲೀಸರ ಬಿಗಿ ಭದ್ರತೆಯ ನಡುವೆ ಪಾಕಿಸ್ತಾನದ ಅತೀ ಹೆಚ್ಚು ಜನನಿಭಿಡ ನಗರ ಕರಾಚಿಯಲ್ಲಿ ಮೂರು ದಿನಗಳ ಪೋಲಿಯೋ ಲಸಿಕೆ ಅಭಿಯಾನವನ್ನು ಮಂಗಳವಾರ ಆರೋಗ್ಯ ಕಾರ್ಯಕರ್ತರು ಪ್ರಾರಂಭಿಸಿದ್ದಾರೆ. ಪೋಲಿಯೋ ಲಸಿಕೆ ಹಾಕಲು ಈ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಐದು ವರ್ಷದ ಕೆಳಗಿನ ಮಕ್ಕಳಿಗೆ ಲಸಿಕೆ ಹಾಕಿದರು ಎಂದು ವರದಿಯಾಗಿದೆ. ಪಾಕಿಸ್ತಾನದಲ್ಲಿ ಪೋಲಿಯೋ ಲಸಿಕೆ ಹಾಕುವ ಆರೋಗ್ಯ ಕಾರ್ಯಕರ್ತರ ಮೇಲೆ ಈ ಹಿಂದೆ ಇಸ್ಲಾಮಿಕ್ ಭಯೋತ್ಪಾದಕರು ದಾಳಿ ಮಾಡಿದ ಹಿನ್ನಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿತ್ತು. ಕ್ವೆಟ್ಲಾ ನಗರದಲ್ಲಿ ಜನವರಿಯಲ್ಲಿ ಪೋಲಿಯೋ ಕೇಂದ್ರ, ಮೇಲೆ ನಡೆದ ದಾಳಿಯಲ್ಲಿ ೧೪ ಜನರು ಹತ್ಯೆಯಾಗಿದ್ದರು.

ಟೋಕಿಯೋ ಹೊರವಲಯದಲ್ಲಿರುವ ಮನೋರೋಗಿಗಳ ಆಶ್ರಯ ಧಾಮವೊಂದರ ಮಾಜಿ ಉದ್ಯೋಗಿಯೋರ್ವ ಹರಿತವಾದ ಚೂರಿಯನ್ನು ಝಳಪಿಸುತ್ತಾ ೧೯ ಮಂದಿಯನ್ನು ಇರಿದು ಕೊಂದು, ಇತರ ೨೫ ಮಂದಿಯನ್ನು ಗಾಯಗೊಳಿಸಿರುವ ಘಟನೆ ವರದಿಯಾಗಿದೆ. ಈ ಘಟನೆಯು ಜಪಾನಿನಲ್ಲಿ ಕಳೆದ ಹಲವು ದಶಕಗಳಲ್ಲಿ ನಡೆದಿರುವ ಸಾಮೂಹಿಕ ಹತ್ಯಾ ಘಟನೆಗಳಲ್ಲೇ ಅತ್ಯಂತ ಘೋರ ಎನಿಸಿದೆ. ಇರಿತದ ದಾಳಿಗೆ ಸಿಲುಕಿ ಮೃತಪಟ್ಟಿರುವ ೧೯ ಮಂದಿಯಲ್ಲಿ ೯ ಪುರುಷರು ಹಾಗೂ ೧೦ ಮಹಿಳೆಯರು ಸೇರಿದ್ದಾರೆ. ಇವರ ವಯಸ್ಸು ೧೮ರಿಂದ ೭೦ರ ನಡುವಿನಲ್ಲಿದೆ. ಇತರ ೨೫ ಮಂದಿ ಗಾಯಗೊಂಡಿದ್ದಾರೆ.

ದ್ವೀಪರಾಷ್ಟ್ರ ಪಪುವಾ ನ್ಯೂಗಿನಿಯಲ್ಲಿ ಮಂಗಳವಾರ ಬೆಳಗಿನ ಜಾವ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ ೬.೩ ರಷ್ಟು ತೀವ್ರತೆ ದಾಖಲಾಗಿದೆ. ಅಮೆರಿಕ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರದ ವರದಿಯಂತೆ ಸಮುದ್ರದ ೬.೬ ಕಿ ಮೀ ಆಳದಲ್ಲಿ ಕಂಪನವಾಗಿದ್ದು, ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಪೆಸಿಫಿಕ್ ಸಮುದ್ರದಲ್ಲಿರುವ ದ್ವೀಪ ರಾಷ್ಟ್ರ ಪಪುವಾ ನ್ಯೂಗಿನಿಯಲ್ಲಿ ಹವಾಯಿ ಮೂಲದ ಸುನಾಮಿ ಎಚ್ಚರಿಕೆ ಸಂಸ್ಥೆ ಯಾವುದೇ ಸುನಾಮಿ ಮುನ್ಸೂಚನೆ ನೀಡಿಲ್ಲ ಎನ್ನಲಾಗಿದೆ. ಆಸ್ಟ್ರೇಲಿಯ ಖಂಡ ರಾಷ್ಟ್ರಗಳಲ್ಲಿ ಭೂಕಂಪ ಸಾಮಾನ್ಯವಾಗಿದ್ದು, ಆದ್ದರಿಂದ ಈ ಪ್ರದೇಶಗಳನ್ನು ರಿಂಗ್ ಆಫ್ ಫೈರ್ ಎಂದು ಕರೆಯಲಾಗುತ್ತದೆ.

ಯಾವುದೇ ಐಸ್‌ಕ್ರೀಮ್ ಆದ್ರೂ ಫ್ರಿಡ್ಜ್ನಿಂದ ಹೊರಗೆ ತೆಗೆದ ಕೆಲವೇ ನಿಮಿಷದಲ್ಲೇ ಕರಗಿಹೋಗುತ್ತೆ. ಆದರೆ ಇಲ್ಲೊಬ್ಬ ಆಹಾರ ತಜ್ಞ ಎಷ್ಟೇ ಬಿಸಿಲಿದ್ದರೂ ಕರಗದೇ ಇರುವಂತಹ ಐಸ್‌ಕ್ರೀಮ್ ತಯಾರಿಸಿದ್ದಾರೆ. ನ್ಯೂಯಾರ್ಕ್‌ನ ರಾಬ್ ಕೊಲಿಗೊನ್ ಅನ್ನೋರು ಈ ಐಸ್‌ಕ್ರೀಮ್ ತಯಾರಿಸಿದ್ದು ಇದಕ್ಕೆ ಗ್ಯಾಸ್ಟ್ರೋನಾಟ್ ಅಂತ ಹೆಸರಿಡಲಾಗಿದೆ. ಈ ಐಸ್‌ಕ್ರೀಮ್ ನೋಡಲು ಬಿಸ್ಕೆಟ್‌ನಂತೆ ಕಾಣುತ್ತಿದೆ. ಆದರೆ ಇದನ್ನ ತಿಂದ್ರೆ ಐಸ್‌ಕ್ರೀಮ್ ಸವಿದ ಅನುಭವವಾಗುತ್ತದೆಯಂತೆ.

ರುಡ್ಯಾರ್ಗ್ ಕಿಪ್ಲಿಂಗ್‌ನ ಮೌಗ್ಲಿಗೆ ಹೋಲುವ ೧೦ ವರ್ಷದ ಬಾಲಕನೊಬ್ಬ ಸುಮಾರು ಎರಡು ವರ್ಷವಾಗಿರುವಾಗಿನಿಂದಲೂ ಬೀದಿ ನಾಯಿ  ಹಾಲು ಕುಡಿಯುತ್ತಿದ್ದಾನೆ. ಮೂಕ ಬಾಲಕ ಮೋಹಿತ್ ಕುಮಾರ್ ಪೋಷಕರು ಮಗನ ಈ ಚಟ ಬಿಡಿಸಲು ಶತಾಯ ಗತಾಯ ಯತ್ನಿಸುತ್ತಿದ್ದಾರೆ. ಈ ಬಾಲಕ ಸುಮಾರು ಎರಡು ವರ್ಷಗಳಿರುವಾಗಲೇ ತಾಯಿ ಎದೆ ಹಾಲು ಕುಡಿಯೋದನ್ನು ಬಿಟ್ಟಿದ್ದ. ಆಮೇಲೆ ಎರಡು ವರ್ಷಗಳ ನಂತರ ಯಾವಾಗಲೋ ಒಮ್ಮೆ ಆಡುವಾಗ ನಾಯಿ ಹಾಲನ್ನು ಕುಡಿದವನು, ಇನ್ನೂ ಮುಂದುವರಿಸಿದ್ದಾನೆ. ಈ ಅಭ್ಯಾಸವನ್ನು ಬಿಡಿಸಲಾಗದ ಬಡ ಪೋಷಕರು ನೋವು ಅನುಭವಿಸುತ್ತಿದ್ದಾರೆ. ಬಾಲಕನ ಈ ಚಟಕ್ಕೆ ಬೀದಿ ನಾಯಿಗಳು ಸಹಕರಿಸುತ್ತಿವೆ.

ನಿರೀಕ್ಷೆಯಂತೆ ಕಾರ್ಯನಿರ್ವಹಿಸದ ಕೇಂದ್ರ ಸರಕಾರಿ ನೌಕರರಿಗೆ ವಾರ್ಷಿಕ ವೇತನ ಹೆಚ್ಚಳವಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ. ಭಡ್ತಿಗೆ ಕೇಂದ್ರ ಸರಕಾರಿ ನೌಕರರ ಕಾರ್ಯಕ್ಷಮತೆಯನ್ನು ಗುಡ್ ಬದಲು ವೆರಿಗುಡ್ ಇರಬೇಕೆಂದು ನಿರ್ಧರಿಸಲಾಗಿದೆ, ಎಂದು ಏಳನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ವಿತ್ತ ಸಚಿವಾಲಯ ನೀಡಿದ ಆದೇಶದಲ್ಲಿ ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಜಾಹೀರಾತು ಎಂಬುದು ಎಲ್ಲಾ ಎಲ್ಲೆಗಳನ್ನು ದಾಟಿ ಬೆಳೆಯುತ್ತಿದ್ದು, ಹೊಸ ಆಲೋಚನೆಗಳು ಅಲ್ಲಿ ಸ್ಥಾನ ಪಡೆದಿವೆ. ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವುದರೊಂದಿಗೆ ತಮ್ಮ ವಸ್ತುವನ್ನು ಬ್ರ್ಯಾಂಡಿಂಗ್ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಹೀಗೆ ಪ್ರವಾಹ, ಮಳೆ ನೀರು ತುಂಬಿಕೊಂಡರೆ ಜನ ಸಾಮಾನ್ಯರಿಗೆ ಸಹಾಯವಾಗಲಿ ಹಾಗೂ ತಮ್ಮ ಬ್ರಾಂಡ್ ಪ್ರಮೋಟ್ ಮಾಡುವ ಸಲುವಾಗಿ ಏರ್ ಸೆಲ್ ಕಂಪೆನಿ ತನ್ನ ಜಾಹೀರಾತು ಹೊಲ್ಡಿಂಗ್ನಲ್ಲಿ ಲೈಫ್ ಬೋಟ್‌ವೊಂದನ್ನು ನೇತು ಹಾಕಿತ್ತು. ತುರ್ತು ಸಮಯದಲ್ಲಿ ಅದನ್ನು ಬಳಸಿಕೊಳ್ಳುವಂತೆ ಮನವಿ ಮಾಡಿತ್ತು. ಆದರೆ ಜನರು ಅದನ್ನೇ ಕದ್ದಿದ್ದಾರೆ. ಮಾನ್ಸೂನ್ ಶುರುವಾಗಿದೆ, ನಮ್ಮ ನೆಟ್‌ವರ್ಕ್‌ನೊಂದಿಗೆ ಯಾನಿಸಿ ಎನ್ನುವ ಘೋಷ ವಾಕ್ಯದೊಂದಿಗೆ ತುರ್ತು ಸಮಯದಲ್ಲಿ ಸಹಾಯಕ್ಕಾಗಿ ಬಳಸಿ ಎಂದು ೨.೫ ಲಕ್ಷದ ಬೋಟೊಂದನ್ನು ನೇತು ಹಾಕಿತ್ತು. ಆದರೆ ಲೈಫ್ ಬೋಟನ್ನೇ ಕಳ್ಳತನ ಮಾಡಲಾಗಿದೆ. ಈ ಕುರಿತು ಏರ್‌ಸೆಲ್ ಕಂಪನಿ ಕೇಸ್ ದಾಖಲು ಮಾಡಿದೆ.

ಸೇನಾಪಡೆಗಳ ದೌರ್ಜನ್ಯದ ವಿರುದ್ಧ ಕಳೆದ 16 ವರ್ಷಗಳಿಂದ ಸುದೀರ್ಘವಾಗಿ ಅಮರಣಾಂತ ಉಪವಾಸ ಸತ್ಯಾಗ್ರಹದ ಹೋರಾಟ ನಡೆಸುತ್ತಿದ್ದ ಮಣಿಪುರದ ಐರನ್ ಲೇಡಿ ಎಂದೇ ಹೆಸರಾಗಿದ್ದ ಐರೋಮ್ ಶರ್ಮಿಳಾ ಇದೀಗ ತಮ್ಮ ಉಪವಾಸ ಸತ್ಯಾಗ್ರಹವನ್ನು ಆಗಸ್ಟ್ ೯ರಂದು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಅಲ್ಲದೇ ಆಕೆ ಮದುವೆಯಾಗಲು ಬಯಸಿದ್ದು, ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ನನ್ನ ಹೋರಾಟಕ್ಕೆ ಸರ್ಕಾರ ಯಾವುದೇ ಭರವಸೆ ನೀಡಿಲ್ಲ, ಇದೀಗ ನಾನು ನನ್ನ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿ ಚುನಾವಣೆಗೆ ಸ್ಪರ್ಧಿಸಿ ಹೋರಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ವಿಶ್ವಾಸ ಹೊಂದಿರುವುದಾಗಿ ಸುದ್ದಿ ಸಂಸ್ಥೆಗೆ ಐರೋಮ್ ತಿಳಿಸಿದ್ದಾರೆ.

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಕೆಲವು ಕಡೆಗಳಲ್ಲಿ ಅಂತ್ಯಗೊಂಡಿದ್ದು, ಕರ್ತವ್ಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಐವರನ್ನು ವಜಾಗೊಳಿಸಲಾಗಿದೆ. ಓರ್ವ ಕಂಡಕ್ಟರ್ ಸೇರಿದಂತೆ ನಾಲ್ಕು ಮಂದಿ ಚಾಲಕರನ್ನು ವಜಾಗೊಳಿಸಿ ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಡಿಸಿ ಅನಿಲ್ ಆದೇಶ ಹೊರಡಿಸಿದ್ದಾರೆ. ರೇವಣ್ಣಪ್ಪ, ಸುರೇಶ್, ಸಕಲೇಶ್‌ಪುರ ಡಿಪೋದ ಜಗದೀಶ್, ಚಿಕ್ಕಮಗಳೂರು ಡಿಪೋದ ಹೊನ್ನಪ್ಪ, ಪೆದ್ದಣ್ಣ ಇವರನ್ನು ಕರ್ತವ್ಯದಿಂದ ಡಿಸ್‌ಮಿಸ್ ಮಾಡಲಾಗಿದೆ.

ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ನನ್ನ ಬಗ್ಗೆ ಟೀಕೆ ಮಾಡಿರುವುದಕ್ಕೆ ಬೇಸರವಿಲ್ಲವೆಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ. ನನ್ನ ಬಗೆಗಿನ ಟೀಕೆಗೆ ಬೇಸರವಿಲ್ಲ, ಆದರೆ ಹಿರಿಯ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ಎ.ಕೆ. ಆಂಟನಿ ಸೇರಿದಂತೆ ಹಲವು ಹಿರಿಯ ನಾಯಕರನ್ನು ಟೀಕಿಸಿದ್ದಕ್ಕೆ ನೋವಾಗಿದೆಯೆಂದು ಸಚಿವ ದೇಶಪಾಂಡೆ ತಿಳಿಸಿದ್ದಾರೆ. ಮಾರ್ಗರೇಟ್ ಆಳ್ವ ಅವರು ತಮ್ಮ ರಾಜಕೀಯ ಜೀವನದಲ್ಲಿ ಒಮ್ಮೆ ಮಾತ್ರ ಚುನಾವಣೆಯಲ್ಲಿ ವಿಜಯಿಯಾಗಿದ್ದರು, ಆಗ ಅವರ ಜೊತೆ ನಾನಿದ್ದೆ, ಇದನ್ನು ಆಳ್ವ ಅವರು ನೆನಪಿನಲ್ಲಿಡಬೇಕೆಂದು ದೇಶಪಾಂಡೆಯವರು ಹೇಳಿದ್ದಾರೆ.

ಸಾರಿಗೆ ನೌಕರರ ಸಮಸ್ಯೆಗಳನ್ನು ಬೇಗ ಪರಿಹರಿಸಿ. ಇಲ್ಲವಾದರೆ ಸಮಸ್ಯೆ ಜಟಿಲವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜ್ಯ ಸರಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನೌಕರರು ಕೈಗೊಂಡಿರುವ ರಾಜ್ಯಾದ್ಯಂತ ಮುಷ್ಕರ ಎರಡನೆಯ ದಿನಕ್ಕೆ ಕಾಲಿಟ್ಟಿದೆ. ಇದರಿಂದ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ರಾಜ್ಯ ಸರಕಾರ ಸಾರಿಗೆ ನೌಕರರ ಸಮಸ್ಯೆಗಳನ್ನು ಬೇಗನೆ ಪರಿಹರಿಸಬೇಕು. ಇಲ್ಲವಾದರೆ ಸಮಸ್ಯೆ ಜಟಿಲವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದು, ಇದರಿಂದಾಗಿ ಪ್ರಯಾಣಿಕರು ಪರಿತಪಿಸುವಂತಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಿಳಿಸಿದ್ದಾರೆ.

ಜೆಡಿಎಸ್ ಭಿನ್ನಮತೀಯ ಶಾಸಕರಿಗೆ ಹಣದ ಆಮಿಷ ನೀಡಿರುವ ವಿಚಾರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನನ್ನನ್ನು ಕೆಣಕದಿದ್ದರೆ ನಿದ್ದೆ ಬರುವುದಿಲ್ಲ ಎಂದು ಕಾಣಿಸುತ್ತದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನನ್ನನ್ನು ಕೆಣಕದಿದ್ದರೆ ನಿದ್ರೆ ಬರುವುದಿಲ್ಲ ಎಂದು ಕಾಣಿಸುತ್ತದೆ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ ಎಂಬಂತೆ ಅವರ ಬುದ್ದಿ ಎಂದು ಲೇವಡಿ ಮಾಡಿದ್ದು, ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣನವರು ಸಹ ನನ್ನ ಆತ್ಮೀಯ ಸ್ನೇಹಿತರು ಎಂದು ತಿಳಿಸಿದ್ದಾರೆ.

ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿ ಸಲ್ಲಿಸಿದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿ ಜೆಡಿಎಸ್ ಮುಖಂಡ ಚಂದ್ರಶೇಖರ್ ಅವರು ಹೈಕೋರ್ಟ್ ರೀಟ್ ಅರ್ಜಿಯನ್ನು ಸಲ್ಲಿಸಿದ್ದರು. ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಕುರಿತು ಈಗಾಗಲೇ ನ್ಯಾಯಾಂಗ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ, ಜೆಡಿಎಸ್ ಮುಖಂಡ ಚಂದ್ರಶೇಖರ್ ಸಲ್ಲಿಸಿದ ರೀಟ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಪುಟಗಳಿಂದ ಜನರ ಮನೆ ಬಾಗಿಲಿಗೆ ತಲುಪುತ್ತಿರುವುದು ಸಮುದಾಯ ಪತ್ರಿಕೋದ್ಯಮದಲ್ಲೊಂದು ಕ್ರಾಂತಿ.ಎಂಬಿಬಿಎಸ್ ವೈದ್ಯರೊಬ್ಬರ ಹೋರಾಟದ ಫಲವಾಗಿ ಪುತ್ತೂರಿನಲ್ಲಿ ಸುದ್ದಿಬಿಡುಗಡೆ ದಿನಪತ್ರಿಕೆಯಾಗಿ, ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ವಾರಪತ್ರಿಕೆಯಾಗಿ ಹೊರಬರುತ್ತಿದೆ. ಇವು ಕೇವಲ ತಾಲೂಕು ಮಟ್ಟದ ಪತ್ರಿಕೆ. ತಾಲೂಕು ಮತ್ತು ತಾಲೂಕಿನವರಾಗಿದ್ದು ಜಗತ್ತಿನಾದ್ಯಂತ ಇರುವ ಮಂದಿಯ ಸುದ್ದಿ, ಮಾಹಿತಿ ಪತ್ರಿಕೆಯ ವ್ಯಾಪ್ತಿ ಎನ್ನುತ್ತಾರೆ ಡಾ.ಯು.ಪಿ.ಶಿವಾನಂದ. ಆದರೆ, ಯಾವುದೇ ರಾಜ್ಯ ಮಟ್ಟದ ಪತ್ರಿಕೆಗಿಂತ ಹೆಚ್ಚಿನ ಪ್ರಸಾರವನ್ನು ಆಯಾಯ ತಾಲೂಕುಗಳಲ್ಲಿ ಹೊಂದಿದೆ ಎನ್ನುವುದು ಗಮನಾರ್ಹ.

ಊರು, ಪರವೂರು, ದೇಶ ವಿದೇಶಗಳ ಸುದ್ದಿಯೊಂದಿಗೆ, ನಮ್ಮ ದಿನ ನಿತ್ಯದ ಬಳಕೆಗೆ ಬೇಕಾದ ಅತ್ಯವಶ್ಯಕ ಮಾಹಿತಿಯನ್ನು ನೀಡುತ್ತಿರುವ ಪತ್ರಿಕೆ ಇದಾಗಿದೆ. ಶಿಕ್ಷಣದಿಂದ ಹಿಡಿದು ಪ್ರವಾಸೋದ್ಯಮ, ಕೃಷಿ, ವಾಣಿಜ್ಯ ಇತ್ಯಾದಿ ಎಲ್ಲ ಕ್ಷೇತ್ರಗಳ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಸುದ್ದಿ ಪ್ರಮುಖ ಪಾತ್ರ ವಹಿಸುತ್ತಿದೆ. ಯಾವುದೇ ಪ್ರದೇಶದ ಸಮಗ್ರ ಬೆಳವಣಿಗೆಯಲ್ಲಿ ‘ಮಾಹಿತಿ’ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದು ಸುದ್ದಿ ಸಮೂಹದ ನಂಬಿಕೆ.

ಸುದ್ದಿ ಬಿಡುಗಡೆ ನಡೆದು ಬಂದ ದಾರಿ 

 
ಸುದ್ದಿ ಆರಂಭ :
1985 ರಲ್ಲಿ ಸುಳ್ಯದ ಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಂಬಿಬಿಎಸ್ ಓದಿದ ವೈದ್ಯರೊಬ್ಬರು ಗ್ರಾಹಕರ ವೇದಿಕೆಯ ಮೂಲಕ ಹಚ್ಚಿದ ಹೋರಾಟದ ಕಿಡಿ ಬಳಿಕ ಕರಪತ್ರದ ಮೂಲಕ ಜನಮೆಚ್ಚುಗೆ ಪಡೆದಾಗ ಹೋರಾಟಕ್ಕೆ ತೋರಿದ ಮುಂದಿನ ದಿಕ್ಕು ಇಂದಿನ ಸುದ್ದಿ ಪತ್ರಿಕೆ. ಅಂದು ಸುಳ್ಯದಲ್ಲಿ ತಮ್ಮ ಸ್ವಂತ ವಾಹನ ಮತ್ತು ಸ್ವಂತ ಖರ್ಚಿನಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಜನಬೆಂಬಲ ಪಡೆದು ಡಾ. ಯು.ಪಿ ಶಿವಾನಂದ ಅವರು ಪತ್ರಿಕೆಯನ್ನು ಮುನ್ನೆಡೆಸಿದರು.

ಎರಡನೇ ಹಂತವಾಗಿ 1986 ರಲ್ಲಿ ಬೆಳ್ತಂಗಡಿಯಲ್ಲಿ ಸುದ್ದಿ ಪತ್ರಿಕೆ ಆರಂಭಿಸಿದರು. ಈ ಎರಡೂ ಕಡೆಗಳಲ್ಲಿ ವಾರ ಪತ್ರಿಕೆಯಾಗಿ ಆರಂಭವಾದ ಸುದ್ದಿ ಎರಡೂ ಕಡೆಗಳಲ್ಲಿ ಯಶಸ್ಸು ಕಂಡಿತು. ಮುಂದಿನ ಹಂತವಾಗಿ ಸೆ.4, 1987ರಲ್ಲಿ ಪುತ್ತೂರಲ್ಲಿ ಸುದ್ದಿ ದಿನ ಪತ್ರಿಕೆಯಾಗಿ ಆರಂಭಗೊಂಡಿತು. ಕಪ್ಪು ಬಿಳುಪಿನಲ್ಲಿ ಆರಂಭವಾದ ಸುದ್ದಿ ಅಂದು ಕೇವಲ ಎರಡು ಪುಟಗಳಲ್ಲಿ ಇತ್ತು. ಚಿಕ್ಕ ಕ್ರೌನ್ ಸೈಜ್ ನಲ್ಲಿ ಸ್ಥಳೀಯ ಟ್ರೆಡಲ್ ಪ್ರೆಸ್ಸಿನಲ್ಲಿ ಮುದ್ರಣಗೊಳ್ಳುತ್ತಿದ್ದ ಪತ್ರಿಕೆ ಆ ನಂತರದ ದಿನಗಳಲ್ಲಿ ತನ್ನ ಗಾತ್ರ ಹಾಗೂ ಪುಟಗಳಲ್ಲಿ ಏರಿಕೆಯನ್ನು ಕಂಡುಕೊಂಡಿತು. ಅಂದಿನ ಪತ್ರಿಕೆಯ ಬೆಲೆ ಕೇವಲ 10 ಪೈಸೆಯಾಗಿತ್ತು.

ಪುತ್ತೂರು, ಮಂಗಳೂರು, ಸುಳ್ಯ, ಬೆಳ್ತಂಗಡಿ, ಕೊಡಗು ಮತ್ತು ಬೆಂಗಳೂರಿನಲ್ಲಿ ನೂರಾರು ಮಂದಿಗೆ ಖಾಯಂ ಆದಾಯದ ಉದ್ಯೋಗ ಕಲ್ಪಿಸಿರುವ ಶಿವಾನಂದ ಅವರ ಪತ್ರಿಕೆಯ ಸಾಧನೆ ಅಧ್ಯಯನಕ್ಕೆ ಅರ್ಹವಾದ ವಿಚಾರ. ಪತ್ರಿಕೋದ್ಯಮ, ಗ್ರಾಮೀಣಾಭಿವೃದ್ಧಿ ಮತ್ತು ವಾಣಿಜ್ಯ ಆಡಳಿತದ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕಾದ ಜನಪರ ಉದ್ಯಮ ಸುದ್ದಿಬಿಡುಗಡೆ ಮಾಧ್ಯಮ ಸಮೂಹ ಸಂಸ್ಥೆ.

ಯಾವುದೇ ರಾಜಕೀಯ ಸಂಘಟನೆ, ಸಿದ್ಧಾಂತಗಳಿಂದ ದೂರವಾಗಿದ್ದು ನಿಜಾರ್ಥದಲ್ಲಿ ಪತ್ರಿಕೆಯನ್ನು ನಿಷ್ಪಕ್ಷಪಾತವಾಗಿ ನಡೆಸಿಕೊಂಡು ಬರುತ್ತಿರುವುದು ಸುದ್ದಿ ಬಿಡುಗಡೆಯ ಇನ್ನೊಂದು ವೈಶಿಷ್ಟ್ಯ.

ಪತ್ರಿಕೆಯಲ್ಲೇನಿದೆ :

ಇಂದಿನ ಕ್ರೈಮ್, ಸೆಕ್ಸ್, ಕ್ರಿಕೆಟ್, ಕುಟುಂಬ ಕಲಹ ವೈಭವೀಕರಣ ಪತ್ರಿಕೋದ್ಯಮದಿಂದ ಸಂಪೂರ್ಣ ವಿಭಿನ್ನವಾಗಿ, ಜಾಹಿರಾತು ಆಧಾರಿತ ಸುದ್ದಿ ಪ್ರಕಟಣೆ ಮಾದರಿಯನ್ನು ಅನುಕರಿಸದೆ ವಿಭಿನ್ನವಾಗಿದೆ ಸುದ್ದಿಬಿಡುಗಡೆ. ಒಂದು ಪತ್ರಿಕೆ ಸಮೃದ್ಧವಾಗುವುದು ಆ ಪತ್ರಿಕೆಯಲ್ಲಿರುವ ಮಾಹಿತಿ ಮತ್ತು ಸುದ್ದಿಯಿಂದ. ಹಣ ಕೊಟ್ಟು ಪತ್ರಿಕೆ ಪಡೆಕೊಂಡ ಗ್ರಾಹಕನಿಗೆ ಆ ಪತ್ರಿಕೆಯಿಂದ ಒಂದಷ್ಟು ಲಾಭ ಸಿಗಬೇಕು ಆಗ ಮಾತ್ರ ಪತ್ರಿಕೆಯ ಉದ್ದೇಶ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಸುದ್ದಿ ಪತ್ರಿಕೆಯಲ್ಲಿ ಏನಿದೆ ಎಂದು ಕೇಳುವ ಬದಲು ಏನಿಲ್ಲ ಎಂದು ಪ್ರಶ್ನಿಸುವುದು ಲೇಸು.

ಹುಟ್ಟು ಹಬ್ಬದಿಂದ ಹಿಡಿದು ಮರಣದವರೆಗೆ, ಶುಭ ವಿವಾಹ ಫೋಟೋ ಸಮೇತ ವರದಿಗಳು, ಪ್ರಶಸ್ತಿಗಳು, ವರ್ಗಾವಣೆ ಪದೋನ್ನತಿ, ನೇಮಕ, ಪದಾಧಿಕಾರಿ ಆಯ್ಕೆ, ವಾರದಲ್ಲಿ ಎಲ್ಲೆಲ್ಲಿ ಏನೇನು ಕಾರ್ಯಕ್ರಮಗಳಿವೆ ಎಂಬುದಕ್ಕೆ ಈ ದಿನದ ಕಾರ್ಯಕ್ರಮ, ಅಧಿಕಾರಿಗಳ ಮಾಹಿತಿ, ಇಲಾಖೆಯಲ್ಲಿ ದೊರೆಯುವ ಮಾಹಿತಿ ಇತ್ಯಾದಿಗಾಗಿ ಇಲಾಖಾ ಮಾಹಿತಿ, ಜನಪ್ರತಿನಿಧಿಗಳ ವಾರದ ಕಾರ್ಯಕ್ರಮ, ಜಾಗ ಮಾರಾಟ ಖರೀದಿ ಇತ್ಯಾದಿ ಮಾಹಿತಿ, ಶೈಕ್ಷಣಿಕ ಉದ್ಯೋಗ ಮಾಹಿತಿ, ಸಾಧಕರ ಸಂದರ್ಶನ, ಪರವೂರ ಸುದ್ದಿ, ಜಿಲ್ಲೆ, ದೇಶ ವಿದೇಶ ಸುದ್ದಿಗಳು, ಮಕ್ಕಳ ಚಿತ್ರಗಳು, ಶಿಕ್ಷಣ, ಸಾಹಿತ್ಯ ಸಾಪ್ತಾಹಿಕ, ಕೃಷಿ, ವ್ಯಕ್ತಿತ್ವ ವಿಕಸನ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ವಿವಿಧ ಅನುಭವಿ ಬರಹಗಾರರ ಲೇಖನಗಳು, ಹಾಳೆತಟ್ಟೆ ಮತ್ತು ಇತರ ಕೃಷಿ ಉತ್ಪನ್ನಗಳ ಮಾರಾಟ ಮಾಹಿತಿ, ಪಾರ್ಸೆಲ್ ಸರ್ವೀಸಸ್ ಹೀಗೆ ಇನ್ನೂ ಹತ್ತು ಹಲವು ಉಪಯುಕ್ತ ಮಾಹಿತಿಗಳನ್ನು, ಸುದ್ದಿಗಳನ್ನು ಜನರಿಗೆ ತಲುಪಿಸುವಲ್ಲಿ ಸುದ್ದಿ ಪತ್ರಿಕೆ ಪ್ರಮುಖ ಪಾತ್ರ ವಹಿಸುತ್ತಿದೆ.

ಶಾಸಕರು, ಉಪವಿಭಾಗದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಎಂದು ಕಚೇರಿಯಲ್ಲಿ ಇರುತ್ತಾರೆ, ಎಂದು ಇರುವುದಿಲ್ಲ ಎಂಬ ಮಾಹಿತಿ ನೀಡುವ ಮೂಲಕ ಸುದ್ದಿ ಗ್ರಾಮೀಣ ಪ್ರದೇಶದ ಜನರಿಗೆ ಬೇಕಾದ ಮಾಹಿತಿಯನ್ನು ನೀಡುತ್ತಿದೆ. ಇದರಿಂದ ಅನಗತ್ಯವಾಗಿ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ.

ಪರವೂರ ಸುದ್ದಿ :

ಸುದ್ದಿಯ ಸ್ಪಷಾಲಿಟಿ ಹಲವಿವೆ. ನಮ್ಮೂರಿನ ಜನರು ಇತರ ದೇಶಗಳಲ್ಲಿ ಮಾಡುತ್ತಿರುವ ಸಾಧನೆ, ಸಾಮಾಜಿಕ ಕಾರ್ಯಗಳು ನಮ್ಮೂರಿನ ಜನರಿಗೆ ತಿಳಿಯದಿದ್ದರೆ ಹೇಗೆ? ಅದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದು ಈ ಪರವೂರ ಸುದ್ದಿಗಳು. ಒಬ್ಬ ವ್ಯಕ್ತಿ ಯಾವುದೇ ದೇಶದಲ್ಲಿರಲಿ ಅಲ್ಲಿ ಆತ ಮಾಡಿದ ಸಾಧನೆ, ಅವನಿಗೆ ಸಿಕ್ಕಿದ ಬಿರುದು, ಸನ್ಮಾನಗಳು ಅವನ ತಾಯ್ನಾಡಿಗೆ ತಿಳಿಯಬೇಕು ಎಂದು ಯೋಚಿಸಿ ಡಾಕ್ಟರ್ ರವರು ಪರವೂರ ಪುತ್ತೂರಿನವರು ಎಂಬ ಅಂಕಣ ಆರಂಭಿಸಿದರು. ಈ ಅಂಕಣ ಬಹಳ ಯಶಸ್ವಿಯನ್ನು ಕಾಣುತ್ತಿದೆ.

ಸುದ್ದಿ ಮಾಹಿತಿ :

ಜನರಿಗೆ ಸುದ್ದಿ, ಮಾಹಿತಿ ಮತ್ತು ಸೇವೆಯನ್ನು ನೀಡುವ ಕೆಲಸವನ್ನು ಸುದ್ದಿ ಪತ್ರಿಕೆ ಕಳೆದ 25 ವರ್ಷಗಳಿಂದ ಮಾಡುತ್ತಿದೆ. ಒಂದು ಸಮಾಜದ, ಒಬ್ಬ ವ್ಯಕ್ತಿಯ ಅಭಿವೃದ್ಧಿಯಲ್ಲಿ ಮಾಹಿತಿ ಮತ್ತು ಸೇವೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಮಾಹಿತಿಯ ಕೊರತೆಯೇ ಒಂದು ಊರಿನ ಅಭಿವೃದ್ಧಿಗೆ ತೊಡಕಾಗುತ್ತದೆ.ಪ್ರತಿಯೊಬ್ಬನಿಗೂ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಜಗತ್ತಿನ ಇತರೇ ಮಾಹಿತಿಗಳು ಅತ್ಯವಶ್ಯ. ಈ ಎಲ್ಲ ಸೇವೆ ಮತ್ತು ಮಾಹಿತಿಗಳನ್ನು ಪೂರೈಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸುದ್ದಿ ಮಾಹಿತಿ ಟ್ರಸ್ಟ್ ಇಂದು ರಾಜ್ಯ ಮಟ್ಟದ ಶಿಕ್ಷಣ ಉದ್ಯೋಗ ಮಾಹಿತಿ ಎಂಬ ಪಾಕ್ಷಿಕ ಪತ್ರಿಕೆಯನ್ನು ನಡೆಸುತ್ತಿದೆ.

ಸುದ್ದಿ ಎಲ್ಲ ತರದ ಮಾಹಿತಿ ಮತ್ತು ಸೇವೆಯನ್ನು ನೀಡುವಲ್ಲಿ ತನ್ನ ಕೈಯಿಂದಾದ ಪ್ರಯತ್ನವನ್ನು ಮಾಡುತ್ತಿದೆ. ಸರಕಾರಿ, ಖಾಸಗಿ ಉದ್ಯೋಗಗಳ ಮಾಹಿತಿ, ವಿವಿಧ ಇಲಾಖೆಗಳ ಅರ್ಜಿ ನಮೂನೆಗಳು, ತಾಲೂಕಿನಲ್ಲಿರುವ ವಿವಿಧ ಕೆಲಸಗಾರರ ಉದಾಹರಣೆಗೆ: ಮರದ ಕೆಲಸಗಾರರು, ಮೇಸ್ತ್ರಿಗಳು, ಗಾರೆಯವರು, ಅಡಿಕೆ ತೆಗೆಯುವವರು, ಪೈಂಟ್ ಕೆಲಸಗಾರರು, ಕಬ್ಬಿಣದ ಕೆಲಸಗಾರರು ಇತ್ಯಾದಿ ಕೆಲಸಗಾರರ ಮಾಹಿತಿಯನ್ನು ಜನರಿಗೆ ನೀಡುತ್ತಿದೆ. ಅಲ್ಲದೆ ಹೊಯಿಗೆ, ಜಲ್ಲಿ, ಕೆಂಪು ಕಲ್ಲು, ಬೋರ್ ವೆಲ್ ಇತ್ಯಾದಿ ಸೇವೆಗಳನ್ನು ಕೂಡ ಜನರಿಗೆ ನೀಡುತ್ತಿದೆ.

ಅದಲ್ಲದೆ ಪ್ರವಾಸೋದ್ಯಮದಲ್ಲಿ ಹೊಸ ಹೆಜ್ಜೆಯನ್ನು ಇಡುತ್ತಿದೆ. ಈಗಾಗಲೇ ಇಡೀ ರಾಜ್ಯದ ಪ್ರವಾಸೋದ್ಯಮ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಮುಖ್ಯವಾಗಿ ತಾಲೂಕಿನ ಪ್ರವಾಸಿ ತಾಣಗಳು, ಪುಣ್ಯ ಕ್ಷೇತ್ರಗಳು, ಅಲ್ಲಿನ ಮಹತ್ವ, ಅಲ್ಲಿಯ ಪೂಜಾ ಸಮಯ ಹೀಗೆ ಎಲ್ಲಾ ವಿಧದ ಮಾಹಿತಿಗಳನ್ನು ಸಂಗ್ರಹಿಸಿ, ಜನರಿಗೆ ನೀಡುವಲ್ಲಿ ಸುದ್ದಿ ಪ್ರಮುಖ ಪಾತ್ರ ವಹಿಸುತ್ತಿದೆ. ಮಾಹಿತಿ ಹಬ್ಬಗಳನ್ನು ಮಾಡುವುದರ ಮೂಲಕ ಜನರಿಗೆ ಮಾಹಿತಿ ಮತ್ತು ಸೇವೆಯನ್ನು ನೀಡುವ ಕೆಲಸವನ್ನು ಕೂಡ ಮಾಡುತ್ತ ಬಂದಿದೆ.

ಸುದ್ದಿ ಸೆಂಟರ್  :

ಮಾಹಿತಿಯನ್ನು ಜನರು ಸೇವೆಯಾಗಿ ಉಪಯೋಗಿಸಿಕೊಂಡು ಆ ಮೂಲಕ ಆದಾಯ ಮಾಡಿಕೊಡುವುದಕ್ಕಾಗಿ ಪತ್ರಿಕೆಯು ಮಾಹಿತಿ ಸೇವಾ ಕೇಂದ್ರಗಳು ಆರಂಭಿಸಿದೆ. ಒಂದು ಗ್ರಾಮದಲ್ಲಿ ಕೇವಲ ಒಬ್ಬ ಪ್ರತಿನಿಧಿ ಇದ್ದರೆ ಸಾಲದು. ಜನರಿಗೆ ಪರಿಪೂರ್ಣವಾಗಿ ಮಾಹಿತಿ ಮತ್ತು ಸೇವೆ ದೊರೆಯಬೇಕಾದರೆ ಸೆಂಟರ್ ಗಳು ಬಹುಮುಖ್ಯ. ಅದರಂತೆ ತಾಲೂಕಿನಲ್ಲಿ ಈಗಾಗಲೇ ಸುದ್ದಿ ಸೆಂಟರ್ ಗಳು ಕರ್ತವ್ಯ ನಿರ್ವಹಿಸುತ್ತಿವೆ. ಕಂಪ್ಯೂಟರ್ ಇಂಟರ್ನಟ್ ವ್ಯವಸ್ಥೆ ಹೊಂದಿದ ಈ ಸೆಂಟರ್ ಗಳು ಗ್ರಾಮದ ಸುದ್ದಿಗಳನ್ನು ಮಾಹಿತಿಗಳನ್ನು ನೇರವಾಗಿ ಜನರಿಗೆ ತಿಳಿಸುವ ವ್ಯವಸ್ಥೆಯನ್ನು ಮಾಡುತ್ತಿವೆ. ಬಹುತೇಕ ಛಾಯಾಗ್ರಾಹಕರು ಕೂಡ ಸುದ್ದಿ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಸುದ್ದಿ ಪ್ರತಿನಿಧಿಗಳು:

ಪುತ್ತೂರು ತಾಲೂಕಿನ 67 ಗ್ರಾಮಗಳಲ್ಲಿ ಒಬ್ಬರಂತೆ ಪ್ರತಿನಿಧಿಗಳಿದ್ದಾರೆ. ಆ ಗ್ರಾಮದ ಸುದ್ದಿಗಳನ್ನು, ಗ್ರಾಮದ ಜನರಿಗೆ ಬೇಕಾದ ಮಾಹಿತಿ, ಸೇವೆಗಳನ್ನು ನೀಡುವಲ್ಲಿ ಈ ಪ್ರತಿನಿಧಿಗಳು ಪ್ರಮುಖ ಪಾತ್ರ ವಹಿಸುತ್ತಾರೆ.

ಇದು ಸುದ್ದಿ ಪತ್ರಿಕೆಯ ಮತ್ತೊಂದು ಸ್ಪೇಷಾಲಿಟಿ. ಜನರಿಗೆ ಮಾಹಿತಿ ಮತ್ತು ಸೇವೆ ನೀಡಬೇಕಾದರೆ ಹಾಗೂ ಇಡೀ ಗ್ರಾಮದ ಸಮಗ್ರ ಮಾಹಿತಿ ಸಂಗ್ರಹವಾಗಬೇಕಾದರೆ ಅಲ್ಲದೆ ಒಂದು ತಾಲೂಕಿನ ಎಲ್ಲ ಸುದ್ದಿಗಳು ಬರಬೇಕಾದರೆ ಗ್ರಾಮ ಮಟ್ಟದಲ್ಲಿ ಪ್ರತಿನಿಧಿಗಳು ಮುಖ್ಯ. ಇಂತಹ ಪ್ರತಿನಿಧಿಗಳನ್ನು ಸುದ್ದಿ ಪತ್ರಿಕೆ ಹೊಂದಿದೆ.

ಸುದ್ದಿ ಡಾಕ್ಟರ್

ಡಾ.ಯು.ಪಿ.ಶಿವಾನಂದ ಸುಳ್ಯದಲ್ಲಿ ಗಾಯತ್ರಿ ನರ್ಸಿಂಗ್ ಹೋಮ್ ನಡೆಸುತ್ತಿದ್ದರು. ಪ್ರತಿಷ್ಠಿತ ಉರುಬೈಲು ಕುಟುಂಬದವರು. ದಕ್ಷ ಹಿರಿಯ ಅರಣ್ಯಾಧಿಕಾರಿಯಾಗಿದ್ದ ಯು.ಕೆ ಪುಟ್ಟಪ್ಪ ಉರುಬೈಲು ಮತ್ತು ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಂಡ ಧುರೀಣೆ ಶ್ರೀಮತಿ ಪದ್ಮಾವತಿ ಅವರ ಮಗ.

ಯಶಸ್ವಿ ವೈದ್ಯರಾಗಿದ್ದರು ರೋಗಗ್ರಸ್ತ ಸಮಾಜ ಮತ್ತು ಸರಕಾರಿ ವ್ಯವಸ್ಥೆಗೊಂದು ಚಿಕಿತ್ಸೆ ನೀಡುವ ಪ್ರಯತ್ನಕ್ಕೆ ಕೈಹಾಕಿದರು. ಸುಳ್ಯದಲ್ಲಿ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಯೊಬ್ಬ ವಿರುದ್ಧ ಆರಂಭಿಸಿದ ಕರಪತ್ರ ಹೋರಾಟ ಅನಂತರ ಸುದ್ದಿ ಪತ್ರಿಕೆ ಸ್ಥಾಪನೆಗೆ ಕಾರಣವಾಯಿತು. ಗ್ರಾಹಕ ವೇದಿಕೆ ಮೂಲಕ ನಡೆಸಿದ ಹೋರಾಟಕ್ಕಾಗಿ ಡಾಕ್ಟರ್ ಅವರಿಗೆ ದೆಹಲಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿಯ ಉತ್ತೇಜನ, ವೃತ್ತಿಯಲ್ಲಿ ಸಂಗ್ರಹಿಸಿದ ಆದಾಯ ಪತ್ರಿಕೆಯಲ್ಲಿ ಕರಗಿ ಹೋದರೂ ತಾಲೂಕಿನ ಜನರ ಬೆಂಬಲದಿಂದ ಪತ್ರಿಕಾ ಮಾಧ್ಯಮದಲ್ಲಿ ಯಶಸ್ವಿಯಾಗಿದ್ದಾರೆ. ಈಗ ಸುದ್ದಿ ಬಿಡುಗಡೆ 25 ವರ್ಷಗಳ ಇತಿಹಾಸ ಹೊಂದಿದೆ. ಕಳೆದ ವರ್ಷ ರಾಜ್ಯ ಸರಕಾರ ಮಾಧ್ಯಮ ಅಕಾಡಮಿ ಅವರನ್ನು ಗುರುತಿಸಿ ಗೌರವಿಸಿದೆ.

ಇ ಪೇಪರ್ :

ಸುದ್ದಿಯ ಬೆಳವಣಿಗೆಯ ಮತ್ತೊಂದು ಮುಖ ಈ ಇ ಪೇಪರ್. ಇಡೀ ಪತ್ರಿಕೆ ಇಂಟರ್ನೆಟ್ (ಅಂತರ್ಜಾಲ)ನಲ್ಲಿ ದೊರೆಯುವ ವ್ಯವಸ್ಥೆಯೇ ಈ ಇ ಪೇಪರ್. ತಾಲೂಕು ಮಟ್ಟದ ಪತ್ರಿಕೆ ಪ್ರತಿ ದಿನದ ಮಧ್ಯರಾತ್ರಿ ಕಚೇರಿಯಿಂದ ಪತ್ರಿಕೆ ಮುದ್ರಣಕ್ಕೆ ಹೋಗುವ ಹಂತದಲ್ಲೇ ಈ ಇಡೀ ಪತ್ರಿಕೆ ಇ ಪೇಪರ್ ಆಗಿ ಇಂಟರ್ನೇಟ್ ಡೌನ್ ಲೋಡ್ ಆಗುತ್ತದೆ. ಈಗಾಗಲೇ ದೇಶ ವಿದೇಶದಲ್ಲಿ ಲಕ್ಷಾಂತರ ಮಂದಿ ಸುದ್ದಿಯನ್ನು ಇಂಟರ್ನಟ್ ನಲ್ಲಿ ಓದುತ್ತಿದ್ದಾರೆ. http://news.suddimahithi.com/

ಕೃಪೆ

ರಮೇಶ್ ಪೆರ್ಲ

http://folkslive.com/kannada/

ಪುತ್ತೂರು ತಾಲೂಕಿನ ಸುದ್ದಿ ಪ್ರತಿನಿಧಿಗಳು

ಖಾದರ್ ಸಾಹೇಬ್ ಕಲ್ಲುಗುಡ್ಡೆ (ನೂಜಿ ಬಾಳ್ತಿಲ)
ಮೋಹನ್ ಜೈನ್  (ಬನ್ನೂರು )
ಎ.ಅಂಬ್ರೋಸ್ ಡಿ ಸೋಜಾ (ಬೆಳಿಯೂರು ಕಟ್ಟೆ)
ಚಂದ್ರ ಶೆಟ್ಟಿಗಾರ್ (34ನೇ ನೆಕ್ಕಿಲಾಡಿ)
ರಫ್ಸಾನ್ ರೆಹ್ಮಾನ್ (ಪರ್ಪುಂ ಜ, ಒಳಮೊಗ್ರು)
ವಿಶ್ವನಾಥ ಯು (ಪಾಣಾಜೆ)
ಕೇಶವ ಎ (ಪರ್ಲಡ್ಕ)
ಲೋಕಯ್ಯ (ಉಪ್ಪಿನಂಗಡಿ)
ರಮೇಶ್ ಟೈಲರ್ (ಕೆಮ್ಮಾಯಿ ಚಿಕ್ಕಮೂಡ್ನೂರು)
ಸತೀಶ ಯಂ (ಪುರುಷರ ಕಟ್ಟೆ)
ಗಂಗಾಧರ ಸಿ.ಎಚ್ (ನಿಡ್ಪಳ್ಳಿ)
ಮುಸ್ತಾಕ್ ಕೆ (ಕೋಡಿಂಬಾಡಿ)
ತೀಥಾನಂದ ಗೌಡ (ಪುಣಚ)
ಜೆಫ್ರಿ ಡಿ ಸೋಜಾ (ರಾಮಕುಂಜ, ಕೊಲ, ಹಳೆನೇರಂಕಿ)
ಶಶಿಧರ ವಿ.ಎನ್  (ನರಿಮೊಗರು)
ನವೀನ್ ಮೆದು (ಸವಣೂರು)
ಅಬೂಬಕ್ಕರ್  (ಕೌಡಿಚ್ಚಾರು)
ಸುಧಾಕರ ಆಚಾರ್ಯ  (ಕಾಣಿಯೂರು)
ಆನಂದ ಗೌಡ ಪಿ  (ಕಡಬ)
ಸಂತೋಷ್ ಮೋರಸ್  (ಪುತ್ತೂರು ನಗರ, ದರ್ಬೆ ಮೊಟ್ಟೆತ್ತಡ್ಕ)
ಮೇದಪ್ಪ ನೆಲ್ಯಾಡಿ (ನೆಲ್ಯಾಡಿ)
ಉದಯಕುಮಾರ್ ಪಿ.ಆರ್. (ಬಿಳಿನೆಲೆ)
ವಿಜಯ್ ಕುಮಾರ್  (ಕೆಯ್ಯೂರು)
ರಾಮಣ್ಣ (ಮುಂಡೂರು)
ವೀರಪ್ಪ ಗೌಡ (ಪೆರ್ಲಂಪಾಡಿ)
ದಿನೇಶ್ ಪೂಜಾರಿ ಪಿ (ಬಡಗನ್ನೂರು)
ಸದಾನಂದ (ಆಲಂಕಾರು)
ಬಾಲಕೃಷ್ಣ ಪೂಜಾರಿ (ಪೆರಾಬೆ)
ಲಕ್ಷ್ಮೀಶ ಬಂಗೇರ (ಕುಟ್ರುಪ್ಪಾಡಿ)
ಕೊರಗಪ್ಪ ಯಂ (ಈಶ್ವರಮಂಗಲ)
ಧರ್ಣಪ್ಪ ಗೌಡ (ಕಬಕ)
ನಾರಾಯಣ ಕುಕ್ಕುಪುಣಿ  (ಒಳಮೊಗ್ರು)
ಪುರುಷೋತ್ತಮ (ಪಾಂಗ್ಲಾಯ)
ಶಿವಪ್ಪ ನೈಕ್ (ಪೆರ್ನೆ).

ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಅಂಕಣಗಳು
* ತಾಲೂಕು ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳ ವರದಿ
* ಸಮಸ್ಯೆಗಳ ಬಗ್ಗೆ ವಿಶೇಷ ವರದಿ, ಜನಾಭಿಪ್ರಾಯ-ನಾಗರಿಕ ಜಾಗೃತಿ ಆಂದೋಲನ
* ಜನಪ್ರತಿನಿಧಿಗಳ, ಸಾರ್ವಜನಿಕರ ಗಮನ ಸೆಳೆಯಬಹುದಾದ ಸ್ಪಂದನಾ ವರದಿಗಳು
* ವಿವಿಧ ಇಲಾಖೆಗಳಿಂದ ಜನರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಇಲಾಖಾ ಮಾಹಿತಿ
* ಇಲಾಖಾ ಅಧಿಕಾರಿಗಳ, ಜನಪ್ರತಿನಿಧಿಗಳ, ಗ್ರಾಮಲೆಕ್ಕಿಗರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಪ್ರತಿದಿನದ ಕಾರ್ಯಕ್ರಮ ಹಾಗೂ ವಾರದ ಕಾರ್ಯಕ್ರಮಗಳು
* ತಾಲೂಕಿನ ಅರ್ಹ ಬರಹಗಾರರ ವಿಶೇಷ ಲೇಖನಗಳು, ಅಂಕಣಗಳು, ಸುದ್ದಿ ಸಾಹಿತ್ಯ ಸಾಪ್ತಾಹಿಕ
* ಶಿಕ್ಷಣ ಸಂಸ್ಥೆಗಳ ವರದಿ,ಶಾಲಾ ಕಾಲೇಜು ಚಟುವಟಿಕೆಗಳ ಮಾಹಿತಿ, ಶೈಕ್ಷಣಿಕ ಕ್ಷೇತ್ರಕ್ಕೆ ಬೇಕಾದ ಮಾಹಿತಿ ಇತ್ಯಾದಿ ಒಳಗೊಂಡ ಶಿಕ್ಷಣ ಸಾಹಿತ್ಯ ಸಾಪ್ತಾಹಿಕ.
* ಪರವೂರಿನಲ್ಲಿರುವ ಪುತ್ತೂರಿನವರ ವಿಳಾಸ ಮತ್ತು ಪರಿಚಯ, ಸಾಧಕರ ವಿಶೇಷ ಬರಹಗಳು
* ಶುಭ ವಿವಾಹ, ಹುಟ್ಟು ಹಬ್ಬ, ನಿಧನದ ಸುದ್ದಿಗಳು
* ಶಿಕ್ಷಣ ಮತ್ತು ಉದ್ಯೋಗದ ಪ್ರಾಥಮಿಕ ಮಾಹಿತಿ
* ಗ್ರಾಮಾಂತರ ಸುದ್ದಿಗಳು
* ಚಿತ್ರ ಸುದ್ದಿಗಳು
* ವರ್ಗಾವಣೆ, ಪದೋನ್ನತಿ, ನಿವೃತ್ತಿ, ಸಾಧನೆಗಳ ವರದಿ

ಪತ್ರಿಕೆಯ ಉದ್ದೇಶ-ಮಾಹಿತಿ
* ವಿವಿಧ ಒತ್ತಡ, ಕರ್ತವ್ಯಗಳ ಮಧ್ಯೆ ಪ್ರತ್ಯೇಕಿತರಾಗಿ ಬದುಕುತ್ತಿರುವ ಮಂದಿಯನ್ನು ಮಾಧ್ಯಮದ ಮೂಲಕ ಸಮೀಪಿಸುವಂತೆ ಮಾಡುವುದು
* ಸಾಮಾಜಿಕ ನ್ಯಾಯವಂಚಿತರಿಗೆ ತಿಳುವಳಿಕೆಯನ್ನು ತುಂಬಿದ ಮಾಧ್ಯಮವಾಗಿ ಕಾರ್ಯನಿರ್ವಹಿಸುವುದು
* ತಾಲೂಕಿನಿಂದ ಹೊರಗೆ ಇರುವ ಮಂದಿಯ ವರದಿ, ಪರಿಚಯ, ಸಾಧನೆಗಳನ್ನು ಪ್ರಕಟಿಸಿ ಅವರನ್ನು ಊರಿಗೆ ಸಮೀಪಿಸುವಂತೆ ಮಾಡುವುದು
* ಪಕ್ಷಗಳ ರಾಜಕಾರಣಗಳ ಜವಾಬ್ದಾರಿಯನ್ನು ನೆನಪಿಸುವುದು
* ಜನರ ಸಮಸ್ಯೆಗಳನ್ನು ಬೇಡಿಕೆಗಳನ್ನು ತೆರೆದಿಟ್ಟು ಸಂಬಂಧಪಟ್ಟ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನ ಸೆಳೆಯುವುದು
* ಶ್ರೀಮಂತರು ಬಡವರು ಎಂಬ ಬೇಧವಿಲ್ಲದೆ ಸರ್ವರ ವರದಿ, ನೋವು-ನಲಿವುಗಳಿಗೆ ಸ್ಪಂದಿಸುವುದು
* ಸುದ್ದಿ ಪತ್ರಿಕೆಗೆ ಪುತ್ತೂರು ತಾಲೂಕಿನಲ್ಲಿ ಲಕ್ಷಕ್ಕೂ ಮಿಕ್ಕಿ ಓದುಗರಿದ್ದಾರೆ.
* ವೆಬ್ ಸೈಟ್ ನಲ್ಲಿ ವಿವಿಧ ರಾಷ್ಟ್ರಗಳಲ್ಲಿ ಸೇರಿದಂತೆ ಸುಮಾರು 25 ಸಾವಿರಕ್ಕೂ ಮಿಕ್ಕಿ ಓದುಗರು
* 20 ಸಾವಿರಕ್ಕೂ ಅಧಿಕ ಪ್ರತಿಗಳ ಪ್ರಸಾರ
* 2 ಸಾವಿರಕ್ಕೂ ಮಿಕ್ಕಿ ಚಂದಾದಾರರು
* ರಾಜ್ಯವ್ಯಾಪಿ ಪ್ರಸರಣ ಇರುವ ಶಿಕ್ಷಣ ಉದ್ಯೋಗ ಮಾಹಿತಿ ಪತ್ರಿಕೆ
* ಶಿಕ್ಷಣ ಉದ್ಯೋಗ ಮಾಹಿತಿ ಪತ್ರಿಕೆಯ ಮೂಲಕ ಉದ್ಯೋಗ, ಶಿಕ್ಷಣ ಮಾಹಿತಿ, ಉದ್ಯೋಗ ಸಲಹೆ, ಸರಕಾರಿ, ಖಾಸಗಿ ಕಂಪೆನಿಗಳ ಅರ್ಜಿ ಫಾರಂ ಮಾಹಿತಿ, ಆನ್ ಲೈನ್ ಅರ್ಜಿ ಗಳ ಬಗ್ಗೆ ವಿವರ
* ತಾಲೂಕಿನ ಶಿಕ್ಷಣ ಸಂಸ್ಥೆಗಳು, ಗ್ಯಾರೇಜ್, ವೈದ್ಯರು, ವೈದ್ಯಾಧಿಕಾರಿಗಳು, ದೇವಸ್ಥಾನಗಳು, ಸಭಾಭವನಗಳು, ಕಾರ್ ಪೆಂಟರ್ಸ್ ಅಡಿಕೆ ತೆಗೆಯುವರು , ಚಿನ್ನದ ಕೆಲಸಗಾರರು, ಇತ್ಯಾದಿ ಸಮಗ್ರ ಮಾಹಿತಿ.
* ಟೂರಿಸಂ ಮಾಹಿತಿ ಮತ್ತು ಮಾರ್ಗದರ್ಶನ
* ಹಾಳೆತಟ್ಟೆ ಇತ್ಯಾದಿ ಗೃಹ ಉದ್ಯಮ, ಸ್ವ ಉದ್ಯೋಗಗಳಿಗೆ ಪ್ರೋತ್ಸಾಹ,ಪ್ರಚಾರ
* ವಿವಿಧ ರೀತಿಯ ತರಬೇತಿಗಳು
* ಉದ್ಯೋಗಾಕಾಂಕ್ಷಿಗಳನ್ನು ಹಾಗೂ ಅಭ್ಯರ್ಥಿಗಳು ಬೇಕಾದ ಸಂಸ್ಥೆಗಳನ್ನು ಜೋಡಿಸುವ ಉದ್ಯೋಗ ಮೇಳಗಳು, ಮಾಹಿತಿ ಹಬ್ಬಗಳು
* ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ಶೈಕ್ಷಣಿಕ ಮಾಹಿತಿಗಳು
* ಉದ್ಯೋಗಕ್ಕೆ ಸಂದರ್ಶನ ಎದುರಿಸಲು, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬೇಕಾದ ತರಬೇತಿಗಳು.

ಪತ್ರಿಕೆಯ ಹೆಸರು : ಸುದ್ದಿ ಬಿಡುಗಡೆ ದಿನ ಪತ್ರಿಕೆ
ಪತ್ರಿಕೆ ವ್ಯಾಪ್ತಿ : ಪುತ್ತೂರು ತಾಲೂಕು ಮತ್ತು ತಾಲೂಕಿನವರಾಗಿದ್ದು ಜಗತ್ತಿನಾದ್ಯಂತ ಇರುವ ಮಂದಿಯ ವರದಿ

Dr. up shivananda

 
 
 
 
 
 
 
 
 
 
 
 
 
 
 
 
 
 
 
 
 
 
ಸಂಪಾದಕರು : ಡಾ.ಯು.ಪಿ ಶಿವಾನಂದ .ಎಂ.ಬಿ.ಬಿ.ಎಸ್
ಕಛೇರಿ ವಿಳಾಸ : ಹಳೆ ಅಂಚೆ ಕಛೇರಿ ಬಳಿ ಪುತ್ತೂರು ದ.ಕ
ಕಛೇರಿ ದೂರವಾಣಿ : 08251-231949, 233949
ಮೊಬೈಲ್ : 9986416820
ಪತ್ರಿಕೆ ಪ್ರಾರಂಭ : ಸೆ.4,1985
ಕಛೇರಿ ಮನೇಜರ್ : ಚಂದ್ರಶೇಖರ್ ಉಮಿಗದ್ದೆಬೆಂಗಳೂರು ವಿಳಾಸ: ಫ್ಲಾಟ್ ನಂ.#102/2, ಜನಕ್ ರೆಸಿಡೆನ್ಸಿ, ರೇಸ್ ಕೋರ್ಸ್ ರೋಡ್, ಕುಮಾರ ಕೃಪಾ ರಸ್ತೆ ಸಮೀಪ, ರೆಡ್ ಕ್ರಾಸ್ ಬಿಲ್ಡಿಂಗ್ ಎದುರು, ಬೆಂಗಳೂರು ಫೋ: 080-22342247, 9538542444

ಬೀದಿಗಿಳಿದ ಕಾಂಗ್ರೆಸ್ ಬೀದಿಯಲ್ಲಿರಲಿದೆ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ರೋಡ್ ಶೋಗೆ ಬಿಜೆಪಿ ಟಾಂಗ್ ನೀಡಿದ್ದು, ಬೀದಿಗಿಳಿದಿರುವ ಕಾಂಗ್ರೆಸ್ ಮುಂದೆ ಬೀದಿಯಲ್ಲಿಯೇ ನಿಲ್ಲಲಿದೆ ಎಂದು ಮಂಗಳವಾರ ಹೇಳಿದೆ. ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಶಹ್ನಾವಾಜ್ ಹುಸೇನ್ ಅವರು, ಕಾಂಗ್ರೆಸ್ ಎಷ್ಟು ಬೇಕಾದರೂ ರೋಡ್‌ಶೋಗಳಲ್ಲಿ ಭಾಗಿಯಾಗಲಿ.… ಮುಂದೆ ಓದಿ

Read More

ಬೀದಿಗಿಳಿದ ಕಾಂಗ್ರೆಸ್ ಬೀದಿಯಲ್ಲಿರಲಿದೆ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ರೋಡ್ ಶೋಗೆ ಬಿಜೆಪಿ ಟಾಂಗ್ ನೀಡಿದ್ದು, ಬೀದಿಗಿಳಿದಿರುವ ಕಾಂಗ್ರೆಸ್ ಮುಂದೆ ಬೀದಿಯಲ್ಲಿಯೇ ನಿಲ್ಲಲಿದೆ ಎಂದು ಮಂಗಳವಾರ ಹೇಳಿದೆ. ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಶಹ್ನಾವಾಜ್ ಹುಸೇನ್ ಅವರು, ಕಾಂಗ್ರೆಸ್ ಎಷ್ಟು ಬೇಕಾದರೂ ರೋಡ್‌ಶೋಗಳಲ್ಲಿ ಭಾಗಿಯಾಗಲಿ.… ಮುಂದೆ ಓದಿ

Read More

77 ಕ್ವಿಂಟಾಲ್ ಬೀಫ್ ಜಪ್ತಿ

ಲಖಿಂಪುರ್ ಖೇರಿ ಜಿಲ್ಲೆಯಿಂದ ಅಕ್ಕಿಯ ಹೊಟ್ಟು ತುಂಬಿಸಿ ಅದರಲ್ಲಿ ೭೭ ಕ್ವಿಂಟಾಲ್ ದನದ ಮಾಂಸವನ್ನು ಅಡಗಿಸಿಟ್ಟು ಅಮ್ರೋರಾಗೆ ಸಾಗಣೆ ಮಾಡುತ್ತಿದ್ದ ಮಿನಿಟ್ರಕ್‌ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅಕ್ಕಿ ಹೊಟ್ಟು ತುಂಬಿದ್ದ ಚೀಲದೊಳಗೆ ದನದ ಮಾಂಸ ಇರಿಸಲಾಗಿತ್ತು, ಒಬ್ಬಾತನನ್ನು ಸ್ಥಳದಲ್ಲಿಯೇ ಬಂಧಿಸಲಾಗಿದ್ದು, ಇಬ್ಬರು… ಮುಂದೆ ಓದಿ

Read More

ವಿದ್ಯಾರ್ಥಿಗಳು ಶಿಕ್ಷಣದತ್ತ ಗಮನಹರಿಸಿ

ವಿದ್ಯಾರ್ಥಿಗಳು ಪ್ರತಿಭಟನೆಗಳಲ್ಲಿ ಭಾಗಿಯಾಗುವ ಬದಲು ಒಳ್ಳೆಯ ಶಿಕ್ಷಣ ಪಡೆಯುವತ್ತಾ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಮರಹಬೂಬ ಮುಫ್ತಿ ಹೇಳಿದ್ದಾರೆ. ಅವರು ಮಂಗಳವಾರ ಜಮ್ಮುವಿನಲ್ಲಿ ಸರಕಾರಿ ದಂತ ವೈದ್ಯಕೀಯ ಕಾಲೇಜನ್ನು ಉದ್ಘಾಟಿಸಿ ಭವಿಷ್ಯದ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ್ದಾರೆ. ಪ್ರಮುಖ ವಿಷಯಗಳನ್ನು ಸರಿಪಡಿಸಲು ಹಿರಿಯ… ಮುಂದೆ ಓದಿ

Read More

ಸೆಕ್ಸ್ ರಾಕೆಟ್: ದಂಪತಿ ಬಂಧನ

ದೆಹಲಿಯಲ್ಲಿ ಬಹುದೊಡ್ಡ ಸೆಕ್ಸ್ ರಾಕೆಟ್‌ನ್ನು ಬಯಲು ಮಾಡಿರುವ ದೆಹಲಿ ಪೊಲೀಸರು, ಮಾನವ ಕಳ್ಳಸಾಗಣೆ ಜಾಲದಲ್ಲಿ ತೊಡಗಿದ್ದ ಮುಸ್ಲಿಂ ದಂಪತಿಯನ್ನು ಬಂಧಿಸಿದ್ದಾರೆ. ಹುಡುಗಿಯರ ಮಾರಾಟ ಜಾಲದ ಕಿಂಗ್‌ಪಿನ್ ದೆಹಲಿಯ ಜಿ.ಬಿ.ರಸ್ತೆಯ ನಿವಾಸಿ ಸಾಯಿರಾ ಬೇಗಂ(೪೫) ಹಾಗೂ ಆಕೆಯ ಪತಿ ಆಫಾಕ್ ಹುಸೇನ್(೫೦) ಮತ್ತು… ಮುಂದೆ ಓದಿ

Read More

ನಜೀಬ್ ಜಂಗ್ ಫೋರ್‌ಟ್ವೆಂಟಿ: ಸ್ವಾಮಿ

ದಿಲ್ಲಿ ರಾಜ್ಯಪಾಲ ಲೆ| ಗವರ್ನರ್ ನಜೀಬ್ ಜಂಗ್ ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರ ಹಾಗೆ ಫೋರ್‌ಟ್ವೆಂಟಿ. ದಿಲ್ಲಿ ರಾಜ್ಯಪಾಲರ ಹುದ್ದೆಗೆ ಓರ್ವ ಸಂಘ ವ್ಯಕ್ತಿ ಬೇಕಾಗಿದ್ದಾರೆ ಎಂದು ಬಿಜೆಪಿಯ ವಿವಾದಿತ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕಟಕಿಯಾಡಿದ್ದಾರೆ. ದಿಲ್ಲಿ… ಮುಂದೆ ಓದಿ

Read More

ಮರಳುಗಾರಿಕೆ ನಿಷೇಧ

ಫಲ್ಗುಣಿ-ಮುಲಾರ್ ಪಟ್ನ ಮುತ್ತೂರು ಸೇತುವೆಯು ಪ್ರಮುಖ ಸೇತುವೆಯಾಗಿದ್ದು, ಈ ಸೇತುವೆಯ ಅತೀ ಸಮೀಪದಲ್ಲಿ/ಅಡಿಯಲ್ಲಿ ಕೂಡ ಮರಳುಗಾರಿಕೆ ನಡೆಸುತ್ತಿರುವುದರಿಂದ ಮತ್ತು ನದಿಯ ಇಕ್ಕೆಲಗಳಲ್ಲಿ ಇರುವ ಮಣ್ಣಿನ ಧರೆಯಂತಹ ಪ್ರದೇಶಗಳು ನೀರಿನಲ್ಲಿ ಕೊಚ್ಚಿ ಹೋಗುವುದರಿಂದ ಈ ಪ್ರದೇಶದಲ್ಲಿ ನಿರ್ಮಿಸಿರುವ ಸೇತುವೆಯ ಅಸ್ತಿತ್ವಕ್ಕೆ ತೊಂದರೆ ಉಂಟಾಗುತ್ತದೆ.… ಮುಂದೆ ಓದಿ

Read More

ಫೇಸ್‌ಬುಕ್‌ನಲ್ಲಿ ಅವಹೇಳನೆ: ಕೇಸು ದಾಖಲು

ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವಿಚಾರದಲ್ಲಿ ಅವಹೇಳನಕಾರಿಯಾಗಿ ಬರಹವನ್ನು ಪೋಸ್ಟ್ ಮಾಡಿದ ಆರೋಪದಲ್ಲಿ ಮೂಡ ನಿವಾಸಿಯೋರ್ವನ ವಿರುದ್ದ ಬಂಟ್ವಾಳ ನಗರ ಠಾಣಾ ಎಸೈ ನಂದಕುಮಾರ್ ಅವರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ. ಮೂಡ ನಿವಾಸಿ ಎನ್ನಲಾದ ಜಬ್ಬಾರ್ ಬಿ.ಸಿ.ರೋಡು ಎಂಬಾತನ ಮೇಲೆ… ಮುಂದೆ ಓದಿ

Read More

ಸೆ. 1: ಸ್ಕ್ಯಾನಿಂಗ್ ಸೆಂಟರ್‌ಗಳು ಬಂದ್

ಪ್ರಸವಪೂರ್ವ ಮತ್ತು ಗರ್ಭಪೂರ್ವ ಲಿಂಗಪತ್ತೆ ಕಾಯ್ದೆ ತಿದ್ದುಪಡಿ ಮಾಡುವಂತೆ ಆಗ್ರಹಿಸಿ ಸೆ.೧ರಂದು ಇಂಡಿಯನ್ ರೇಡಿಯೋಲಾಜಿಕಲ್ ಆಂಡ್ ಇಮೇಜಿಂಗ್ ಅಸೋಸಿಯೇಶನ್ ವತಿಯಿಂದ ದೇಶಾದ್ಯಂತ ಎಲ್ಲ ರೀತಿಯ ಸಿಟಿಸ್ಕ್ಯಾನ್, ಎಂಆರ್‌ಐ ಮತ್ತು ಅಲ್ಟ್ರಾ ಸ್ಕ್ಯಾನ್‌ಸೆಂಟರ್‌ಗಳು ಬಂದ್ ನಡೆಸಿ ಪ್ರತಿಭಟಿಸಲಿವೆ ಎಂದು ಡಾ.ರಾಘವೇಂದ್ರ ಭಟ್ ಹೇಳಿದ್ದಾರೆ.… ಮುಂದೆ ಓದಿ

Read More

ಬಂಟ ಕ್ರೀಡೋತ್ಸವ

ಶ್ರೀಸಿದ್ಧಿವಿನಾಯಕ ಪ್ರತಿಷ್ಠಾನದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ೧೩ನೇ ವರ್ಷದ ಬಂಟ ಕ್ರೀಡೋತ್ಸವದಲ್ಲಿ ಸತತವಾಗಿ ೧೧ನೇ ಬಾರಿಗೆ ಪುತ್ತೂರು ಬಂಟ ಸಂಘದ ಕ್ರೀಡಾಪಟುಗಳು ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರು. ಪ್ರವೀಣ್ ಶೆಟ್ಟಿಯವರು ನಾಯಕತ್ವ ವಹಿಸಿದ್ದರು. ಪ್ರೇಮನಾಥ ಶೆಟ್ಟಿ ಕಾವು, ಪ್ರವೀಣ್ ಶೆಟ್ಟಿ,… ಮುಂದೆ ಓದಿ

Read More

ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ಸಾಧ್ಯವಿಲ್ಲ

ಸಾಂಪ್ರದಾಯಿಕ ವಿವಾದಿತ ಜಲ್ಲಿಕಟ್ಟು ಕ್ರೀಡೆ ಸುಮಾರು ೫೦೦೦ ವರ್ಷಗಳ ಇತಿಹಾಸ ಹೊಂದಿದೆ ಎಂಬ ಕಾರಣಕ್ಕೆ ಕಾನೂನುಬಾಹಿರವಾಗಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ. ಜಲ್ಲಿಕಟ್ಟು ಕ್ರೀಡೆಗೆ ೫೦೦೦ ವರ್ಷಗಳ ಇತಿಹಾಸವಿದೆ. ಆದ್ದರಿಂದ ಅನುಮತಿ ನೀಡಬೇಕೆಂದು ಆಗ್ರಹಿಸುವುದು ಹಾಸ್ಯಾಸ್ಪದವಾಗಿದೆ.… ಮುಂದೆ ಓದಿ

Read More

ನರಸಿಂಗ್ ಒಲಿಂಪಿಕ್ ಕನಸು ಅಕ್ಷರಶಃ ಅಂತ್ಯ

ಕುಸ್ತಿಪಟು ನರಸಿಂಗ್ ಯಾದವ್ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಾಧ್ಯತೆ ಅಕ್ಷರಶಃ ಮುಗಿದಿದ್ದು, ಕುಸ್ತಿಪಟುವಿಗೆ ಅವರನ್ನು ಸಮರ್ಥಿಸಿ ಕೊಳ್ಳಲು ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಸುಳಿವು ನೀಡಿದ್ದಾರೆ. ಸುಶೀಲ್‌ಕುಮಾರ್ ಅವರನ್ನು ಹಿಂದಿಕ್ಕಿ ರಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದ ನರಸಿಂಗ್… ಮುಂದೆ ಓದಿ

Read More

ವಿಶೇಷ ಸಾಧನೆ: ಅಶ್ವಿನ್

ಭಾರತದ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಒಂದೇ ಟೆಸ್ಟ್‌ನಲ್ಲಿ ಶತಕ ಹಾಗೂ ೫ ವಿಕೆಟುಗಳನ್ನು ಉರುಳಿಸಿದ ಸಾಧನೆ ಎರಡು ಬಾರಿ ಮಾಡಿದ್ದಾರೆ. ಹಿಂದೆ  ವಿನೂ ಮಂಕದ (ಇಂಗ್ಲೆಂಡ್ ಎದುರು ೧೯೫೨) ಹಾಗೂ ಪಾಲಿ ಉಮಿಗ್ರಾರಾ (ವೆಸ್ಟ್ ಇಂಡೀಸ್ ಎದುರು ೧೯೬೨), ಒಂದೊಂದು  ಬಾರಿ,… ಮುಂದೆ ಓದಿ

Read More

ನನ್ನ ಅತ್ಯುತ್ತಮ ಸಾಧನೆ ಇನ್ನು ಬರಲಿದೆ

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಭಾರತದ ಅಭಿನವ ಬಿಂದ್ರಾ ಶೂಟಿಂಗ್ ವಿಭಾಗದಲ್ಲಿ ಬಂಗಾರದ ಪದಕ ಗೆದ್ದಿದ್ದರು.ಈ ಭಾರಿಯ ರಿಯೋ ಒಲಿಂಪಿಕ್ಸ್‌ನಲ್ಲಿ, ನನ್ನ ಕ್ರೀಡಾ ಜೀವನದ ಅತ್ಯುತ್ತಮ ಸಾಧನೆ ತೋರಿಸಲಿದ್ದೇನೆ ಇದಕ್ಕಾಗಿ ಎಲ್ಲಾ ತಯಾರಿ ನಡೆಸಿದ್ದೇನೆ ಎಂಬುದಾಗಿ ಹೇಳಿದ್ದಾರೆ.… ಮುಂದೆ ಓದಿ

Read More

ಪ್ರಥಮ ಟೆಸ್ಟ್ ಶ್ರೀಲಂಕಾ 117 ಆಸ್ಟ್ರೇಲಿಯಾ 2/66

ಶ್ರೀಲಂಕಾದಲ್ಲಿ ನಿನ್ನೆ ಆರಂಭವಾದ ಪ್ರಥಮ ಟೆಸ್ಟ್‌ನ ಟಿ-ವಿರಾಮದ ಸಮಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ೨ ವಿಕೆಟುಗಳಿಗೆ ೬೬ ರನ್ನುಗಳನ್ನು ಮಾಡಿದೆ.ಇದಕ್ಕೆ ಮೊದಲು ಶ್ರೀಲಂಕಾ ಬರೇ ೧೧೭ ರನ್ನುಗಳಿಗೆ ಆಲ್-ಔಟಾಗಿದೆ.ಆಸ್ಟ್ರೇಲಿಯಾದ  ಹಾಜಲವುದ್(೩), ಲೈಯನ್ (೨) ಹಾಗೂ ಜಕೀಪ್(೨) ವಿಕೆಟ್‌ಗಳನ್ನು  ಪಡೆದುಕೊಂಡಿದ್ದಾರೆ.… ಮುಂದೆ ಓದಿ

Read More

ಇಂಗ್ಲೆಂಡ್ ಜಯ ಸರಣಿ 1-1 ಸಮಬಲ

ಮಾಂಚೆಸ್ಟರ್‌ನಲ್ಲಿ ನಡೆದ ೨ನೇಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪಾಕಿಸ್ಥಾನವನ್ನು ಬೃಹತ್ ೩೩೦ ರನ್ನುಗಳ ಅಂತರದಲ್ಲಿ ಸೋಲಿಸಿದೆ.ಹೀಗಾಗಿ ೪ ಟೆಸ್ಟ್‌ಗಳ ಸರಣಿ, ಈಗ ೧-೧ ಸಮಬಲದಲ್ಲಿ ಇದೆ. ೩ನೇಯ ದಿನದ ಆಟವು ಮುಕ್ತಾಯ ಆದಾಗ ಇಂಗ್ಲೆಂಡ್ ೧ ವಿಕೆಟು ನಷ್ಟಕ್ಕೆ ೯೮  ರನ್ನುಗಳನ್ನು… ಮುಂದೆ ಓದಿ

Read More

ಮಿಂತ್ರಾ ತೆಕ್ಕೆಗೆ ಬಿದ್ದ ಜಬಾಂಗ್

ಜಾಗತಿಕ ಆನ್‌ಲೈನ್ ಶಾಪಿಂಗ್ ಜಬಾಂಗ್‌ನ್ನು ಫ್ಲಿಪ್ ಕಾರ್ಟ್ ಸ್ವಾಧೀನದ ಮಿಂತ್ರಾ ಮಂಗಳವಾರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಜಗತ್ತಿನಲ್ಲೇ ಅತ್ಯಂತ ಖ್ಯಾತಿ ಪಡೆದ ಆನ್‌ಲೈನ್ ಶಾಪಿಂಗ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಿಂತ್ರಾಗೆ ಜಬಾಂಗ್ ಸೇರ್ಪಡೆಯಾಗುವ ಮೂಲಕ ಮಾರಾಟ ಕೇಂದ್ರಕ್ಕೆ ಇನ್ನಷ್ಟು ಬಲ ಬಂದಿದೆ.… ಮುಂದೆ ಓದಿ

Read More

ಕರಾಚಿಯಲ್ಲಿ ಮಕ್ಕಳಿಗೆ ಲಸಿಕೆ

ಶಸ್ತ್ರಾಸ್ತ್ರ ಸಹಿತ ಪೊಲೀಸರ ಬಿಗಿ ಭದ್ರತೆಯ ನಡುವೆ ಪಾಕಿಸ್ತಾನದ ಅತೀ ಹೆಚ್ಚು ಜನನಿಭಿಡ ನಗರ ಕರಾಚಿಯಲ್ಲಿ ಮೂರು ದಿನಗಳ ಪೋಲಿಯೋ ಲಸಿಕೆ ಅಭಿಯಾನವನ್ನು ಮಂಗಳವಾರ ಆರೋಗ್ಯ ಕಾರ್ಯಕರ್ತರು ಪ್ರಾರಂಭಿಸಿದ್ದಾರೆ. ಪೋಲಿಯೋ ಲಸಿಕೆ ಹಾಕಲು ಈ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ… ಮುಂದೆ ಓದಿ

Read More

ಜಪಾನ್: ದಾಳಿಯಲ್ಲಿ 19 ಸಾವು

ಟೋಕಿಯೋ ಹೊರವಲಯದಲ್ಲಿರುವ ಮನೋರೋಗಿಗಳ ಆಶ್ರಯ ಧಾಮವೊಂದರ ಮಾಜಿ ಉದ್ಯೋಗಿಯೋರ್ವ ಹರಿತವಾದ ಚೂರಿಯನ್ನು ಝಳಪಿಸುತ್ತಾ ೧೯ ಮಂದಿಯನ್ನು ಇರಿದು ಕೊಂದು, ಇತರ ೨೫ ಮಂದಿಯನ್ನು ಗಾಯಗೊಳಿಸಿರುವ ಘಟನೆ ವರದಿಯಾಗಿದೆ. ಈ ಘಟನೆಯು ಜಪಾನಿನಲ್ಲಿ ಕಳೆದ ಹಲವು ದಶಕಗಳಲ್ಲಿ ನಡೆದಿರುವ ಸಾಮೂಹಿಕ ಹತ್ಯಾ ಘಟನೆಗಳಲ್ಲೇ… ಮುಂದೆ ಓದಿ

Read More

ಪಪುವಾ ನ್ಯೂಗಿನಿಯಲ್ಲಿ ಭೂಕಂಪ

ದ್ವೀಪರಾಷ್ಟ್ರ ಪಪುವಾ ನ್ಯೂಗಿನಿಯಲ್ಲಿ ಮಂಗಳವಾರ ಬೆಳಗಿನ ಜಾವ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ ೬.೩ ರಷ್ಟು ತೀವ್ರತೆ ದಾಖಲಾಗಿದೆ. ಅಮೆರಿಕ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರದ ವರದಿಯಂತೆ ಸಮುದ್ರದ ೬.೬ ಕಿ ಮೀ ಆಳದಲ್ಲಿ ಕಂಪನವಾಗಿದ್ದು, ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಪೆಸಿಫಿಕ್… ಮುಂದೆ ಓದಿ

Read More

ಈ ಐಸ್‌ಕ್ರೀಮ್ ಕರಗೋದಿಲ್ವಂತೆ !

ಯಾವುದೇ ಐಸ್‌ಕ್ರೀಮ್ ಆದ್ರೂ ಫ್ರಿಡ್ಜ್ನಿಂದ ಹೊರಗೆ ತೆಗೆದ ಕೆಲವೇ ನಿಮಿಷದಲ್ಲೇ ಕರಗಿಹೋಗುತ್ತೆ. ಆದರೆ ಇಲ್ಲೊಬ್ಬ ಆಹಾರ ತಜ್ಞ ಎಷ್ಟೇ ಬಿಸಿಲಿದ್ದರೂ ಕರಗದೇ ಇರುವಂತಹ ಐಸ್‌ಕ್ರೀಮ್ ತಯಾರಿಸಿದ್ದಾರೆ. ನ್ಯೂಯಾರ್ಕ್‌ನ ರಾಬ್ ಕೊಲಿಗೊನ್ ಅನ್ನೋರು ಈ ಐಸ್‌ಕ್ರೀಮ್ ತಯಾರಿಸಿದ್ದು ಇದಕ್ಕೆ ಗ್ಯಾಸ್ಟ್ರೋನಾಟ್ ಅಂತ ಹೆಸರಿಡಲಾಗಿದೆ.… ಮುಂದೆ ಓದಿ

Read More

ನಾಯಿ ಹಾಲು ಕುಡಿದೇ ಬೆಳೆಯುತ್ತಿದ್ದಾನೆ !

ರುಡ್ಯಾರ್ಗ್ ಕಿಪ್ಲಿಂಗ್‌ನ ಮೌಗ್ಲಿಗೆ ಹೋಲುವ ೧೦ ವರ್ಷದ ಬಾಲಕನೊಬ್ಬ ಸುಮಾರು ಎರಡು ವರ್ಷವಾಗಿರುವಾಗಿನಿಂದಲೂ ಬೀದಿ ನಾಯಿ  ಹಾಲು ಕುಡಿಯುತ್ತಿದ್ದಾನೆ. ಮೂಕ ಬಾಲಕ ಮೋಹಿತ್ ಕುಮಾರ್ ಪೋಷಕರು ಮಗನ ಈ ಚಟ ಬಿಡಿಸಲು ಶತಾಯ ಗತಾಯ ಯತ್ನಿಸುತ್ತಿದ್ದಾರೆ. ಈ ಬಾಲಕ ಸುಮಾರು ಎರಡು… ಮುಂದೆ ಓದಿ

Read More

ಅದಕ್ಷ ನೌಕರರಿಗಿಲ್ಲ ವಾರ್ಷಿಕ ವೇತನ ಹೆಚ್ಚಳ

ನಿರೀಕ್ಷೆಯಂತೆ ಕಾರ್ಯನಿರ್ವಹಿಸದ ಕೇಂದ್ರ ಸರಕಾರಿ ನೌಕರರಿಗೆ ವಾರ್ಷಿಕ ವೇತನ ಹೆಚ್ಚಳವಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ. ಭಡ್ತಿಗೆ ಕೇಂದ್ರ ಸರಕಾರಿ ನೌಕರರ ಕಾರ್ಯಕ್ಷಮತೆಯನ್ನು ಗುಡ್ ಬದಲು ವೆರಿಗುಡ್ ಇರಬೇಕೆಂದು ನಿರ್ಧರಿಸಲಾಗಿದೆ, ಎಂದು ಏಳನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ವಿತ್ತ… ಮುಂದೆ ಓದಿ

Read More

ಏರ್‌ಸೆಲ್ ಲೈಫ್ ಬೋಟ್ ಕಳವು

ಇತ್ತೀಚಿನ ದಿನಗಳಲ್ಲಿ ಜಾಹೀರಾತು ಎಂಬುದು ಎಲ್ಲಾ ಎಲ್ಲೆಗಳನ್ನು ದಾಟಿ ಬೆಳೆಯುತ್ತಿದ್ದು, ಹೊಸ ಆಲೋಚನೆಗಳು ಅಲ್ಲಿ ಸ್ಥಾನ ಪಡೆದಿವೆ. ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವುದರೊಂದಿಗೆ ತಮ್ಮ ವಸ್ತುವನ್ನು ಬ್ರ್ಯಾಂಡಿಂಗ್ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಹೀಗೆ ಪ್ರವಾಹ, ಮಳೆ ನೀರು ತುಂಬಿಕೊಂಡರೆ ಜನ ಸಾಮಾನ್ಯರಿಗೆ ಸಹಾಯವಾಗಲಿ… ಮುಂದೆ ಓದಿ

Read More

16 ವರ್ಷಗಳ ಉಪವಾಸ ಹೋರಾಟ ಅಂತ್ಯ

ಸೇನಾಪಡೆಗಳ ದೌರ್ಜನ್ಯದ ವಿರುದ್ಧ ಕಳೆದ 16 ವರ್ಷಗಳಿಂದ ಸುದೀರ್ಘವಾಗಿ ಅಮರಣಾಂತ ಉಪವಾಸ ಸತ್ಯಾಗ್ರಹದ ಹೋರಾಟ ನಡೆಸುತ್ತಿದ್ದ ಮಣಿಪುರದ ಐರನ್ ಲೇಡಿ ಎಂದೇ ಹೆಸರಾಗಿದ್ದ ಐರೋಮ್ ಶರ್ಮಿಳಾ ಇದೀಗ ತಮ್ಮ ಉಪವಾಸ ಸತ್ಯಾಗ್ರಹವನ್ನು ಆಗಸ್ಟ್ ೯ರಂದು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಅಲ್ಲದೇ ಆಕೆ ಮದುವೆಯಾಗಲು… ಮುಂದೆ ಓದಿ

Read More

ಚಿಕ್ಕಮಗಳೂರಿನಲ್ಲಿ ಐವರು ವಜಾ

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಕೆಲವು ಕಡೆಗಳಲ್ಲಿ ಅಂತ್ಯಗೊಂಡಿದ್ದು, ಕರ್ತವ್ಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಐವರನ್ನು ವಜಾಗೊಳಿಸಲಾಗಿದೆ. ಓರ್ವ ಕಂಡಕ್ಟರ್ ಸೇರಿದಂತೆ ನಾಲ್ಕು ಮಂದಿ ಚಾಲಕರನ್ನು ವಜಾಗೊಳಿಸಿ ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಡಿಸಿ ಅನಿಲ್ ಆದೇಶ ಹೊರಡಿಸಿದ್ದಾರೆ. ರೇವಣ್ಣಪ್ಪ, ಸುರೇಶ್, ಸಕಲೇಶ್‌ಪುರ ಡಿಪೋದ… ಮುಂದೆ ಓದಿ

Read More

ಮಾರ್ಗರೇಟ್ ಆಳ್ವ ಟೀಕೆಗೆ ಬೇಸರವಿಲ್ಲ

ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ನನ್ನ ಬಗ್ಗೆ ಟೀಕೆ ಮಾಡಿರುವುದಕ್ಕೆ ಬೇಸರವಿಲ್ಲವೆಂದು ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ. ನನ್ನ ಬಗೆಗಿನ ಟೀಕೆಗೆ ಬೇಸರವಿಲ್ಲ, ಆದರೆ ಹಿರಿಯ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ಎ.ಕೆ. ಆಂಟನಿ… ಮುಂದೆ ಓದಿ

Read More

ಸಮಸ್ಯೆಗಳನ್ನು ಬೇಗ ಪರಿಹರಿಸಿ: ಎಸ್.ಎಂ.ಕೃಷ್ಣ

ಸಾರಿಗೆ ನೌಕರರ ಸಮಸ್ಯೆಗಳನ್ನು ಬೇಗ ಪರಿಹರಿಸಿ. ಇಲ್ಲವಾದರೆ ಸಮಸ್ಯೆ ಜಟಿಲವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜ್ಯ ಸರಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನೌಕರರು ಕೈಗೊಂಡಿರುವ ರಾಜ್ಯಾದ್ಯಂತ ಮುಷ್ಕರ ಎರಡನೆಯ ದಿನಕ್ಕೆ ಕಾಲಿಟ್ಟಿದೆ.… ಮುಂದೆ ಓದಿ

Read More

ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ: ಡಿ.ಕೆ.ಶಿ

ಜೆಡಿಎಸ್ ಭಿನ್ನಮತೀಯ ಶಾಸಕರಿಗೆ ಹಣದ ಆಮಿಷ ನೀಡಿರುವ ವಿಚಾರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನನ್ನನ್ನು ಕೆಣಕದಿದ್ದರೆ ನಿದ್ದೆ ಬರುವುದಿಲ್ಲ ಎಂದು ಕಾಣಿಸುತ್ತದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ… ಮುಂದೆ ಓದಿ

Read More

ಪಿಐಎಲ್ ಅರ್ಜಿ ವಜಾ

ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿ ಸಲ್ಲಿಸಿದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿ ಜೆಡಿಎಸ್ ಮುಖಂಡ ಚಂದ್ರಶೇಖರ್ ಅವರು ಹೈಕೋರ್ಟ್ ರೀಟ್ ಅರ್ಜಿಯನ್ನು… ಮುಂದೆ ಓದಿ

Read More

Your Suggestions

we welcme your suggestion

Click Here to write suggestions

Quick Links

Sitemap
Copyright © 2018 . All Rights Reserved.
^ Back to Top