Sat 14 Oct 2017, 2:12PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಯಾತ್ರ ಸ್ಥಳಗಳು

ಸುಳ್ಯ ಪ್ರವಾಸಿ ವಿಡೀಯೋ ಕ್ಲಿಪಿಂಗ್ಸ್ ಗೆ ಇಲ್ಲಿ ಕ್ಲಿಕ್ ಮಾಡಿ:    http://youtu.be/NV5ngTsdy4

http://youtu.be/NV5ngTsdy4

 

ಕ್ರ.ಸ ಪ್ರವಾಸಿ ತಾಣ ಚಿತ್ರ
1  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ : ದಕ್ಷಿಣ ಭಾರತದಲ್ಲಿ ಅತ್ಯಂತ ಸುಪ್ರಸಿದ್ಧ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯವು ಲಕ್ಷಾಂತರ ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತಿದೆ. ಪೌರಾಣಿಕ ಹಿನ್ನಲೆಯ ಕುಮಾರಧಾರ ನದಿ ಇಲ್ಲಿ ಹರಿಯುತ್ತಿದೆ. ಚಾರಣಯೋಗ್ಯ ಪ್ರಸಿದ್ಧ ಕುಮಾರ ಪರ್ವತವೂ ಸೇರಿದಂತೆ ದಟ್ಟ ಪರ್ವತಗಳು ಸುತ್ತುವರಿದಿದೆ. ಶ್ರೀ ಸಂಪುಟ ನರಸಿಂಹ ಮಠ, ಬಯಲು ಗಣಪತಿ, ವನದುರ್ಗ ದೇವಸ್ಥಾನ, ಅಗ್ರಹಾರ ಸೋಮನಾಥ ದೇವಸ್ಥಾನ, ಆದಿ ಸುಬ್ರಹ್ಮಣ್ಯ ದೇವಸ್ಥಾನ ಇತ್ಯಾದಿಗಳಿವೆ. kukke
2 ಮೊಗರ್ಪಣೆ ಮೊಹಿಯುದ್ದೀನ್ ಜುಮಾ ಮಸೀದಿ : ಸುಳ್ಯದ ಮೊಗರ್ಪಣೆಯಲ್ಲಿರುವ ಮೊಹಿಯುದ್ದೀನ್ ಜುಮಾಮಸೀದಿಯು ಮುಸ್ಲಿಮರ ಪ್ರಧಾನ ಧಾರ್ಮಿಕ ಕೇಂದ್ರವಾಗಿದೆ. 2 ವರ್ಷಕ್ಕೊಮ್ಮೆ ಇಲ್ಲಿ ಉರೂಸ್ ನಡೆಯುತ್ತದೆ. ವರ್ಷಕ್ಕೊಮ್ಮೆ ರಾತೀಬ್ ಹಬಾಬ್ ಆಚರಿಸಲಾಗುತ್ತದೆ. mogarpane
3  ಸೈಂಟ್ ಬ್ರಿಜಿಡ್ಸ್ ಚರ್ಚ್ ಬೀರಮಂಗಲ : ಸುಳ್ಯದ ಲಾಲ್ ಬಹದ್ಧೂರ್ ಶಾಸ್ತ್ರಿ ಸರ್ಕಲ್‌ನಿಂದ 100 ಮೀ. ದೂರದಲ್ಲಿರುವ ಸೈಂಟ್ ಬ್ರಜಿಡ್ಸ್ ಚರ್ಚ್ ಕ್ರೈಸ್ತ ಧರ್ಮದವರ ಪ್ರಧಾನ ಧಾರ್ಮಿಕ ಕೇಂದ್ರ. ಈ ಸಂಸ್ಥೆ ವತಿಯಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತದೆ. church
4  ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೋಡಿಕಾನ
ಸುಳ್ಯ – ಮಡಿಕೇರಿ ರಸ್ತೆಯ ಅರಂತೋಡಿನಿಂದ ಮಹಾದ್ವಾರದ ಮೂಲಕ 6 ಕಿ.ಮೀ ದೂರದಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೋಡಿಕಾನ ಇಲ್ಲಿ ಪ್ರತಿ ವರ್ಷ ಎಪ್ರೀಲ್ ತಿಂಗಳಲ್ಲಿ 1 ವಾರಗಳ ಕಾಲ ವಿಜೃಂಭಣೆ ವಿಜೃಂಭಣೆಯಿಂದ ಜಾತ್ರೋತ್ಸವ ನಡೆಯುತ್ತದೆ.ದೀಪಾವಳಿಯಿಂದ ಆರಂಭಗೊಂಡು ಪತ್ತನಾಜೆಯ ತನಕ ವಿವಿಧ ಧಾರ್ಮಿಕ ಸೇವಾ ಕಾರ್ಯ ಕ್ರಮಗಳನ್ನು ನಡೆಸಲಾಗುತ್ತದೆ. ಸೇವಾ ರೂಪದಲ್ಲಿ ಹರಿಕೆಯ ರಂಗಪೂಜೆಯನ್ನು ಧನುಸಂಕ್ರಮಣದಿಂದ ಪತ್ತನಾಜೆಯವರೆಗೆ ನಡೆಸಬಹುದಾಗಿದೆ.
mallikarjuna
5 ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನ : ಸುಳ್ಯದ ಹೃದಯ ಭಾಗದಲ್ಲಿರುವ ಶ್ರೀ ಚೆನ್ನಕೇಶವ ದೇವಸ್ಥಾನ ಸುಳ್ಯದ ಪಾಲಿಗೆ ಪ್ರಧಾನ ಧಾರ್ಮಿಕ ಕೇಂದ್ರ. ಇದು ಸುಮಾರು 600 ರಿಂದ 800 ವರ್ಷಗಳ ಹಿಂದೆ ಬಲ್ಲಾಳ ಅರಸರ ಕಾಲದಲ್ಲಿ ಸ್ಥಾಪಿಸಲ್ಪಟ್ಟಿತೆಂಬ ಪ್ರತೀತಿ ಇದೆ. ದೇವಸ್ಥಾನವು ವರ್ಷದಿಂದ ವರ್ಷಕ್ಕೆ ಜೀರ್ಣೋದ್ಧಾರಗೊಳ್ಳುತ್ತಿದ್ದು ವಿಶಾಲವಾದ ಸಭಾಂಗಣದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿದೆ. ದೇವಾಲಯದ ಆಸುಪಾಸಿನಲ್ಲಿ ಭಗವತಿ ಸಾನ್ನಿಧ್ಯ, ಕಾಡೆತಿ ದೈವ ಸಾನಿಧ್ಯ, ವಾಲಸಿರಿ ಮಜಲು ಇದೆ. ಪ್ರತೀ ವರ್ಷ ಜನವರಿ ತಿಂಗಳಲ್ಲಿ 10 ದಿನಗಳ ಕಾಲ ಅದ್ದೂರಿಯಾಗಿ ಜಾತ್ರೋತ್ಸವವು ನಡೆಯುತ್ತದೆ 

 

 chennakeshava

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top