ಮಳೆ ನಿಂತರೂ ಬಿ.ಇ.ಒ. ಕಚೇರಿ ಎದುರು‌ ನೀರು ಇನ್ನೂ ಇಂಗಿಲ್ಲ..!

0

ರಸ್ತೆ‌ ಬದಿ ಪೈಪ್ ಒಡೆದು ನೀರು ಪೋಲಾಗುತ್ತಿದೆ : ಯಾರಿಗೇಳೋಣ ಈ ಪ್ರಾಬ್ಲಂ

ಮಳೆ ನಿಂತು ದಿನಗಳು ಕಳೆದರೂ ಬಿ.ಇ.ಒ. ಕಚೇರಿ ಎದುರು‌ ಮಾತ್ರ ನೀರು ಇನ್ನೂ ಇಂಗಿಲ್ಲ..! ಈ ಸಮಸ್ಯೆಯಿಂದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬರುವವರು ತೊಂದರೆ ಅನುಭವಿಸುವಂತಾಗಿದೆ.

ಬಿ.ಇ.ಒ. ಕಚೇರಿಯ ಕಂಪೌಂಡ್ ನ ರಸ್ತೆ ಬದಿಯಲ್ಲಿ ಅಳವಡಿಸಲಾಗಿರುವ ಪೈಪ್ ಲೀಕೇಜ್ ಆಗಿ ನೀರು ಪೋಲಾಗುತ್ತಿದೆ. ಇದನ್ನು ಗಮನಿಸಿ ಸಂಬಂಧ ಪಟ್ಟವರು ಅಥವಾ ಈ ಭಾಗದ ಜನಪ್ರತಿನಿಧಿಗಳು ಸರಿ ಪಡಿಸಬೇಕೆಂದು ಆಗ್ರಹ‌ ಕೇಳಿ ಬಂದಿದೆ.