Sat 14 Oct 2017, 3:07PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಬಿಜೆಪಿಯವರಿಗೆ ರಾಜ್ಯದ ಹಿತ ಮುಖ್ಯವಲ್ಲ – ಪಕ್ಷ ರಾಜಕೀಯವೇ ಮುಖ್ಯ : ದಿವ್ಯಪ್ರಭ

Thursday, September 22nd, 2016 | sulliaeditor | no responses

Divyaprabha pathrikagoshtiಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ಕರೆದ ಸರ್ವಪಕ್ಷ ಸಭೆಗೆ ಗೈರು ಹಾಜರಾಗುವ ಮೂಲಕ ಬಿಜೆಪಿಯವರು ರಾಜ್ಯದ ಬಗ್ಗೆ ತಮಗಿರುವ ಕಾಳಜಿ ಏನೆಂಬುದನ್ನು ತೋರಿಸಿಕೊಂಡಿದ್ದಾರೆ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ ಆರೋಪಿಸಿದ್ದಾರೆ. ಇಂದು ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಹೇಳಿದ ಅವರು “ಸರ್ವ ಪಕ್ಷ ಸಭೆಗೆ ಇತರ ಎಲ್ಲಾ ಪಕ್ಷದವರು ಹೋಗಿದ್ದಾರೆ. ಅದರೆ ಬಿಜೆಪಿಯವರು ಮಾತ್ರ ಹೋಗಿಲ್ಲ. ರಾಜ್ಯದಲ್ಲಿ ಬಿಜೆಪಿಯ ಸಂಸದರೆ ಹೆಚ್ಚು ಇದ್ದಾರೆ. ಅವರೆಲ್ಲ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ. ಎತ್ತಿನ ಹೊಳೆ ವಿಚಾರದಲ್ಲಿಯೂ ಅವರು ಇದೇ ರೀತಿ ವರ್ತಿಸಿದ್ದಾರೆ. ಕಸ್ತೂರಿ ರಂಗನ್ ವರದಿಯ ವಿರುದ್ಧ ಹೋರಾಟ ಮಾಡಿದ್ದವರು ಇಂದು ಬಿಜೆಪಿಯೇ ಕೇಂದ್ರ ಅಧಿಕಾರದಲ್ಲಿ ಇದ್ದರೂ ಏನು ಮಾಡಿಲ್ಲ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಇಂದಿರಾ ರೈ, ಪದ್ಮಶೀಲ ಮಾಣಿಬೆಟ್ಟು, ಸುಜಯ ಕೃಷ್ಣ, ಜಯಲತಾ ಅರಂಬೂರು ಮತ್ತು ಶ್ರೀಮತಿ ಲಲಿತಾ ಬಾಬು ಗೌಡ ಮುಪ್ಪೇರ್ಯ ಉಪಸ್ಥಿತರಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top