Thu 19 Oct 2017, 11:41PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಅಡಿಕೆ ಖರೀದಿ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಕೇಂದ್ರ ಸರ್ಕಾರ ನಿರ್ಧಾರ

Friday, December 9th, 2016 | sulliaeditor | no responses

ಅಡಿಕೆಯನ್ನು ಮಾರಾಟಕ್ಟೆ ಮಧ್ಯಪ್ರವೇಶ ಯೋಜನೆಯಡಿ ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅಡಿಕೆ ಬೆಳೆಗಾರರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ನೀಡಿದೆ.

ಪ್ರತಿ ಕೆ.ಜಿ ಚಾಲಿ ಅಡಿಕೆಗೆ 251  ರೂಪಾಯಿಯಂತೆ ಕೆಂಪು ಅಡಿಕೆಗೆ 270 ರಂತೆ ದರ ನಿಗದಿ ಪಡಿಸಿ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ದೆಹಲಿಯಲ್ಲಿ ತಿಳಿಸಿದ್ದಾರೆ. ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಕ್ಯಾಂಪ್ಕೋ ಸಂಸ್ಥೆ ಅಡಿಕೆ ಖರೀದಿಸಲಿದೆ. ಒಟ್ಟು ೪೦ ಸಾವಿರ ಟನ್ ಅಡಿಕೆ ಖರೀದಿಸಲು ನಿರ್ಧರಿಸಲಾಗಿದ್ದು, ಖರೀದಿ ಕೇಂದ್ರಗಳನ್ನು ಆರಂಭಿಸುವ ಕುರಿತು ಸಂಬಂಧಿಸಿದ ಸಂಸ್ಥೆಗಳೊಂದಿಗೆ ಚರ್ಚಿಸಿದ ಬಳಿಕ ರಾಜ್ಯ ಸರ್ಕಾರವೇ ನಿರ್ಧಾರ ಕೈಗೊಳ್ಳಲಿದೆ ಎಂದವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯ ಪ್ರವೇಶಕ್ಕೆ ಮುಂದಾಗಿದ್ದರಿಂದ ಅಡಿಕೆಯ ದರ ಸಹಜವಾಗಿಯೇ ಹೆಚ್ಚಲಿದ್ದು, ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲಿದೆ. ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಅಡಿಕೆ ಖರೀದಿಸುತ್ತಿದ್ದ ಖರೀದಿದಾರರ ಮತ್ತು ಮಧ್ಯವರ್ತಿಗಳ ದೌರ್ಜನ್ಯ ಕೊನೆಗೊಳ್ಳಲಿದೆ ಎಂದವರು ಹೇಳಿದ್ದಾರೆ. ಯೋಜನೆಯಡಿ ರಾಜ್ಯ ಸರ್ಕಾರವನ್ನು ನೋಡೆಲ್ ಏಜೆನ್ಸಿಯನ್ನಾಗಿ ಪರಿಗಣಿಸಲಾಗಿದ್ದು, ಗರಿಷ್ಠ 18 ಸಾವಿರ ಟನ್ ಚಾಲಿ ಹಾಗೂ12 ಸಾವಿರ ಟನ್ ಕೆಂಪಡಿಕೆ ಖರೀದಿಸಲಾಗುತ್ತದೆ. ಕ್ಯಾಂಪ್ಕೋ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ 160 ಕೋಟಿ ಅನುದಾನ ನೀಡಲಿದೆ ಎಂದವರು ಹೇಳಿದ್ದಾರೆ.
ಹಳೆ ಅಡಿಕೆ ಬಡ, ಮಧ್ಯಮ ವರ್ಗದವರಲ್ಲಿ ಈಗ ಸಂಗ್ರಹವಿಲ್ಲ. ಹಾಗಾಗಿ ಹೊಸ ಅಡಿಕೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಹಾಗಾದಾಗ ಮಾತ್ರ ಈ ಯೋಜನೆ ಕೃಷಿಕರಿಗೆ ಪ್ರಯೋಜನವಾಗಬಹುದು. ಇಲ್ಲದಿದ್ದರೆ ಅಡಿಕೆ ಸಂಗ್ರಹಿಸಿದ ವ್ಯಾಪಾರಿಗಳಿಗಷ್ಟೇ ಲಾಭವಾಗಬಹುದು ಎನ್ನುತ್ತಾರೆ ಕೃಷಿಕ ಸದಾನಂದ ಮಾವಾಜಿ.

ತಡವಾಗಿಯಾದರೂ ಸರ್ಕಾರ ಎಚ್ಚೆತ್ತುಕೊಂಡಿದೆ. ಆದರೆ ಅವೈಜ್ಷಾನಿಕವಾಗಿ ಉತ್ಪಾದನಾ ವೆಚ್ಚವನ್ನು ನಿಗದಿ ಮಾಡಲಾಗಿದೆ. ಗೊಬ್ಬರ, ನೀರಾವರಿ ಮಾತ್ರ ಗಣನೆಗೆ ತೆಗೆದುಕೊಂಡು ಉತ್ಪಾದನಾ ವೆಚ್ಚ ನಿಗದಿ ಮಾಡಿದ್ದು ಸರಿಯಲ್ಲ. ಇದರಲ್ಲಿ ರೈತನ ಶ್ರಮವೂ ಸೇರಬೇಕು. ಕನಿಷ್ಠ ೩೫೦ ರೂಪಾಯಿ ಉತ್ಪಾದನಾ ವೆಚ್ಚವೆಂದು ಘೋಷಿಸಬೇಕು ಎಂಬುದು ರೋಹಿತ್ ಕೊಯಿಂಗೋಡಿ ಅವರ ಅನಿಸಿಕೆ.

ಒಟ್ಟಿನಲ್ಲಿ ರೈತರಿಗೆ ಸ್ವಲ್ಪ ಮಟ್ಟಿನ ಖುಷಿಯನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ಅದು ಜಾರಿಯಾದಾಗ ಏನೆಲ್ಲಾ ಷರತ್ತುಗಳನ್ನು ವಿಧಿಸಲಾಗುತ್ತದೆ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top