Tue 27 Jun 2017, 2:12PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಸ್ವಚ್ಚತೆ ಆದ್ಯತೆ ಸಂಘ ಸಂಸ್ಥೆಗಳ ದಿನಚರಿಯಾಗಲಿ – ಚಿತ್ರಾ.ಬಿ.ರಾವ್

Tuesday, January 10th, 2017 | sulliaeditor | no responses

ಸುಬ್ರಹ್ಮಣ್ಯ: ಪರಿಸರ ಸಮೃದ್ಧಿ ಮತ್ತು ಸ್ವಚ್ಚತೆಗೆ ಗಣನೀಯ ಪ್ರಮಾಣದ ಗಮನ ನೀಡುವುದು ಸಂಘ ಸಂಸ್ಥೆಗಳ ಧೇಯ್ಯವಾಗಬೇಕು. ಆಹಾರವು ಮಾನವರಿಗೆ ಪ್ರಧಾನವಾದ ಸಂಪತ್ತು. ಆಹಾರವು ಮಾನವರನ್ನು ಬೆಳೆಸುವ ಪ್ರಧಾನ ಅಂಗ. ಆಹಾರವಿಲ್ಲದೆ ಅಸಂಖ್ಯಾತರು ಕಷ್ಟ ಪಡುವುದನ್ನು ನಾವು ಕಾಣುತ್ತೇವೆ. ಆಹಾರವನ್ನು ಪೋಲು ಮಾಡದೆ ಉಪಯೋಗಿಸುವ ಜಾಣ್ಮೆ ಪ್ರತಿಯೊಬ್ಬರಲ್ಲಿ ಅಧಿಕವಾಗಬೇಕು. ಇವುಗಳನ್ನು ಮಾತೆಯರು ತಮ್ಮ ಮನೆಗಳಲ್ಲಿ ಅನುಸರಿಸಬೇಕು. ಹಾಗಾದಾಗ ಸಮಾಜದಲ್ಲಿ ಈ ಪರಿಪಾಠ ಬೆಳೆದು ನಿಲ್ಲುತ್ತದೆ ಎಂದು ಇನ್ನರ್‌ವ್ಹೀಲ್ ಡಿಸ್ಟ್ರಿಕ್ಟ್ ೩೧೮ನ ಜಿಲ್ಲಾಧ್ಯಕ್ಷೆ ಚಿತ್ರಾ.ಬಿ.ರಾವ್ ಹೇಳಿದರು.

08sub-01 copy 08sub-02 copy

ಸುಬ್ರಹ್ಮಣ್ಯ ಇನ್ನರ್‌ವ್ಹೀಲ್ ಕ್ಲಬ್‌ಗೆ ಅಧಿಕೃತವಾಗಿ ಭಾನುವಾರ ಭೇಟಿ ನೀಡಿ, ಸುಬ್ರಹ್ಮಣ್ಯದ ಮಹಾಮಾಯಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಇನ್ನರ್‌ವ್ಹೀಲ್ ಕ್ಲಬ್ ಮಹತ್ವದ ಕೊಡುಗೆ ನೀಡುತ್ತಿದೆ. ಮಹಿಳೆಯರಲ್ಲಿ ಸಮಾಜಮುಖಿ ವ್ಯಕ್ತಿತ್ವದಲ್ಲಿನ ಸುಖವನ್ನು ಈ ಸಂಸ್ಥೆ ನೀಡುತ್ತದೆ. ಸ್ವಾವಲಂಬಿ ಜೀವನದ ಕಡೆಗೆ ಸ್ತ್ರೀಯರು, ವನಿತೆಯರು ಸಬಲರಾಗಲು ಸಾಧ್ಯ. ಮಹಿಳೆಯರು ಸಮಾಜ ಸೇವೆಯನ್ನು ನಡೆಸುವುದರ ಮೂಲಕ ಸಮಷ್ಠಿಯ ಹಿತ ಕಾಪಾಡುವ ಜವಬ್ದಾರಿಯ ಜ್ಞಾನವನ್ನು ಈ ಸಂಸ್ಥೆ ಬೋಧಿಸುತ್ತದೆ. ಸರ್ವರ ಹಿತ ಕಾಪಾಡುವ ಮನಸು ಮಾತೆಯಲ್ಲಿ ಇದೆ ಎನ್ನುವುದನ್ನು ಇನ್ನರ್‌ವ್ಹೀಲ್ ಸಂಸ್ಥೆ ಜಗತ್ತಿಗೆ ಸಾರಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಇನ್ನರ್‌ವ್ಹೀಲ್ ಅಧ್ಯಕ್ಷೆ ಸೌಮ್ಯಾ ಬಿ ಪೈ ವಹಿಸಿದ್ದರು. ಸುಬ್ರಹ್ಮಣ್ಯ ಇನ್ನರ್‌ವ್ಹೀಲ್ ಕ್ಲಬ್‌ನ ಪೂರ್ವಾಧ್ಯಕ್ಷೆ ಶೋಭಾ ಗಿರಿಧರ್, ನಿಯೋಜಿತ ಅಧ್ಯಕ್ಷೆ ಜಾನಕಿ ವೆಂಕಟೇಶ್, ಕಾರ್ಯದರ್ಶಿ ಸಚಿತಾ ಗೋಪಾಲ್, ಕೋಶಾಧಿಕಾರಿ ಲೀಲಾ ಕುಮಾರಿ, ಸಂಪಾದಕಿ ಸೌಮ್ಯಾ ದಿನೇಶ್, ನಿರ್ದೇಶಕಿ ಭಾರತಿ ದಿನೇಶ್ ವೇದಿಕೆಯಲ್ಲಿದ್ದರು.
ಸಮಾರಂಭದಲ್ಲಿ ಪ್ರಶಸ್ತಿ ವಿಜೇತ ಕುಮಾರಸ್ವಾಮಿ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ ಎಚ್.ಅವರನ್ನು ಸನ್ಮಾನಿಸಲಾಯಿತು. ಕ್ಲಬ್‌ನ ವತಿಯಿಂದ ಚಿತ್ರಾ.ಬಿ.ರಾವ್ ಅವರನ್ನು ಗೌರವಿಸಲಾಯಿತು. ನೂತನ ಸದಸ್ಯ ಸವಿತಾ ಅವರನ್ನು ಕ್ಲಬ್‌ಗೆ ಸೇರ್ಪಡೆಗೊಳಿಸಲಾಯಿತು. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಬಾಲಕ ಶಶಿಕುಮಾರ್ ದೇವರಗದ್ದೆ ಅವರಿಗೆ ಕ್ಲಬ್ ವತಿಯಿಂದ ೫೦೦೦ರೂ ಧನ ಸಹಾಯ ಹಸ್ತಾಂತರಿಸಲಾಯಿತು. ಸಮಾರಂಭದಲ್ಲಿ ಇನ್ನರ್‌ವ್ಹೀಲ್ ಸಂಚಿಕೆ ಸೌರಭವನ್ನು ರೋಟರಿ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಪೈ ಬಿಡುಗಡೆಗೊಳಿಸಿದರು.
ಮಾಲಿನಿ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ಶ್ರುತಿ ಮಂಜುನಾಥ್ ಪ್ರಾರ್ಥಸಿ, ಇನ್ನರ್‌ವ್ಹೀಲ್ ಧ್ಯೇಯವನ್ನು ಸರೋಜಾ ಮಾಯಿಲಪ್ಪ ವಾಚಿಸಿದರು. ಸೌಮ್ಯಾ ಬಿ ಪೈ ಸ್ವಾಗತಿಸಿ. ಸಚಿತಾ ಗೋಪಾಲ್ ವರದಿ ವಾಚಿಸಿದರು. ಜಾನಕಿ ವೆಂಕಟೇಶ್ ವಂದಿಸಿದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top