Mon 27 Feb 2017, 10:00AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಜ.18ರಂದು ಸ್ಕೌಟ್ಸ್ ಗೈಡ್ಸ್ ಮೇಳ, ಕಬ್, ಬುಲ್‌ಬುಲ್ ಉತ್ಸವ ಹಾಗೂ ರೋವರ್‍ಸ್ ರೇಂಜರ್‍ಸ್ ಸಮಾವೇಶ

Wednesday, January 11th, 2017 | sulliaeditor | no responses

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳಿಯ ಸಂಸ್ಥೆ ಸುಳ್ಯದ ವತಿಯಿಂದ ಸ್ಕೌಟ್ಸ್ ಗೈಡ್ಸ್ ಮೇಳ, ಕಬ್, ಬುಲ್‌ಬುಲ್ ಉತ್ಸವ ಹಾಗೂ ರೋವರ‍್ಸ್ ರೇಂಜರ‍್ಸ್ ಸಮಾವೇಶ ಜ.೧೪ರಂದು ಸುಳ್ಯದ ಕೆವಿಜಿ ಪುರಭವನದಲ್ಲಿ ನಡೆಯಲಿದೆ.
ಸಮಿತಿ ಅಧ್ಯಕ್ಷ ಎಸ್.ಎಂ.ಬಾಪೂ ಸಾಹೇಬ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಬದುಕಿನಲ್ಲಿ ನಂಬಿಕೆ, ನಿಷ್ಠೆ, ಸ್ನೇಹಶೀಲ ನಡವಳಿಕೆ, ವಿಶ್ವ ಭಾತೃತ್ವ, ವಿನಯ, ಪ್ರಕೃತಿ ಪ್ರೇಮ, ಶಿಸ್ತು, ಸಾರ್ವಜನಿಕ ಆಸ್ತಿ ರಕ್ಷಣೆ, ಧೈರ್ಯ, ಮಿತವ್ಯಯ, ಕಾಯಾ ವಾಸಾ ಮನಸಾ ಪರಿಶುದ್ಧತೆ ಬೆಳೆಸುವುದು ಸ್ಕೌಟ್ ಗೈಡ್ಸ್ ಚಳುವಳಿಯ ಮುಖ್ಯ ಉದ್ದೇಶವಾಗಿದೆ. ಸಂಸ್ಥೆಯ ಪ್ರತಿ ವರ್ಷ ರ‍್ಯಾಲಿಯನ್ನು ನಡೆಸುತ್ತಿದ್ದು, ಈ ಬಾರಿಯ ಸಮಾವೇಶದಲ್ಲಿ ಸುಮಾರು ೫೦೦ಕ್ಕಿಂತಲೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ ಎಂದರು.
ಸಂಸ್ಥೆಯ ಮಹಾಪೋಷಕ ಡಾ.ಕೆ.ವಿ.ಚಿದಾನಂದ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಿಗ್ಗೆ ನಗರದಲ್ಲಿ ಪಥಸಂಚಲನ ನಡೆಯಲಿದ್ದು, ಎಸ್‌ಐ ಚಂದ್ರಶೇಖರ ಉದ್ಘಾಟಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಜಾರ್ಜ್ ಡಿ ಸೋಜ ಹೇಳಿದರು.
ಸಹಾಯಕ ಜಿಲ್ಲಾ ಆಯುಕ್ತ ಲಕ್ಷ್ಮೀಶ ರೈ, ಖಜಾಂಜಿ ಅಬೂಬಕರ್ ಕಟ್ಟೆಕಾರ‍್ಸ್, ಕಮಲಾಕ್ಷಿ ಟೀಚರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top