19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0

 

ಸುಮಾರು 19 ವರ್ಷಗಳಿಂದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ತಲೆಮೆರೆಸಿಕೊಂಡಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.


2003 ರಲ್ಲಿ ಸುಳ್ಯ ಶ್ರೀರಾಮ್ ಪೇಟೆಯಯಲ್ಲಿ ಕಾರ್ಯಚರಿಸುತ್ತಿದ್ದ ವಾಚ್ ವರ್ಕ್ಸ್ ಅಂಗಡಿಯಿಂದ ರಾತ್ರಿ ಸಮಯದಲ್ಲಿ ಅಂಗಡಿಯ ಬಾಗಿಲನ್ನು ಹೊಡೆದು ಸುಮಾರು 28ಕ್ಕೂ ಹೆಚ್ಚು ಬೆಲೆ ಬಾಳುವ ವಾಚುಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿತ್ತು.
ಈ ಕಳ್ಳತನಕ್ಕೆ ಸಂಬಂಧಿಸಿದ ಆರೋಪಿ ಕೇರಳದ ವೈನಾಡ್ ಜಿಲ್ಲೆಯ ವಯ್ತಿರಿ ತಾಲೂಕಿನ ಕಲ್ಲವಳಿಪಲ್ ನಿವಾಸಿ ಸಿದ್ದೀಕ್ ಎಂಬಾತನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನಿಂದ ಸಿದ್ದಿಕ್ ಪೊಲೀಸರ ಕಣ್ಣು ತಪ್ಪಿಸಿ 19 ವರ್ಷಗಳಿಂದ ನಾಪತ್ತೆಯಾಗಿದ್ದ.
ಇದೀಗ ಸುಳ್ಯ ಪೊಲೀಸರಿಗೆ ಆತ ವೈನಾಡಿನಲ್ಲಿ ಇರುವ ಮಾಹಿತಿ ತಿಳಿದು ಸುಳ್ಯ ಪೊಲೀಸರು ತೆರಳಿ ಆತನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ನಂತರ ಸುಳ್ಯ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದುಬಂದಿದೆ.