20 ವರ್ಷ ಶಾಸಕರಾಗಿ ಮಾಡಿದ ಅಭಿವೃದ್ದಿಯ ಶ್ವೇತಪತ್ರ ಹೊರಡಿಸಿ : ಸಂಪಾಜೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಸವಾಲು,

0

ಜನರ ಋಣ ತೀರಿಸದ ನೀವು ಹೇಗೆ ಮತ ಕೇಳುತ್ತೀರಿ ?*

ಕಳೆದ 20 ವರ್ಷಗಳಲ್ಲಿ ಈ ಭಾಗದಲ್ಲಿ ಶಾಸಕರಾಗಿದ್ದ ನೀವು ಮಾಡಿದ ಅಭಿವೃದ್ಧಿ ಕಾರ್ಯಗಳ ಶ್ವೇತಪತ್ರ ಹೊರಡಿಸಿ. ಅದರ ಮೇಲೆ ಜನರಿಂದ ಮತ ಕೇಳಿ ಎಂದು‌ ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಸವಾಲೆಸೆದಿದ್ದಾರೆ.

ಇಂದು ಸಂಪಾಜೆ ಗೇಟಿನ‌ ಬಳಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು‌ ಮಾತನಾಡಿದರು.ನಾನು ಚುನಾವಣೆ ಆರಂಭದ ದಿನದಿಂದಲೇ ಇಲ್ಲಿ 20 ವರ್ಷದಿಂದ ಶಾಸಕರಾಗಿದ್ದವರು ಕ್ಷೇತ್ರಕ್ಕೆ ಎಷ್ಟು ಅನುದಾನ‌ ತಂದಿದ್ದೀರಿ? ಅದನ್ನು‌ ಅಂಕಿ ಅಂಶ ಸಮೇತ ಜನರ ಮುಂದೆ ಇಡಿ ಎಂದು ಕೇಳುತ್ತಿದ್ದೇನೆ. ಇದುವರೆಗೆ ನೀಡಿಲ್ಲ. ತಂದಿರುವುದರಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಮನೆ ನಿರ್ಮಾಣಕ್ಕೆ ಎಷ್ಟು ಬಳಸಿದ್ದೀರಿ. ಮಾನವ ಪ್ರಾಣಿ ಸಂಘರ್ಷಕ್ಕೆ ಯಾವ ರೀತಿ ನಿಯಮ ರೂಪಿಸಿದ್ದೀರಿ? ಜನರ ಸಂಕಷ್ಟದ ಬಗ್ಗೆ ವಿಧಾನ ಸಭೆಯಲ್ಲಿ ಎಷ್ಟು ಪ್ರಶ್ನೆ ಮಾಡಿದ್ದೀರಿ? ಕಾರ್ಯಾಂಗವನ್ನು ಎಷ್ಟು ತರಾಟೆಗೆತ್ತಿದ್ದೀರಿ ಎಂದು ಶಾಸಕರಾಗಿ ನೀವು ಮಾಡಿದ ಕೆಲಸದ ವಿವರ ಇಟ್ಟು ಜನರ ಮುಂದೆ ಹೋಗಿ ಮತ ಕೇಳಿ. ಬೆಂಬಲಿಸಿದರೆ ಸ್ವಾಗತ. ಆದರೆ ನೀವು ಮಾಡಿದ ಕೆಲಸವನ್ನು‌ಹೇಳುದ ಧೈರ್ಯ ನಿಮಗಿಲ್ಲ. ಯಾಕೆಂದರೆ ಅಭಿವೃದ್ಧಿ ಯೇ ಆಗಿಲ್ಲ ಎಂದು ಹೇಳಿದರು.

“ನೀವು ನಿಮ್ಮ ಸುತ್ತ ಮೂರ್ನಾಲ್ಕು ಜನರನ್ನು ಇಟ್ಟುಕೊಂಡು, ಅವರನ್ನು ಕರೆದುಕೊಂಡು‌ ಜನರತ್ರ ಹೋಗಿ ಪೊನ್ನಣ್ಣ ಅಂತವನು, ಅವನು ಇಂತವನು ಎಂದು ಹೇಳಿ ನನ್ನ ತೇಜೋವಧೆ ಮಾಡ್ತೀರಿ. ನನ್ನ ವೈಯಕ್ತಿಕ ಟೀಕೆ ಮಾಡುತ್ತೀರಿ. ಅದನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ ನನ್ನ ಟೀಕೆಯ ಜನತೆಗೆ ಕ್ಷೇತ್ರದ ಜನರು ನೀವು ಮಾಡಿರುವ ಅಭಿವೃದ್ಧಿ ಕೆಲಸದ ಬಗ್ಗೆ ಎತ್ತಿದ ಪ್ರಶ್ನೆಗೆ ಉತ್ತರ ಕೊಡಬೇಕು. ಅಭಿವೃದ್ಧಿಯ ಶ್ವೇತಪತ್ರ ಹೊರಡಿಸಬೇಕು ಎಂದು ಹೇಳಿದರು.

ಕಳೆದ ಬಾರಿ ಇದೇ ಕೊಯನಾಡಿನಲ್ಲಿ ಕಿಂಡಿ ಅಣೆಕಟ್ಟು ಸಮಸ್ಯೆಗಳನ್ನು ಹೇಳಿ ಆತ್ಮಹತ್ಯೆ ಮಾಡಿಕೊಳ್ಳುವ ಮಾತನ್ನಾಡಿದ ಜನರಿಗೆ ಏನು ಬೇಕಾದ್ರ ಮಾಡಿ ಎಂದು ಹೇಳಿದ ಶಾಸಕರು ನೀವು.‌ಜನರ ಕಷ್ಟಕ್ಕೆ ನೀವು ಸ್ಪಂದಿಸಿಲ್ಲ. ಈಗ ಹೇಗೆ ಬಂದು‌ ಮತ ಕೇಳುತ್ತೀರಿ? ಆಯ್ಕೆ ಮಾಡಿದ‌ ಜನರ ಋಣ ತೀರಿಸಲು‌ ನಿಮಗಾಗಿಲ್ಲ. ಅಭಿವೃದ್ಧಿ ಪರವಾಗಿ ಒಂದೇ ಒಂದು ಮಾತು ಆಡುತ್ತಿಲ್ಲ.‌ ಬದಲಾಗಿ ಜಾತಿ ಜಾತಿಗಳ, ಧರ್ಮ ಧರ್ಮಗಳನ್ನು ಒಡೆದು ಕೀಳುಮಟ್ಟದ ರಾಜಕೀಯ‌ ಮಾಡುತ್ತಿದ್ದೀರಿ ಎಂದು ಹೇಳಿದರು.

” ನಮಗೆ ಈ ಬಾರಿ‌ ಜನರು ಆಶೀರ್ವಾದ ಮಾಡುತ್ತಾರೆ. ಈಭಾಗದ ಸಮಸ್ಯೆಗಳನ್ನು ಈಗಾಗಲೇ ಅರಿತಿರುವ ನಾನು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತೇನೆ. ಭ್ರಷ್ಟಾಚಾರ ರಹಿತ ಆಡಳಿತ‌ ನೀಡುತ್ತೇನೆ ಎಂದು ಹೇಳಿದರಲ್ಲದೆ, ಕೊರೊನಾ ಸಂದರ್ಭದಲ್ಲಿ, ಅಲ್ಲದೆ ಸಾಮಾಜಿಕ, ಧಾರ್ಮಿಕ ವಾಗಿ ತೊಡಗಿಸಿಕೊಂಡಿರುವ‌ ಕುರಿತು, ಪ್ರಣಾಳಿಕೆಯ‌ ವಿಚಾರದ ಕುರಿತು ಅವರು‌ ಮಾತನಾಡಿದರು.