Tue 17 Oct 2017, 9:20AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಎಣ್ಮೂರು ಭಜನಾಮಂದಿರದಿಂದ ಕೇರ್ಪಡ ದೇವಸ್ಥಾನದವರೆಗೆ ’ಅಮ್ಮನೆಡೆ ನಮ್ಮ ನಡೆ’

Wednesday, September 20th, 2017 | sulliaeditor | no responses

ಎಡಮಂಗಲ ಗ್ರಾಮದ ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡದಲ್ಲಿ ಸೆ.೨೦ರಂದು ನವರಾತ್ರಿ ಉತ್ಸವ ಆರಂಭಗೊಂಡಿತು. ಇದರ ಅಂಗವಾಗಿ ಭಕ್ತರನ್ನು ಒಟ್ಟುಗೂಡಿಸುವ ಕಾರ್ಯಕ್ರಮ ನಮ್ಮ ನಡೆ ಅಮ್ಮನೆಡೆಗೆ ಕಾಲ್ನಡಿಗೆಯ ಮೂಲಕ ಪಾದಯಾತ್ರೆಯು ಬೆಳಿಗ್ಗೆ ೮.೩೦ಕ್ಕೆ ಎಣ್ಮೂರು ಶ್ರೀ ಭಜನಾ ಮಂದಿರದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ ಸುಬ್ರಹ್ಮಣ್ಯ ರವರು ದೀಪ ಬೆಳಗಿಸಿ ಉದ್ಘಾಟಿಸಿ, ತೆಂಗಿನಕಾಯಿ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಾದಯಾತ್ರೆಯಲ್ಲಿ ತಾಲೂಕಿನಿಂದ ಅಲ್ಲದೆ ಪರವೂರಿನಿಂದಲೂ ಭಕ್ತಾದಿಗಳು, ಸಂಘ ಸಂಸ್ಥೆಗಳು, ನಿಂತಿಕಲ್ಲು ಕೆ.ಎಸ್.ಜಿ. ಸಮೂಹ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಕಟೀಲು ಕ್ಷೇತ್ರದಲ್ಲಿ ನಡೆಸಿದ ನಮ್ಮ ನಡೆ ಅಮ್ಮನೆಡೆಗೆ ಸಂಚಾಲಕ ಸಂದೀಪ್ ರೈ ವಾಹನ ಚಾಲಕರು, ಎಡಮಂಗಲ, ಎಣ್ಮೂರು, ಮುರುಳ್ಯ, ಕಲ್ಮಡ್ಕ, ಬೆಳ್ಳಾರೆ, ಪಂಜ, ಬಾಳಿಲ ಈ ಎಲ್ಲಾ ಗ್ರಾಮದ ಭಕ್ತಾದಿಗಳು ಭಾಗವಹಿಸಿದ್ದರು.
ಧಾರ್ಮಿಕ ಸಭೆಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಕ್ಷಯ್ ಆಳ್ವ ಪಿ.ಡಿ. ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಶ್ರೀ ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ವಿಭಾಗದ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಸಂದೀಪ್ ಶೆಟ್ಟಿ ಸಂಚಾಲಕರು ಕಟೀಲು ಕ್ಷೇತ್ರ ಅಮ್ಮನೆಡೆಗೆ, ಎಣ್ಮೂರು ಭಜನಾ ಮಂದಿರದ ಸಂಚಾಲಕ ರಘುನಾಥ ರೈ, ನಮ್ಮ ನಡಿಗೆ ಅಮ್ಮನಿಗೆ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್, ಸೋಮನಾಥ ಸುವರ್ಣ, ಡಾ. ರಘು ವೇದಿಕೆಯಲ್ಲಿದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಗುತ್ತು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top