Sat 14 Oct 2017, 3:13PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಬಾಲೆಂಬಿ : ಹಿಂದೂ ಜಾಗರಣ ವೇದಿಕೆ ಗೋಪೂಜೆ

Monday, September 25th, 2017 | sulliaeditor | no responses

ಹಿಂದು ಜಾಗರಣ ವೇದಿಕೆ ಚೆಂಬು ಘಟಕದ ವತಿಯಿಂದ ಚೆಂಬು ಗ್ರಾಮದ ಬಾಲೆಂಬಿಯಲ್ಲಿ ಗೋಪೂಜೆ ಮತ್ತು ಗೋವುಗಳನ್ನು ಮಂಗಳೂರಿನ ಗೋಶಾಲೆಗೆ ಕಳುಹಿಸುವ ಕಾರ್ಯಕ್ರಮ ನಡೆಯಿತು. ಗ್ರಾಮ ಪಂಚಾಯತ್‌ನ ಅಧ್ಯಕ್ಷರಾದ ಮಾಧವ ಪೊಯ್ಯಮಜಲುರವರು ಮಾತನಾಡಿ ಹಿಂದು ಜಾಗರಣ ವೇದಿಕೆಯವರ ಈ ಕಾರ್ಯಕ್ರಮವು ಶ್ಲಾಘನೀಯವಾದದ್ದು, ಇನ್ನು ಮುಂದೆಯು ಇಂತಹ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಶುಭಹಾರೈಸಿದರು. ಜಾಗರಣ ವೇದಿಕೆಯ ಸಂಚಾಲಕರಾದ ವಿಜಯ್ ನಿಡಿಂಜಿ ಮಾತನಾಡಿ ನಮ್ಮ ಗ್ರಾಮದಲ್ಲಿ ಅನೇಕರಿಗೆ ಅನಿವಾರ್ಯ ಕಾರಣಗಳಿಔದ ಗೋವುಗಳನ್ನು ಸಾಕಲು ಕಷ್ಟವಾಗುತ್ತಿತ್ತು. ಕೆಲವರು ಇದನ್ನು ದುರುಪಯೋಗಪಡಿಸಿಕೊಂಡು ಗೋವುಗಳನ್ನು ನೇರವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದರು. ಇದನ್ನು ಮನಗಂಡ ಜಾಗರಣ ವೇದಿಕೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಗ್ರಾಮದಲ್ಲಿ ಅಕ್ರಮ ಗೋ ಸಾಗಾಟದ ಮಾಹಿತಿಯಿದ್ದು ಜಾಗರಣ ವೇದಿಕೆ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡುತ್ತದೆ ಎಂದರು. ಈ ಕಾರ್ಯಕ್ರಮ ದಲ್ಲಿ ಜಾಗರಣ ವೇದಿಕೆಯ ಸುಧ ಹೊಸೂರ್, ದಿನೇಶ್ ಸಣ್ಣಮನೆ, ಚರಿತ ಎಕ್ಕಡ್ಕ, ಜೀವನ್ ನೆಲ್ಲಿಪುಣಿ, ಪ್ರಸನ್ನ, ಗುರು ಪ್ರಸಾದ್ ಮತ್ತು ಎಲ್ಲ ಸದಸ್ಯರು, ಪಶುವೈದ್ಯ ರಾದ ಡಾ.ಅಶೋಕ್, ಎಲ್ಲ ಗ್ರಾಮಸ್ಥರು, ಪುರೋಹಿತರಾದ ರಾಧಾಕೃಷ್ಣ ಉಪಸ್ಥಿತರಿದ್ದರು. ಕಲ್ಲುಗುಂಡಿಯ ಕಾರ್ಯಕರ್ತರು, ಕಲ್ಲುಗುಂಡಿ ಮೇಲಿನ ಪೇಟೆಯಿಂದ ಕೆಳಗಿನ ಪೇಟೆವರೆಗೆ ವಾಹನ ಮೆರೆವಣಿಗೆಯ ಮೂಲಕ ಬೀಳ್ಕೊಟ್ಟರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top