Fri 13 Oct 2017, 11:59AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಅರಣ್ಯಾಧಿಕಾರಿಗಳಿಗೆ ದಿಗ್ಬಂಧನ ಪ್ರಕರಣ : 14 ಮಂದಿಯ ಮೇಲೆ ದೂರು.. ಪೋಲೀಸರಿಂದ ನೋಟೀಸು-ಸರ್ಕಲ್ ಕಚೇರಿಗೆ ಊರವರ ದಂಡು

Monday, October 9th, 2017 | sulliaeditor | no responses

kalmakaru copy

ವೈಲ್ಡ್‌ಲೈಫ್ ವಿಭಾಗದ ಅರಣ್ಯಾ ಧಿಕಾರಿಗಳಿಗೆ ಬಾಳುಗೋಡಿನ ಕುಡು ಮುಂಡೂರಿನಲ್ಲಿ ಊರವರು ದಿಗ್ಬಂಧನ ವಿಧಿಸಿದ್ದ ವಿಚಾರವಾಗಿ ಅಧಿಕಾರಿಗಳು ೧೪ ಮಂದಿಯ ಮೇಲೆ ಪೋಲೀಸರಿಗೆ ದೂರು ನೀಡಿದ್ದ ಮತ್ತು ಈ ವಿಚಾರವಾಗಿ ಮಾತನಾಡಲು ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಗೆ ಹಾಜರಾಗುವಂತೆ ಆ ೧೪ ಮಂದಿಗೆ ಪೋಲೀಸರು ನೋಟೀಸು ಮಾಡಿದ ಹಾಗೂ ಸರ್ಕಲ್‌ರ ಕಚೇರಿಗೆ ಅವರು ಬರುವಾಗ ಊರಿನ ನೂರಾರು ಜನ ಬೆಂಬಲವಾಗಿ ಬಂದು ಆ ೧೪ ಮಂದಿಯ ಮೇಲೆ ಕೇಸು ದಾಖಲಿ ಸಬಾರದೆಂದು ಒತ್ತಾಯಿಸಿದ ಘಟನೆ ಅ.೮ ರಂದು ವರದಿಯಾಗಿದೆ.
ಕಲ್ಮಕಾರು, ಕೊಲ್ಲಮೊಗ್ರ, ಬಾಳುಗೋಡು, ಹರಿಹರಪಲ್ಲತ್ತಡ್ಕ, ಐನೆಕಿದು ಗ್ರಾಮಗಳ ಜನರು ಆನೆ ಕಾರಿಡಾರ್, ಮಾಧವ ಗಾಡ್ಗೀಲ್ ವರದಿ, ಕಸ್ತೂರಿರಂಗನ್ ವರದಿಗಳಿಂದಾಗಿ ಮನೆ ಮಠ ಕಳೆದುಕೊಳ್ಳಬೇಕಾಗಿ ಬರಬ ಹುದೆಂಬ ಆತಂಕದಿಂದ ಹೋರಾಟ ನಡೆಸುತ್ತಿರುವಾಗಲೇ ಪರಿಸರ ಸೂಕ್ಷ್ಮ ವಲಯಕ್ಕೆ ಈ ಗ್ರಾಮಗಳ ಕೆಲವು ಭಾಗಗಳನ್ನು ಸೇರಿಸಿರುವ ಕಾರಣ ತೀವ್ರ ಆಕ್ರೋಶಿತರಾಗಿದ್ದರು.
ಇದರ ಪರಿಣಾಮವಾಗಿ ಆ.೯ ರಂದು ಒಂದು ಬಾರಿ ಪುಷ್ಪಗಿರಿ ವನ್ಯ ಜೀವಿ ವಲಯದ ಅಧಿಕಾರಿಗಳಿಗೆ ಹರಿಹರಪಲ್ಲತಡ್ಕದಲ್ಲಿ ದಿಗ್ಬಂಧನ ವಿಧಿಸಿದ್ದರು. ಬಳಿಕ ಸೆ.೨೨ರಂದು ಬಾಳುಗೋಡು ಗ್ರಾಮದ ಕುಡು ಮುಂಡೂರು ಮೂಲಕ ತಮ್ಮ ಅರಣ್ಯ ಕ್ಯಾಂಪ್‌ಗೆ ವೈಲ್ಡ್ ಲೈಫ್ ಅಧಿಕಾರಿಗಳು ಹೋದ ವಿಷಯ ತಿಳಿದು ಗ್ರಾಮಸ್ಥರು ಸೇರಿ ಅವರನ್ನು ದಿಗ್ಬಂಧನಕ್ಕೊಳಪಡಿಸಿದ್ದರು. ಪೋಲೀಸ್ ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ದಿಗ್ಬಂಧನ ತೆರವುಗೊಂಡಿತ್ತು.
ಈ ಘಟನೆಯ ಬಳಿಕ ಪುಷ್ಪಗಿರಿ ವನ್ಯಜೀವಿ ವಲಯದ ರೇಂಜರ್‌ರವರು ಉದಯ ಕೊಪ್ಪಡ್ಕ, ಹಿಮ್ಮತ್ ಕೆ.ಸಿ, ಚಲನ್ ಕೊಪ್ಪಡ್ಕ, ಮಹೇಶ್ ಕೆ.ಪಿ, ಚಂದ್ರಹಾಸ ಶಿವಾಲ, ಕಿಶೋರ್ ವಾಡ್ಯಪ್ಪನ ಮನೆ, ಮೋನಪ್ಪ ಹೊ ಸೊಕ್ಕಲು, ನವೀನ್ ಕಟ್ರಮನೆ, ನಾರಾ ಯಣಪ್ಪ ವಾಡ್ಯಪ್ಪನ ಮನೆ, ನವೀನ್ ಕೆದಿಲ, ಜಯಪ್ರಕಾಶ್ ಕೂಜುಗೋಡು, ಶರತ್ ಕೂಜುಗೋಡು, ನರೇಂದ್ರ ಬಿಳಿಮಲೆ, ಸೋಮಶೇಖರ ಕಟ್ಟೆಮನೆ ಯವರ ಮೇಲೆ ಪೋಲೀಸರಿಗೆ ದೂರು ನೀಡಿ, “ಇವರು ಮತ್ತು ಇತರರು ನಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ನಮ್ಮನ್ನು ದಿಗ್ಬಂಧನಕ್ಕೆ ಒಳಪಡಿಸಿ ಬೆದರಿಕೆ ಒಡ್ಡುತ್ತಾರೆ. ಇವರ ಮೇಲೆ ಕ್ರಮ ಜರುಗಿಸಬೇಕೆಂದು ಕೋರಿಕೊಂಡಿದ್ದರು. ಪೋಲೀಸರು ಈ ದೂರನ್ನು ಸ್ವೀಕರಿಸಿದ್ದರೂ ಕೇಸು ದಾಖಲಿಸಿಕೊಂಡಿರಲಿಲ್ಲ. ಈ ಬಗ್ಗೆ ಮಾತುಕತೆ ನಡೆಸಿ ವಿವಾದ ಇತ್ಯರ್ಥ ಪಡಿಸುವ ಉzಶದಿಂದ ಈ ೧೪ ಮಂದಿಗೆ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಗೆ ಹಾಜರಾಗುವಂತೆ ನೋಟೀಸು ಮಾಡಿದ್ದರು.
ಅದರಂತೆ ಅ.೭ರಂದು ಈ ಮುಖಂಡರು ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಗೆ ಬರುವಾಗ ಇವರಿಗೆ ಬೆಂಬಲವಾಗಿ ಭಾದಿತ ಪ್ರದೇಶದ ನೂರಿನ್ನೂರು ಜನ ಅವರೊಂದಿಗೆ ಬಂದರಲ್ಲದೆ “ದೂರನ್ನು ಹಿಂತೆಗೆದು ಕೊಳ್ಳಬೇಕು, ಇಲ್ಲವಾದಲ್ಲಿ ನಮ್ಮೆಲ್ಲರ ಮೇಲೆ ದೂರು ದಾಖಲಿಸಬೇಕು“ ಎಂದು ಒತ್ತಾಯಿಸಿದರು. ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಕೂಡಾ ಊರವರ ಪರವಾಗಿ ಬಂದಿದ್ದರು. ಆ ಹೊತ್ತಿಗೆ ಪುತ್ತೂರಿನಿಂದ ಡಿವೈಎಸ್‌ಪಿ ಶ್ರೀನಿವಾಸ್‌ರವರು ಕೂಡಾ ಸರ್ಕಲ್ ಇನ್‌ಸ್ಪೆಕ್ಟರ್ ಕಚೇರಿಯಲ್ಲಿ ಉಪಸ್ಥಿತರಿದ್ದರು. ಕಂಜಿಪಿಲಿ, ಬೊಳ್ಳೂರು ಮತ್ತು ೧೪ ಮಂದಿ ದೂರಿಗೊಳಗಾದವರನ್ನು ಹೊರತು ಪಡಿಸಿ ಇತರರು ಹೊರಗಡೆ ಇರುವಂತೆ ಸೂಚಿಸಿ ಮಾತುಕತೆ ಆರಂಭಿಸಲಾಯಿತು. ವೈಲ್ಡ್‌ಲೈಫ್ ವಿಭಾಗದ ಎ.ಸಿ.ಎಫ್ ಸೀಮಾ, ಆರ್.ಎಫ್.ಓ ಮರಿಸ್ವಾಮಿ, ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ಸತೀಶ್ ಕುಮಾರ್ ಮಾತುಕತೆಯಲ್ಲಿ ಇದ್ದರು. ಸೋಮಶೇಖರ ಕಟ್ಟೆಮನೆ ಸಮಸ್ಯೆಯ ಪೂರ್ಣ ವಿವರ ನೀಡಿದರು. ಭಾದಿತ ಪ್ರದೇಶದ ಸಮಸ್ಯೆಗಳಾದ ಗನ್ ಲೈಸನ್ಸ್ ವಿಚಾರ, ಹರಿಹರದಲ್ಲಿ ನಡೆದ ಸಮಾಲೋಚನಾ ಸಭೆಯ ನಿರ್ಣಯದಂತೆ ೮ ತಿಂಗಳು ಈ ಪ್ರದೇಶಕ್ಕೆ ಬರಬಾರದೆಂದು ಹೇಳಿದ್ದರೂ ವೈಲ್ಡ್‌ಲೈಫ್ ಅಧಿಕಾರಿಗಳು ಈ ಭಾಗಕ್ಕೆ ಬಂದಿರುವ ವಿಚಾರ, ಕಲ್ಮಕಾರು ಕಡಮಕಲ್ಲು ಎಸ್ಟೇಟ್ ರಸ್ತೆಯನ್ನು ಹಾಳು ಮಾಡಿದ ವಿಚಾರಗಳು ಮಾತುಕತೆಯಲ್ಲಿ ಪ್ರಸ್ತಾಪವಾದವು. ವೈಲ್ಡ್‌ಲೈಫ್ ಅಧಿಕಾರಿಗಳು ಈ ಭಾಗಕ್ಕೆ ಬರಬಾರದೆಂದು ಹೇಳಿದ ಬಳಿಕವೂ ಬಂದಿರುವುದರಿಂದ ಜನರನ್ನು ಕೆಣಕಿದಂತಾಗಿದೆ. ಅವರು ಬರಲೇ ಬಾರದು ಎಂದು ಊರವರು ಒತ್ತಾಯಿಸಿದರು.
ಡಿವೈಎಸ್‌ಪಿ ಶ್ರೀನಿವಾಸ್ ಅವರು “ನಮಗೆ ವೈಲ್ಡ್‌ಲೈಫ್ ಅಧಿಕಾರಿಗಳು ದೂರು ನೀಡಿದ್ದಾರೆ, ನಾವು ದೂರು ಸ್ವೀಕರಿಸದಿರಲು ಆಗುವುದಿಲ್ಲ, ಸಾರ್ವಜನಿಕ ರಸ್ತೆಯಲ್ಲಿ ಬರುವಾಗ ನೀವು ಅಧಿಕಾರಿಗಳನ್ನು ತಡೆಯುವಂತಿಲ್ಲ ಎಂದರಲ್ಲದೆ, ’ಈ ಅಧಿಕಾರಿಗಳು ಇತ್ಯರ್ಥ ಸಮಸ್ಯೆ ಇದಲ್ಲ. ಇದರ ಬಗ್ಗೆ ನೀವು ಉನ್ನತ ಜನಪ್ರತಿನಿಧಿಗಳು ಮತ್ತು ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ನಿಮ್ಮ ಪಟ್ಟಾ ಜಾಗಕ್ಕೆ ಬಂದು ನಿಮಗೆ ಇವರು ತೊಂದರೆ ಕೊಟ್ಟರೆ ನೀವು ಆಕ್ಷೇಪಿಸುವುದು ಸರಿ. ಆದರೆ ಸಾರ್ವಜನಿಕ ರಸ್ತೆಯಲ್ಲಿ ಹೋಗಬಾರದೆಂದು ಹೇಳುವುದು ಸರಿಯಲ್ಲ“ ಎಂದರು. “ಅಲ್ಲಿನ ರಸ್ತೆಗಳು ಕೂಡಾ ಪಟ್ಟಾ ಸ್ಥಳಗಳೇ ಆಗಿವೆ“ ಎಂದು ಊರವರು ಹೇಳಿದರು. ‘’ನಾವು ಕೇಸು ಮಾಡುವುದಿಲ್ಲ. ಆದರೆ ಇನ್ನು ಮುಂದಕ್ಕೆ ಈ ರೀತಿಯ ಘಟನೆ ನಡೆಯಬಾರದು. ಅದಕ್ಕಾಗಿ ಒಳ್ಳೆಯ ರೀತಿಯಲ್ಲಿ ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳೋಣ ಎಂದು ನಾನು ನಿಮ್ಮನ್ನೆಲ್ಲ ಕರೆಸಿಕೊಂಡಿzನೆ“ ಎಂದು ಸರ್ಕಲ್‌ಇನ್‌ಸ್ಪೆಕ್ಟರ್ ಸತೀಶ್ ಕುಮಾರ್ ಹೇಳಿದರು. “ನಮ್ಮ ಶಾಸಕರು ಮತ್ತು ಸಂಸದರು ಕೇಂದ್ರ ಸರಕಾರದೊಡನೆ ಮಾತನಾಡುತ್ತಿದ್ದಾರೆ. ಶೀಘ್ರವೇ ಈ ಸಮಸ್ಯೆ ಬಗೆಹರಿಯುತ್ತದೆ. ಇನ್ನು ೨೪ ದಿನಗಳ ಕಾಲ ವೈಲ್ಡ್‌ಲೈಫ್ ಅಧಿಕಾರಿಗಳು ಆ ಕಡೆ ಬರುವುದು ಬೇಡ. ಬಂದರೆ ಜನರು ವ್ಯಗ್ರಗೊಳ್ಳುತ್ತಾರೆ“ ಎಂದು ಹರೀಶ್ ಕಂಜಿಪಿಲಿ, ಉದಯ ಕೊಪ್ಪಡ್ಕ, ಮಹೇಶ್ ಕೆ.ಪಿ., ಹಿಮ್ಮತ್ ಕೆ.ಸಿ. ಯವರು ಹೇಳಿದರು. ’‘ನಾವು ನಿಮ್ಮ ಪಟ್ಟಾ ಸ್ಥಳಕ್ಕೆ ಬರುವುದಿಲ್ಲ. ನಿಮ್ಮ ವಿರುದ್ಧ ಯಾವ ಕಾರ‍್ಯಾಚರಣೆಯನ್ನೂ ಮಾಡುವುದಿಲ್ಲ. ನಮ್ಮ ಕ್ಯಾಂಪ್‌ಗೆ ನಮ್ಮ ಕಾರ್ಯ ನಿಮಿತ್ತ ಹೋಗಬೇಕಾಗುತ್ತದೆ. ಅದನ್ನು ನೀವು ತಡೆಯಬಾರದು ಎಂದು ವೈಲ್ಡ್‌ಲೈಫ್ ಎಸಿಎಫ್ ಸೀಮಾರವರು ಹೇಳಿದರು. ಬಳಿಕ ಸಭೆಯನ್ನು ಮುಗಿಸಲಾಯಿತು. ನಂತರ ಸರ್ಕಲ್ ಕಚೇರಿಯ ಒಳಗಡೆ ನಡೆದ ಚರ್ಚೆ ಬಗ್ಗೆ ಹೊರಗಡೆ ಸೇರಿದ್ದ ಸಾರ್ವಜನಿಕರಿಗೆ ಹರೀಶ್ ಕಂಜಿಪಿಲಿ, ರಾಧಾಕೃಷ್ಣ ಬೊಳ್ಳೂರು, ಉದಯ ಕೊಪ್ಪಡ್ಕ ವಿವರಿಸಿದರು. ಡಿ.ಎಸ್.ಹರ್ಷ, ಕಿಶೋರ್ ಶಿರಾಡಿ ಉಪಸ್ಥಿತರಿದ್ದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top