Fri 13 Oct 2017, 6:23PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಕೊಡಗು ಮತ್ತು ದಕ್ಷಿಣಕನ್ನಡ ಗೌಡ ಸಮಾಜದ ಸುವರ್ಣ ವರ್ಷ ಆಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು

Friday, October 13th, 2017 | sulliaeditor | no responses

ಬೆಂಗಳೂರಿನ ಪ್ರತಿಷ್ಠಿತ ಗೌಡಸಮಾಜಗಳಲ್ಲೋಂದಾದ KDK ಎಂದೇ ಮನೆಮಾತಾಗಿರುವ ’ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜವು ತನ್ನ ಸುವರ್ಣ ವರ್ಷ ಆಚರಿಸಿ, ೫೧ನೇ ವರ್ಷಕ್ಕೆ ಕಾಲಿರಿಸಿದ ಸಂದರ್ಭದಲ್ಲಿ, ಅನೇಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು.
ಸ್ನೆಹಮಿಲನ, ಪ್ರತಿಭಾ ಪುರಸ್ಕಾರ ಹಾಗು ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಅ.8ರಂದು ಸಮಾಜದ ಸಾಂಸ್ಕೃತಿಕ ಕಲಾಭವನ, ನಮ್ಮನೆ ಇದರ ಆವರಣದಲ್ಲಿ ಅತ್ಯಂತ ವಿಜೃಂಬಣೆಯಿಂದ ನಡೆಯಿತು.

ಹಿರಿಯ ಚೇತನ, ರಾಜಕೀಯ ಮುತ್ಸದ್ದಿ, ಭಾರತ ಸರ್ಕಾರದ ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ.ದೇವೇಗೌಡರು, ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿ, ಹಿರಿಕಿರಿಯರೊಡನೆ ಬೆರೆತು, ಆತಿಥ್ಯವನ್ನು, ಸನ್ಮಾನವನ್ನು ಹಾಗು ಮಧ್ಯಾಹ್ನ ಭೋಜನವನ್ನು ಸ್ವೀಕರಿಸಿ, ಜನಮನದಲ್ಲಿ ಮಿಂಚಿನ ಸಂಚಾರಕ್ಕೆ ಕಾರಣರಾದರು.

ಅವರ ಜೊತೆಯಲ್ಲಿ ಸಮಾರಂಭದ ಅತಿಥಿಗಳಾಗಿದ್ದ ಇನ್ನಿಬ್ಬರು ಮಹನೀಯರಾದ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾಗಿರುವ ಶ್ರೀಮತಿ ಪದ್ಮಾವತಿ ಹಾಗು ಕರ್ನಾಟಕ ಸರ್ಕಾರದ ಪೌರಾಡಳಿತ ಮತ್ತು ಸಾರ್ವಜನಿಕ ಸಚಿವಾಲಯದಲ್ಲಿ ವಿಶೆಷ ಆಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಡಾ.ಗುಡ್ಡಂಡ್ರ ಪುತ್ರ ತಿಮ್ಮಯ್ಯ ಇವರುಗಳು, ಸಮಾಜದ ಕೆಲಸಗಳನ್ನು ಶ್ಲಾಸಿದರು ಹಾಗು ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದರು.

ಅತಿಥಿಗಳಿಂದ ಸಾಧಕರಿಗೆ ಸನ್ಮಾನ ಮಾಡಿಸಲಾಯಿತು. SSLC, PUC, CBSE ಹಾಗು NEET ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದವರಿಗೆ ಅಲ್ಲದೆ, ಕ್ರಿಡೆಯಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿದ ಈಶ್ವರ್ ಕರ್ನಯ್ಯನ, ಗ್ರಂಥಾಲಯ ವಿಜ್ಞಾನದಲ್ಲಿ P.H.D ಪಡೆದ ಡಾ. ಮೀರಮಣಿ ಪರ್ಲಮನೆ, ವಿದೇಶದಲ್ಲಿ ಡಾಕ್ಟರೇಟ್ ಪಡೆದ ಪ್ರಾಣಿಗಳು ಮತ್ತು ಅದರ ಆಹಾರ ವಿಜ್ಞಾನ ವಿಷಯ ಪ್ರವೀಣ ಡಾ.ಕುದುಪಜೆ ಮನೋಜ್, ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ ಕುರುಂಜಿ ಪ್ರಶಾಂತ್ ಕುಮಾರ್, ಟೆರೆಸ್ ಗಾರ್ಡನಿಂಗ್ ಮಾಡಿ ಖ್ಯಾತಿ ಪಡೆದ ಪಡಂಬೈಲು ಕೃಷ್ಣಪ್ಪ ಗೌಡ, ದೂರ ಜಿಗಿತದಲ್ಲಿ ಅಂತರರಾಷ್ಟ್ರೀಯ ಖ್ಯಾತಿಗಳಿಸಿದ ಕೆ.ಸಿ.ಚಂದನ ಇನ್ನಿತರು ಸನ್ಮಾನಿತರಾದರು.

ಮಧ್ಯಾಹ್ನ ನಂತರ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ, ಮುಂದಿನ ನಾಲ್ಕು ವರ್ಷಗಳ ಅವಧಿಯ ಅದ್ಯಕ್ಷ ಸ್ಥಾನವನ್ನು, ಶ್ರಿ.ತೇನನ ರಾಜೇಶ್ ಸೋಮಣ್ಣ ಅವರಿಗೆ ಶ್ರೀ. ಪದ್ಮಾ ಕೊಲ್ಚಾರ್ ಅವರು ಹಸ್ತಾಂತರಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಶ್ರೀ ರವೀಂದ್ರನಾಥ್ ಕೇವಳ, ಕಾರ್ಯದರ್ಶಿ ಸ್ಥಾನದಲ್ಲಿ ಪಾಣತ್ತಲೆ ಪಳಂಗಪ್ಪ ಹಾಗು ಖಜಾಂಜಿಯಾಗಿ ಶ್ರೀ ನಾಗೇಶ್ ಕುಮಾರ್ ಕಲ್ಲುಮುಟ್ಲು, ಜಂಟಿಕಾರ್ಯದರ್ಶಿಯಾಗಿ ಶ್ರೀ ಕುಂಭಗೌಡನ ಸೋಮಣ್ಣ ಹಾಗು ಶ್ರೀಮತಿ ವೈಶಾಲಿ ಸುಳ್ಯಕೋಡಿ ಇವರು ಪದಗ್ರಹಣ ಮಾಡಿದರು. ಇವರ ಜೊತೆಗೆ ಮಹಿಳಾ ಘಟಕಕ್ಕೆ ,ಅದ್ಯಕ್ಷೆಯಾಗಿ ಶ್ರೀಮತಿ ಗೀತಾ ರವೀಂದ್ರನಾಥ್ ಹಾಗು ಯುವ ಘಟಕಕ್ಕೆ ಅದ್ಯಕ್ಷರಾಗಿ ಶ್ರೀ ಪ್ರಶಾಂತ್ ಅಡ್ಕಾರ್ ಅಧಿಕಾರ ವಹಿಸಿಕೊಂಡರು.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅನೇಕ ಪ್ರತಿಭೆಗಳು ನಡೆಸಿಕೊಟ್ಟು, ನೆರೆದವರ ಮನರಂಜಿಸಿದರು. ಕೊಡಗಿನಲ್ಲಿ ಸಂಸ್ಕೃತಿಯ ರಾಯಭಾರಿ ಎಂದೇ ಹೆಸರಾದ, ಕೊಡಗು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪುರಸ್ಕೃತರು ಆದ ಅಮ್ಮಾಜಿರ ಪೊನ್ನಪ್ಪ ನವರ ನೇತೃತ್ವದ ತಂಡದ ನ್ರತ್ಯ ಎಲ್ಲರಿಗೂ ಮುದನೀಡಿತು ಹಾಗು ಅವರದೇ ಸಂಯೋಜನೆಯ ಪೊನಿದ್ವನಿ ಕೊಡಗಿನ ವಾಲಗಕ್ಕೆ ಯುವಜನಾಂಗದ ಜೊತೆ ಹಿರಿಯರು, ಮಹಿಳೆಯರಾದಿಯಾಗಿ ನೆರೆದಿದ್ದ ಎರೆಡೂ ಜಿಲ್ಲೆಯ ಬಂಧು ಭಾಂದವರು ಹೆಜ್ಜೆ ಹಾಕಿ ಸಂಭ್ರಮಿಸಿದರು.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top