Home Blog

ಮದುವೆ ಕಾರ್ಯಕ್ರಮದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ

0

ಸುಳ್ಯದ ಬಂಟರ ಭವನದಲ್ಲಿ ಎ.18ರಂದು ಜರುಗಿದ ಮದುವೆ ಕಾರ್ಯಕ್ರಮದಲ್ಲಿ ತಾಲೂಕು ಸ್ವೀಪ್ ಸಮಿತಿ ಅಧಿಕಾರಿಗಳು ತೆರಳಿ ಮತದಾನ ಜಾಗೃತಿ ಮೂಡಿಸಿದ್ದಾರೆ.

ಬಂಟರ ಭವನದಲ್ಲಿ ಜಾಲ್ಸೂರು ವಿನೋಬಾನಗರದ ಲಿಂಗಪ್ಪ ನಾಯ್ಕ್ ರ ಪುತ್ರ ಹೃಷಿತ್ ರ ವಿವಾಹವು ನೀಡ್ಪಳ್ಳಿ ಐತಪ್ಪ ನಾಯ್ಕರ ಪುತ್ರಿ ಪ್ರಣೀತರೊಂದಿಗೆ ನಡೆಯಿತು. ಮಧ್ಯಾಹ್ನ ಸುಳ್ಯದ ಸ್ವೀಪ್ ಸಮಿತಿ ಅಧಿಕಾರಿಗಳ ತಂಡ ಮದುವೆ ಕಾರ್ಯಕ್ರಮಕ್ಕೆ ಹೋಗಿ ಮತದಾನದ ಫಲಕ ನೀಡಿ ಮದುವೆ ಕಾರ್ಯಕ್ರಮದಲ್ಲಿ ಜಾಗೃತಿ‌ ಮೂಡಿಸಿದರು.

ತಂಡದಲ್ಲಿ ತಾ.ಪಂ ಇ.ಒ. ಪರಮೇಶ್, ನ.ಪಂ. ಮುಖ್ಯಾಧಿಕಾರಿ ಬಿ.ಎಂ.ಡಾಂಗೆ, ತಾ.ಪಂ. ಮ್ಯಾನೇಜರ್ ಹರೀಶ್ ಮೊದಲಾದವರ ತಂಡ ತೆರಳಿ ಜಾಗೃತಿ ಕಾರ್ಯಕ್ರಮ ನಡೆಸಿತು.

ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಧಾನಿಯಾಗಲೆಂದು ತೊಡಿಕಾನ ದೇಗುಲದಲ್ಲಿ ವಿಶೇಷ ಪೂಜೆ

0

ಚೆಂಬು ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಪೂಜೆ ಸಲ್ಲಿಕೆ

ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರ ಬಹುಮತದ ಗೆಲುವಿನೊಂದಿಗೆ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಲೆಂದು ಆಗ್ರಹಿಸಿ ಚೆಂಬು ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಚೆಂಬು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ, ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್. ಸಿ. ಅನಂತರ ಊರುಬೈಲು, ಚೆಂಬು ಗ್ರಾ.ಪಂ. ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ ಸೇರಿದಂತೆ ಪಕ್ಷದ ಚುನಾಯಿತ ಸದಸ್ಯರುಗಳು, ಪಕ್ಷದ ವಿವಿದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಹಿತೈಷಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸುಳ್ಯ ನಗರದಲ್ಲಿಬಿಜೆಪಿ ಕಾರ್ಯಕರ್ತರಿಂದ ಮತಯಾಚನೆ

0

ಲೋಕಸಭಾ ಚುನಾವಣೆಯ ಮಂಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರ ಪರವಾಗಿ ಇಂದು ಸುಳ್ಯ ನಗರದಲ್ಲಿ ಬಿಜೆಪಿ ಮಂಡಲದ ನಾಯಕರು ಹಾಗೂ ಕಾರ್ಯಕರ್ತರು ಹಾಗೂ ಯುವ ಮೋರ್ಚಾದ ಕಾರ್ಯಕರ್ತರು ನಗರದ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು.

ವಿಕಸಿತ ಭಾರತ ಮೋದಿ ಗ್ಯಾರಂಟಿ ಎಂಬ ಬಿಜೆಪಿ ಪರ ಯೋಜನೆಗಳ ವಿವರದ ಕರ ಪತ್ರವನ್ನು ಸಾರ್ವಜನಿಕರಿಗೆ ‌ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಶಕ್ತಿ ಕೇಂದ್ರದ ಪದಾಧಿಕಾರಿಗಳಾದ ಸುದರ್ಶನ ಪಾತಿಕಲ್ಲು, ಪ್ರದೀಪ್ ಕೊಲ್ಲರ ಮೂಲೆ, ಲತೀಶ್ ಗುಂಡ್ಯ, ಪ್ರಕಾಶ್ ಯಾದವ್, ನವೀನ್ ಎಲಿಮಲೆ
ಹಾಗೂ ಯುವ ಮೋರ್ಚಾ ದ ಕಾರ್ಯಕರ್ತರು ಭಾಗವಹಿಸಿದರು.

ಕೊಡಗು ಸಂಪಾಜೆ: ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಹಾಗೂ ಶಾಸಕ ಪೊನ್ನಣ್ಣರಿಂದ ಮತಯಾಚನೆ

0

ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಹಾಗೂ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಎ.18ರಂದು ರಾತ್ರಿ ಕೊಡಗು ಸಂಪಾಜೆಯಲ್ಲಿ ಮತಯಾಚನೆ ನಡೆಸಿದರು.

ಶಾಸಕ ಪೊನ್ನಣ್ಣ ಅವರೊಂದಿಗೆ ಸಂಪಾಜೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಬಳಿ ಆಗಮಿಸಿದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಅವರು ಕಾರ್ಯಕರ್ತರ ಜೊತೆಗೂಡಿ ಮತಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಟಿ.ಪಿ‌. ರಮೇಶ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವ

0

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಎ.25 ರಂದು ಜರುಗಲಿದೆ.
ಎ.25ರಂದು ಬೆಳಿಗ್ಗೆ 8.30ಕ್ಕೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿ ಪುಣ್ಯಾಹ ವಾಚನ, ಮಹಾಗಣಪತಿ ಹೋಮ, ಪಂಚ ವಿಂಶತಿಕಲಶ ಪೂಜೆ,
ಮಧ್ಯಾಹ್ನ ಶ್ರೀ ದೇವರಿಗೆ ಸಾನ್ನಿಧ್ಯ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 6.00ರಿಂದ‌ಭಜನಾ ಕಾರ್ಯಕ್ರಮ,ದೇವತಾ ಪ್ರಾರ್ಥನೆ ಮತ್ತು ಸೇವಾ ರಂಗಪೂಜೆ ಪ್ರಾರಂಭವಾಗಿ ರಾತ್ರಿ 9.00 ಗಂಟೆಗೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಧಿಗಳು ಆಗಮಿಸಬೇಕೆಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ವಸಂತ ನಡುಬೈಲು ಮತ್ತು ಸದಸ್ಯರು ವಿನಂತಿಸಿದ್ದಾರೆ.

ಬಂಗ್ಲೆಗುಡ್ಡೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ ಪುನರ್ ಪ್ರತಿಷ್ಠಾ ಕಾರ್ಯಕ್ರಮ

0

ಕೆಪಿಸಿಸಿ ಪ್ರ.ಕಾರ್ಯದರ್ಶಿ ಮಮತಾ ಗಟ್ಟಿ ಭೇಟಿ- ವಿಶೇಷ ಪ್ರಾರ್ಥನೆ

ಸುಳ್ಯ ಬೀರಮಂಗಲ – ಬಂಗ್ಲೆಗುಡ್ಡೆ ಯಲ್ಲಿ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ಶ್ರೀ ಮೊಗೇರ ದೈವಗಳು, ಶ್ರೀ ತನ್ನಿಮಾನಿಗ, ಶ್ರೀ ಗುಳಿಗ ಮತ್ತು ಶ್ರೀ ಕೊರಗ ತನಿಯ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ ಎ.೧೬ ರಿಂದ ಎ.೧೮ ರವರೆಗೆ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನಕ್ಕೆ ಭೇಟಿ ನೀಡಿದ ಕೆಪಿಸಿಸಿ ಪ್ರ. ಕಾರ್ಯದರ್ಶಿ ಮಮತಾ ಗಟ್ಟಿಯವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಪಿ.ಸಿ.ಜಯರಾಮ, ಎಂ.ವೆಂಕಪ್ಪ ಗೌಡ, ಶ್ರೀಮತಿ ರಾಜೀವಿ ಆರ್.ರೈ, ಸಂಶುದ್ದೀನ್ ಎಸ್.ಅರಂಬೂರು, ಸದಾನಂದ ಮಾವಜಿ, ಸುಜಯ ಕೃಷ್ಣ, ಜೂಲಿಯಾನ ಕ್ರಾಸ್ತಾ ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಂಸ್ಕಾರ ವಾಹಿನಿ ಶಿಬಿರ ಸಮಾಪನ

0

ಸುಳ್ಯದ ವಿದ್ಯಾನಗರದಲ್ಲಿರುವ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದಲ್ಲಿ ಎ.13 ರಂದು ಆರಂಭಗೊಂಡ ಸಂಸ್ಕಾರ ವಾಹಿನಿ ಶಿಬಿರ – 2024 ರ ಸಮಾಪನಾ ಸಮಾರಂಭ ಎ.18 ರಂದು ನಡೆಯಿತು.
ಸಂಸ್ಕಾರ ವಾಹಿನಿ ಶಿಬಿರದ ಸಂಚಾಲಕಿ ಶ್ರೀಮತಿ ನಮಿತಾ ರಾವ್ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಶಶಿಕಲಾ ಶುಭಕರ ರಾವ್ ಸಮಾಪನ ಭಾಷಣಗೈದರು. ಶ್ರೀಮತಿ ಶಕುಂತಳಾ ದೇವದಾಸ್ ಮುಖ್ಯ ಅತಿಥಿಯಾಗಿದ್ದರು.


ಪೋಷಕರ ಪರವಾಗಿ ಶ್ರೀಮತಿ ಮಧುರ ಜಗದೀಶ್ ಅನಿಸಿಕೆ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಾದ ಕು.ಮೇಘಾ ಜೆ., ಆತ್ಮಿಕಾ, ಪ್ರಮಿತ್ ಜೆ.ರೈ, ಕುಶಲ್, ಕೌಶಿಕ್ ಅನಿಸಿಕೆ ವ್ಯಕ್ತಪಡಿಸಿದರು.
ಶ್ರೀದೇವಿ ನಾಗರಾಜ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಿಬಿರದ ನಿರ್ದೇಶಕಿ ಜಯಶ್ರೀ ವಸಂತ್ ಸ್ವಾಗತಿಸಿದರು. ವಗೆನಾಡು ಗೋಪಾಲಕೃಷ್ಣ ಭಟ್, ಶಿಬಿರದ ಸಹಸಂಚಾಲಕಿಯರಾದ ಸುನೀತ ಹರೀಶ್, ಜಲಜ ಚಂದ್ರಶೇಖರ್, ಸುಮಾ ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಸ್ಕೃತ ಶಿಕ್ಷಕಿ ಸಮತಾರನ್ನು ಮತ್ತು ಕಸೂತಿ ಶಿಕ್ಷಕಿ ಶ್ರೀಮತಿ ಮಮತಾರವರನ್ನು ಸನ್ಮಾನಿಸಲಾಯಿತು.
ಶ್ರೀಮತಿ ಸವಿತಾ ಪಾತಿಕಲ್ಲು ವಂದಿಸಿದರು.ಅಕ್ಷತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಎಣ್ಮೂರು : ನರ್ಲಡ್ಕದಲ್ಲಿ ಪೂಜೆ

0


ನರ್ಲಡ್ಕ ಎಣ್ಮೂರು ವೆಂಕಪ್ಪ ಸಾಲಿಯಾನ್‌ರವರ ಮನೆಯಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಹವನ ಶ್ರೀ ಸತ್ಯನಾರಾಯಣ ದೇವರ ಪೂಜೆ ಏಪ್ರಿಲ್ ೧೮ರಂದು ನಡೆಯಿತು.

ಶ್ರೀ ಚಾಮುಂಡಿ ಸಾನಿಧ್ಯ (ಕಟ್ಟೆ) ಜೀರ್ಣೋದ್ದಾರ ಪ್ರಯುಕ್ತ ಅನುಜ್ಞ ಕಲಶ ಪೂಜೆ ಬಾಲಾಲಯ ಪ್ರತಿಷ್ಠೆ ಪ್ರಸಾದ ವಿತರಣೆ ನಡೆಯಿತು. ರಮೇಶ್ ಕೋಟೆ, ಸಾಲಿಯಾನ್ ಸಹೋದರರು ಇದ್ದರು.

ಕರಾಟೆಯಲ್ಲಿ ದಿನೇಶ್ ಕುಮಾರ್ ಎಂ.ಬಿ.ರವರಿಗೆ 4ನೇ ಬ್ಲ್ಯಾಕ್ ಬೆಲ್ಟ್ ಪದವಿ

0

ಇಂಪ್ಯಾಕ್ಟ್ ಆರ್ಟ್ ಮತ್ತು ಸ್ಪೋರ್ಟ್ ಕರಾಟೆ ಕ್ಲಬ್ ವತಿಯಿಂದ ಸುಬ್ರಹ್ಮಣ್ಯದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ದಿನೇಶ್ ಕುಮಾರ್ ಎಮ್. ಬಿ. ರವರು ನಾಲ್ಕನೇ ಬ್ಲ್ಯಾಕ್ ಬೆಲ್ಟ್ ಪದವಿ ಪಡೆದಿರುತಾರೆ. ಇವರು ಇಂಪ್ಯಾಕ್ಟ್ ಆರ್ಟ್ಸ್ ಕ್ಲಬ್ ನ ಮುಖ್ಯ ಶಿಕ್ಷಕರಾದ ಶಿಹಾನ್ ಟಿ ಡಿ ತೋಮಸ್ ರವರ ಸೀನಿಯರ್ ಶಿಷ್ಯರಾಗಿದ್ದು, ಸುಮಾರು ಇಪ್ಪತೆಂಟು ವರ್ಷಗಳಿಂದ ಕರಾಟೆ ಶಿಕ್ಷಕ ರಾಗಿ ತರಬೇತಿ ನೀಡುತಿದ್ದಾರೆ. ಮುರುಳ್ಯ ಮನೆತನದ ಕುಟುಂಬ ಸದಸ್ಯರಾಗಿದ್ದಾರೆ.
ಬ್ಲ್ಯಾಕ್ ಬೆಲ್ಟ್ ೪ನೇ ಪದವಿ ಪಡೆದಿರುತ್ತಾರೆ.

ಚೊಕ್ಕಾಡಿ ಶ್ರೀ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದಲ್ಲಿ ಜಾತ್ರೋತ್ಸವ

0

ಚೊಕ್ಕಾಡಿ ಉಳ್ಳಾಕುಲು ಯಾನೆ ನಾಯರ್ ದೈವಸ್ಥಾನದಲ್ಲಿ ಜಾತ್ರೋತ್ಸವವು ಎ.8ರಿಂದ ಪ್ರಾರಂಭಗೊಂಡಿದ್ದು ಎ.21 ರವರೆಗೆ ನಡೆಯಲಿದೆ.
ಎ.8ರಂದು ಜಾತ್ರೆ ಪ್ರಯುಕ್ತ ಗೊನೆ ಕಡಿಯಲಾಯಿತು.
ಎ.13 ರಂದು ರಾತ್ರಿ ಭಂಡಾರ ತೆಗೆಯಲಾಯಿತು, ಎ.14ರಂದು ಮಾಮೂಲು ಪೂಜೆ ಪ್ರಾರಂಭವಾಯಿತು.


ಎ.15ರಂದು ಬೆಳಿಗ್ಗೆ ಮುಂಡಿಗೆ ಹಾಕುವುದು,ಎ.16 ರಂದು ಬೆಳಿಗ್ಗೆ ಹಸಿರುವಾಣಿ ಸಮರ್ಪಣೆ ನಡೆಯಿತು.
ಎ.17ರಂದು ನೇಮ ಸಮಾರಾಧನೆ ಮತ್ತು ರಾತ್ರಿ ವಾಲಸಿರಿ ನಡೆಯಿತು. ಎ.18ರಂದು ಬೆಳಿಗ್ಗೆ ನಾಯರ್ ನೇಮ ನಡೆದ ಬಳಿಕ ಪ್ರಸಾದ ವಿತರಣೆ ನಡೆಯಿತು.
ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ಎ.19ರಂದು ರಾತ್ರಿ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮ ಹಾಗೂ ರುದ್ರಚಾಮುಂಡಿ ಮತ್ತು ಪೊಟ್ಟ ದೈವದ ನೇಮ , ಎ.20ರಂದು ರಾತ್ರಿ ದೇವತೆ (ಜಾವತೆ) ದೈವದ ನೇಮ,ಎ.21ರಂದು ಸಂಜೆ ಕಲ್ಲುರ್ಟಿ ಮತ್ತು ಕಲ್ಕುಡ ದೈವಗಳ ನೇಮ ಮತ್ತು ರಾತ್ರಿ ಪಂಜುರ್ಲಿ ದೈವದ ನೇಮ ನಡೆಯಲಿರುವುದು.

error: Content is protected !!
Breaking