Wed 26 Apr 2017, 11:53AM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24 ಪುಟಗಳಿಂದ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಪುಟಗಳಿಂದ ಜನರ ಮನೆ ಬಾಗಿಲಿಗೆ ತಲುಪುತ್ತಿರುವುದು ಸಮುದಾಯ ಪತ್ರಿಕೋದ್ಯಮದಲ್ಲೊಂದು ಕ್ರಾಂತಿ.ಎಂಬಿಬಿಎಸ್ ವೈದ್ಯರೊಬ್ಬರ ಹೋರಾಟದ ಫಲವಾಗಿ ಪುತ್ತೂರಿನಲ್ಲಿ ಸುದ್ದಿಬಿಡುಗಡೆ ದಿನಪತ್ರಿಕೆಯಾಗಿ, ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ವಾರಪತ್ರಿಕೆಯಾಗಿ ಹೊರಬರುತ್ತಿದೆ. ಇವು ಕೇವಲ ತಾಲೂಕು ಮಟ್ಟದ ಪತ್ರಿಕೆ. ತಾಲೂಕು ಮತ್ತು ತಾಲೂಕಿನವರಾಗಿದ್ದು ಜಗತ್ತಿನಾದ್ಯಂತ ಇರುವ ಮಂದಿಯ ಸುದ್ದಿ, ಮಾಹಿತಿ ಪತ್ರಿಕೆಯ ವ್ಯಾಪ್ತಿ ಎನ್ನುತ್ತಾರೆ ಡಾ.ಯು.ಪಿ.ಶಿವಾನಂದ. ಆದರೆ, ಯಾವುದೇ ರಾಜ್ಯ ಮಟ್ಟದ ಪತ್ರಿಕೆಗಿಂತ ಹೆಚ್ಚಿನ ಪ್ರಸಾರವನ್ನು ಆಯಾಯ ತಾಲೂಕುಗಳಲ್ಲಿ ಹೊಂದಿದೆ ಎನ್ನುವುದು ಗಮನಾರ್ಹ.ಊರು, ಪರವೂರು, ದೇಶ ವಿದೇಶಗಳ ಸುದ್ದಿಯೊಂದಿಗೆ, ನಮ್ಮ ದಿನ ನಿತ್ಯದ ಬಳಕೆಗೆ ಬೇಕಾದ ಅತ್ಯವಶ್ಯಕ ಮಾಹಿತಿಯನ್ನು ನೀಡುತ್ತಿರುವ ಪತ್ರಿಕೆ ಇದಾಗಿದೆ. ಶಿಕ್ಷಣದಿಂದ ಹಿಡಿದು ಪ್ರವಾಸೋದ್ಯಮ, ಕೃಷಿ, ವಾಣಿಜ್ಯ ಇತ್ಯಾದಿ ಎಲ್ಲ ಕ್ಷೇತ್ರಗಳ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಸುದ್ದಿ ಪ್ರಮುಖ ಪಾತ್ರ ವಹಿಸುತ್ತಿದೆ. ಯಾವುದೇ ಪ್ರದೇಶದ ಸಮಗ್ರ ಬೆಳವಣಿಗೆಯಲ್ಲಿ ‘ಮಾಹಿತಿ’ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದು ಸುದ್ದಿ ಸಮೂಹದ ನಂಬಿಕೆ.

ಸುದ್ದಿ ಬಿಡುಗಡೆ ನಡೆದು ಬಂದ ದಾರಿ 

 
ಸುದ್ದಿ ಆರಂಭ :
1985 ರಲ್ಲಿ ಸುಳ್ಯದ ಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಂಬಿಬಿಎಸ್ ಓದಿದ ವೈದ್ಯರೊಬ್ಬರು ಗ್ರಾಹಕರ ವೇದಿಕೆಯ ಮೂಲಕ ಹಚ್ಚಿದ ಹೋರಾಟದ ಕಿಡಿ ಬಳಿಕ ಕರಪತ್ರದ ಮೂಲಕ ಜನಮೆಚ್ಚುಗೆ ಪಡೆದಾಗ ಹೋರಾಟಕ್ಕೆ ತೋರಿದ ಮುಂದಿನ ದಿಕ್ಕು ಇಂದಿನ ಸುದ್ದಿ ಪತ್ರಿಕೆ. ಅಂದು ಸುಳ್ಯದಲ್ಲಿ ತಮ್ಮ ಸ್ವಂತ ವಾಹನ ಮತ್ತು ಸ್ವಂತ ಖರ್ಚಿನಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಜನಬೆಂಬಲ ಪಡೆದು ಡಾ. ಯು.ಪಿ ಶಿವಾನಂದ ಅವರು ಪತ್ರಿಕೆಯನ್ನು ಮುನ್ನೆಡೆಸಿದರು.
ಎರಡನೇ ಹಂತವಾಗಿ 1986 ರಲ್ಲಿ ಬೆಳ್ತಂಗಡಿಯಲ್ಲಿ ಸುದ್ದಿ ಪತ್ರಿಕೆ ಆರಂಭಿಸಿದರು. ಈ ಎರಡೂ ಕಡೆಗಳಲ್ಲಿ ವಾರ ಪತ್ರಿಕೆಯಾಗಿ ಆರಂಭವಾದ ಸುದ್ದಿ ಎರಡೂ ಕಡೆಗಳಲ್ಲಿ ಯಶಸ್ಸು ಕಂಡಿತು. ಮುಂದಿನ ಹಂತವಾಗಿ ಸೆ.4, 1987ರಲ್ಲಿ ಪುತ್ತೂರಲ್ಲಿ ಸುದ್ದಿ ದಿನ ಪತ್ರಿಕೆಯಾಗಿ ಆರಂಭಗೊಂಡಿತು. ಕಪ್ಪು ಬಿಳುಪಿನಲ್ಲಿ ಆರಂಭವಾದ ಸುದ್ದಿ ಅಂದು ಕೇವಲ ಎರಡು ಪುಟಗಳಲ್ಲಿ ಇತ್ತು. ಚಿಕ್ಕ ಕ್ರೌನ್ ಸೈಜ್ ನಲ್ಲಿ ಸ್ಥಳೀಯ ಟ್ರೆಡಲ್ ಪ್ರೆಸ್ಸಿನಲ್ಲಿ ಮುದ್ರಣಗೊಳ್ಳುತ್ತಿದ್ದ ಪತ್ರಿಕೆ ಆ ನಂತರದ ದಿನಗಳಲ್ಲಿ ತನ್ನ ಗಾತ್ರ ಹಾಗೂ ಪುಟಗಳಲ್ಲಿ ಏರಿಕೆಯನ್ನು ಕಂಡುಕೊಂಡಿತು. ಅಂದಿನ ಪತ್ರಿಕೆಯ ಬೆಲೆ ಕೇವಲ 10 ಪೈಸೆಯಾಗಿತ್ತು.ಪುತ್ತೂರು, ಮಂಗಳೂರು, ಸುಳ್ಯ, ಬೆಳ್ತಂಗಡಿ, ಕೊಡಗು ಮತ್ತು ಬೆಂಗಳೂರಿನಲ್ಲಿ ನೂರಾರು ಮಂದಿಗೆ ಖಾಯಂ ಆದಾಯದ ಉದ್ಯೋಗ ಕಲ್ಪಿಸಿರುವ ಶಿವಾನಂದ ಅವರ ಪತ್ರಿಕೆಯ ಸಾಧನೆ ಅಧ್ಯಯನಕ್ಕೆ ಅರ್ಹವಾದ ವಿಚಾರ. ಪತ್ರಿಕೋದ್ಯಮ, ಗ್ರಾಮೀಣಾಭಿವೃದ್ಧಿ ಮತ್ತು ವಾಣಿಜ್ಯ ಆಡಳಿತದ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕಾದ ಜನಪರ ಉದ್ಯಮ ಸುದ್ದಿಬಿಡುಗಡೆ ಮಾಧ್ಯಮ ಸಮೂಹ ಸಂಸ್ಥೆ.ಯಾವುದೇ ರಾಜಕೀಯ ಸಂಘಟನೆ, ಸಿದ್ಧಾಂತಗಳಿಂದ ದೂರವಾಗಿದ್ದು ನಿಜಾರ್ಥದಲ್ಲಿ ಪತ್ರಿಕೆಯನ್ನು ನಿಷ್ಪಕ್ಷಪಾತವಾಗಿ ನಡೆಸಿಕೊಂಡು ಬರುತ್ತಿರುವುದು ಸುದ್ದಿ ಬಿಡುಗಡೆಯ ಇನ್ನೊಂದು ವೈಶಿಷ್ಟ್ಯ.ಪತ್ರಿಕೆಯಲ್ಲೇನಿದೆ :ಇಂದಿನ ಕ್ರೈಮ್, ಸೆಕ್ಸ್, ಕ್ರಿಕೆಟ್, ಕುಟುಂಬ ಕಲಹ ವೈಭವೀಕರಣ ಪತ್ರಿಕೋದ್ಯಮದಿಂದ ಸಂಪೂರ್ಣ ವಿಭಿನ್ನವಾಗಿ, ಜಾಹಿರಾತು ಆಧಾರಿತ ಸುದ್ದಿ ಪ್ರಕಟಣೆ ಮಾದರಿಯನ್ನು ಅನುಕರಿಸದೆ ವಿಭಿನ್ನವಾಗಿದೆ ಸುದ್ದಿಬಿಡುಗಡೆ. ಒಂದು ಪತ್ರಿಕೆ ಸಮೃದ್ಧವಾಗುವುದು ಆ ಪತ್ರಿಕೆಯಲ್ಲಿರುವ ಮಾಹಿತಿ ಮತ್ತು ಸುದ್ದಿಯಿಂದ. ಹಣ ಕೊಟ್ಟು ಪತ್ರಿಕೆ ಪಡೆಕೊಂಡ ಗ್ರಾಹಕನಿಗೆ ಆ ಪತ್ರಿಕೆಯಿಂದ ಒಂದಷ್ಟು ಲಾಭ ಸಿಗಬೇಕು ಆಗ ಮಾತ್ರ ಪತ್ರಿಕೆಯ ಉದ್ದೇಶ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಸುದ್ದಿ ಪತ್ರಿಕೆಯಲ್ಲಿ ಏನಿದೆ ಎಂದು ಕೇಳುವ ಬದಲು ಏನಿಲ್ಲ ಎಂದು ಪ್ರಶ್ನಿಸುವುದು ಲೇಸು.ಹುಟ್ಟು ಹಬ್ಬದಿಂದ ಹಿಡಿದು ಮರಣದವರೆಗೆ, ಶುಭ ವಿವಾಹ ಫೋಟೋ ಸಮೇತ ವರದಿಗಳು, ಪ್ರಶಸ್ತಿಗಳು, ವರ್ಗಾವಣೆ ಪದೋನ್ನತಿ, ನೇಮಕ, ಪದಾಧಿಕಾರಿ ಆಯ್ಕೆ, ವಾರದಲ್ಲಿ ಎಲ್ಲೆಲ್ಲಿ ಏನೇನು ಕಾರ್ಯಕ್ರಮಗಳಿವೆ ಎಂಬುದಕ್ಕೆ ಈ ದಿನದ ಕಾರ್ಯಕ್ರಮ, ಅಧಿಕಾರಿಗಳ ಮಾಹಿತಿ, ಇಲಾಖೆಯಲ್ಲಿ ದೊರೆಯುವ ಮಾಹಿತಿ ಇತ್ಯಾದಿಗಾಗಿ ಇಲಾಖಾ ಮಾಹಿತಿ, ಜನಪ್ರತಿನಿಧಿಗಳ ವಾರದ ಕಾರ್ಯಕ್ರಮ, ಜಾಗ ಮಾರಾಟ ಖರೀದಿ ಇತ್ಯಾದಿ ಮಾಹಿತಿ, ಶೈಕ್ಷಣಿಕ ಉದ್ಯೋಗ ಮಾಹಿತಿ, ಸಾಧಕರ ಸಂದರ್ಶನ, ಪರವೂರ ಸುದ್ದಿ, ಜಿಲ್ಲೆ, ದೇಶ ವಿದೇಶ ಸುದ್ದಿಗಳು, ಮಕ್ಕಳ ಚಿತ್ರಗಳು, ಶಿಕ್ಷಣ, ಸಾಹಿತ್ಯ ಸಾಪ್ತಾಹಿಕ, ಕೃಷಿ, ವ್ಯಕ್ತಿತ್ವ ವಿಕಸನ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ವಿವಿಧ ಅನುಭವಿ ಬರಹಗಾರರ ಲೇಖನಗಳು, ಹಾಳೆತಟ್ಟೆ ಮತ್ತು ಇತರ ಕೃಷಿ ಉತ್ಪನ್ನಗಳ ಮಾರಾಟ ಮಾಹಿತಿ ಹೀಗೆ ಇನ್ನೂ ಹತ್ತು ಹಲವು ಉಪಯುಕ್ತ ಮಾಹಿತಿಗಳನ್ನು, ಸುದ್ದಿಗಳನ್ನು ಜನರಿಗೆ ತಲುಪಿಸುವಲ್ಲಿ ಸುದ್ದಿ ಪತ್ರಿಕೆ ಪ್ರಮುಖ ಪಾತ್ರ ವಹಿಸುತ್ತಿದೆ.ಶಾಸಕರು, ಉಪವಿಭಾಗದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಎಂದು ಕಚೇರಿಯಲ್ಲಿ ಇರುತ್ತಾರೆ, ಎಂದು ಇರುವುದಿಲ್ಲ ಎಂಬ ಮಾಹಿತಿ ನೀಡುವ ಮೂಲಕ ಸುದ್ದಿ ಗ್ರಾಮೀಣ ಪ್ರದೇಶದ ಜನರಿಗೆ ಬೇಕಾದ ಮಾಹಿತಿಯನ್ನು ನೀಡುತ್ತಿದೆ. ಇದರಿಂದ ಅನಗತ್ಯವಾಗಿ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ದಿನನಿತ್ಯದ ಕಾರ್ಯಕ್ರಮಗಳ ಮಾಹಿತಿ ಓದುಗರಿಗೆ ನೀಡುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗುತ್ತಿದೆ.ಪರವೂರ ಸುದ್ದಿ :

ಸುದ್ದಿಯ ಸ್ಪಷಾಲಿಟಿ ಹಲವಿವೆ. ನಮ್ಮೂರಿನ ಜನರು ಇತರ ದೇಶಗಳಲ್ಲಿ ಮಾಡುತ್ತಿರುವ ಸಾಧನೆ, ಸಾಮಾಜಿಕ ಕಾರ್ಯಗಳು ನಮ್ಮೂರಿನ ಜನರಿಗೆ ತಿಳಿಯದಿದ್ದರೆ ಹೇಗೆ? ಅದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದು ಈ ಪರವೂರ ಸುದ್ದಿಗಳು. ಒಬ್ಬ ವ್ಯಕ್ತಿ ಯಾವುದೇ ದೇಶದಲ್ಲಿರಲಿ ಅಲ್ಲಿ ಆತ ಮಾಡಿದ ಸಾಧನೆ, ಅವನಿಗೆ ಸಿಕ್ಕಿದ ಬಿರುದು, ಸನ್ಮಾನಗಳು ಅವನ ತಾಯ್ನಾಡಿಗೆ ತಿಳಿಯಬೇಕು ಎಂದು ಯೋಚಿಸಿ ಡಾಕ್ಟರ್ ರವರು ಪರವೂರ ಪುತ್ತೂರಿನವರು ಎಂಬ ಅಂಕಣ ಆರಂಭಿಸಿದರು. ಈ ಅಂಕಣ ಬಹಳ ಯಶಸ್ವಿಯನ್ನು ಕಾಣುತ್ತಿದೆ.

ಸುದ್ದಿ ಮಾಹಿತಿ :

ಜನರಿಗೆ ಸುದ್ದಿ, ಮಾಹಿತಿ ಮತ್ತು ಸೇವೆಯನ್ನು ನೀಡುವ ಕೆಲಸವನ್ನು ಸುದ್ದಿ ಪತ್ರಿಕೆ ಕಳೆದ 28 ವರ್ಷಗಳಿಂದ ಮಾಡುತ್ತಿದೆ. ಒಂದು ಸಮಾಜದ, ಒಬ್ಬ ವ್ಯಕ್ತಿಯ ಅಭಿವೃದ್ಧಿಯಲ್ಲಿ ಮಾಹಿತಿ ಮತ್ತು ಸೇವೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಮಾಹಿತಿಯ ಕೊರತೆಯೇ ಒಂದು ಊರಿನ ಅಭಿವೃದ್ಧಿಗೆ ತೊಡಕಾಗುತ್ತದೆ.ಪ್ರತಿಯೊಬ್ಬನಿಗೂ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಜಗತ್ತಿನ ಇತರೇ ಮಾಹಿತಿಗಳು ಅತ್ಯವಶ್ಯ. ಈ ಎಲ್ಲ ಸೇವೆ ಮತ್ತು ಮಾಹಿತಿಗಳನ್ನು ಪೂರೈಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸುದ್ದಿ ಮಾಹಿತಿ ಟ್ರಸ್ಟ್ ಇಂದು ರಾಜ್ಯ ಮಟ್ಟದ ಶಿಕ್ಷಣ ಉದ್ಯೋಗ ಮಾಹಿತಿ ಎಂಬ ಪಾಕ್ಷಿಕ ಪತ್ರಿಕೆಯನ್ನು ನಡೆಸುತ್ತಿದೆ.

ಸುದ್ದಿ ಎಲ್ಲ ತರದ ಮಾಹಿತಿ ಮತ್ತು ಸೇವೆಯನ್ನು ನೀಡುವಲ್ಲಿ ತನ್ನ ಕೈಯಿಂದಾದ ಪ್ರಯತ್ನವನ್ನು ಮಾಡುತ್ತಿದೆ. ಸರಕಾರಿ, ಖಾಸಗಿ ಉದ್ಯೋಗಗಳ ಮಾಹಿತಿ, ವಿವಿಧ ಇಲಾಖೆಗಳ ಅರ್ಜಿ ನಮೂನೆಗಳು, ತಾಲೂಕಿನಲ್ಲಿರುವ ವಿವಿಧ ಕೆಲಸಗಾರರ ಉದಾಹರಣೆಗೆ: ಮರದ ಕೆಲಸಗಾರರು, ಮೇಸ್ತ್ರಿಗಳು, ಗಾರೆಯವರು, ಅಡಿಕೆ ತೆಗೆಯುವವರು, ಪೈಂಟ್ ಕೆಲಸಗಾರರು, ಕಬ್ಬಿಣದ ಕೆಲಸಗಾರರು ಇತ್ಯಾದಿ ಕೆಲಸಗಾರರ ಮಾಹಿತಿಯನ್ನು ಜನರಿಗೆ ನೀಡುತ್ತಿದೆ. ಅಲ್ಲದೆ ಹೊಯಿಗೆ, ಜಲ್ಲಿ, ಕೆಂಪು ಕಲ್ಲು, ಬೋರ್ ವೆಲ್ ಇತ್ಯಾದಿ ಸೇವೆಗಳನ್ನು ಕೂಡ ಜನರಿಗೆ ನೀಡುತ್ತಿದೆ.

ಅದಲ್ಲದೆ ಪ್ರವಾಸೋದ್ಯಮದಲ್ಲಿ ಹೊಸ ಹೆಜ್ಜೆಯನ್ನು ಇಡುತ್ತಿದೆ. ಈಗಾಗಲೇ ಇಡೀ ರಾಜ್ಯದ ಪ್ರವಾಸೋದ್ಯಮ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಮುಖ್ಯವಾಗಿ ತಾಲೂಕಿನ ಪ್ರವಾಸಿ ತಾಣಗಳು, ಪುಣ್ಯ ಕ್ಷೇತ್ರಗಳು, ಅಲ್ಲಿನ ಮಹತ್ವ, ಅಲ್ಲಿಯ ಪೂಜಾ ಸಮಯ ಹೀಗೆ ಎಲ್ಲಾ ವಿಧದ ಮಾಹಿತಿಗಳನ್ನು ಸಂಗ್ರಹಿಸಿ, ಜನರಿಗೆ ನೀಡುವಲ್ಲಿ ಸುದ್ದಿ ಪ್ರಮುಖ ಪಾತ್ರ ವಹಿಸುತ್ತಿದೆ. ಮಾಹಿತಿ ಹಬ್ಬಗಳನ್ನು ಮಾಡುವುದರ ಮೂಲಕ ಜನರಿಗೆ ಮಾಹಿತಿ ಮತ್ತು ಸೇವೆಯನ್ನು ನೀಡುವ ಕೆಲಸವನ್ನು ಕೂಡ ಮಾಡುತ್ತ ಬಂದಿದೆ.

ಸುದ್ದಿ ಸೆಂಟರ್  :

ಮಾಹಿತಿಯನ್ನು ಜನರು ಸೇವೆಯಾಗಿ ಉಪಯೋಗಿಸಿಕೊಂಡು ಆ ಮೂಲಕ ಆದಾಯ ಮಾಡಿಕೊಡುವುದಕ್ಕಾಗಿ ಪತ್ರಿಕೆಯು ಮಾಹಿತಿ ಸೇವಾ ಕೇಂದ್ರಗಳು ಆರಂಭಿಸಿದೆ. ಒಂದು ಗ್ರಾಮದಲ್ಲಿ ಕೇವಲ ಒಬ್ಬ ಪ್ರತಿನಿಧಿ ಇದ್ದರೆ ಸಾಲದು. ಜನರಿಗೆ ಪರಿಪೂರ್ಣವಾಗಿ ಮಾಹಿತಿ ಮತ್ತು ಸೇವೆ ದೊರೆಯಬೇಕಾದರೆ ಸೆಂಟರ್ ಗಳು ಬಹುಮುಖ್ಯ. ಅದರಂತೆ ತಾಲೂಕಿನಲ್ಲಿ ಈಗಾಗಲೇ ಸುದ್ದಿ ಸೆಂಟರ್ ಗಳು ಕರ್ತವ್ಯ ನಿರ್ವಹಿಸುತ್ತಿವೆ. ಕಂಪ್ಯೂಟರ್ ಇಂಟರ್ನಟ್ ವ್ಯವಸ್ಥೆ ಹೊಂದಿದ ಈ ಸೆಂಟರ್ ಗಳು ಗ್ರಾಮದ ಸುದ್ದಿಗಳನ್ನು ಮಾಹಿತಿಗಳನ್ನು ನೇರವಾಗಿ ಜನರಿಗೆ ತಿಳಿಸುವ ವ್ಯವಸ್ಥೆಯನ್ನು ಮಾಡುತ್ತಿವೆ. ಬಹುತೇಕ ಛಾಯಾಗ್ರಾಹಕರು ಕೂಡ ಸುದ್ದಿ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಿರುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಸುದ್ದಿ ಪ್ರತಿನಿಧಿಗಳು:

ಪುತ್ತೂರು ತಾಲೂಕಿನ 67 ಗ್ರಾಮಗಳಲ್ಲಿ ಒಬ್ಬರಂತೆ ಪ್ರತಿನಿಧಿಗಳಿದ್ದಾರೆ. ಆ ಗ್ರಾಮದ ಸುದ್ದಿಗಳನ್ನು, ಗ್ರಾಮದ ಜನರಿಗೆ ಬೇಕಾದ ಮಾಹಿತಿ, ಸೇವೆಗಳನ್ನು ನೀಡುವಲ್ಲಿ ಈ ಪ್ರತಿನಿಧಿಗಳು ಪ್ರಮುಖ ಪಾತ್ರ ವಹಿಸುತ್ತಾರೆ.

ಇದು ಸುದ್ದಿ ಪತ್ರಿಕೆಯ ಮತ್ತೊಂದು ಸ್ಪೇಷಾಲಿಟಿ. ಜನರಿಗೆ ಮಾಹಿತಿ ಮತ್ತು ಸೇವೆ ನೀಡಬೇಕಾದರೆ ಹಾಗೂ ಇಡೀ ಗ್ರಾಮದ ಸಮಗ್ರ ಮಾಹಿತಿ ಸಂಗ್ರಹವಾಗಬೇಕಾದರೆ ಅಲ್ಲದೆ ಒಂದು ತಾಲೂಕಿನ ಎಲ್ಲ ಸುದ್ದಿಗಳು ಬರಬೇಕಾದರೆ ಗ್ರಾಮ ಮಟ್ಟದಲ್ಲಿ ಪ್ರತಿನಿಧಿಗಳು ಮುಖ್ಯ. ಇಂತಹ ಪ್ರತಿನಿಧಿಗಳನ್ನು ಸುದ್ದಿ ಪತ್ರಿಕೆ ಹೊಂದಿದೆ.

ಸುದ್ದಿ ಡಾಕ್ಟರ್

ಡಾ.ಯು.ಪಿ.ಶಿವಾನಂದ ಸುಳ್ಯದಲ್ಲಿ ಗಾಯತ್ರಿ ನರ್ಸಿಂಗ್ ಹೋಮ್ ನಡೆಸುತ್ತಿದ್ದರು. ಪ್ರತಿಷ್ಠಿತ ಉರುಬೈಲು ಕುಟುಂಬದವರು. ದಕ್ಷ ಹಿರಿಯ ಅರಣ್ಯಾಧಿಕಾರಿಯಾಗಿದ್ದ ಯು.ಕೆ ಪುಟ್ಟಪ್ಪ ಉರುಬೈಲು ಮತ್ತು ಸಾಮಾಜಿಕ ರಂಗದಲ್ಲಿ ತೊಡಗಿಸಿಕೊಂಡ ಧುರೀಣೆ ಶ್ರೀಮತಿ ಪದ್ಮಾವತಿ ಅವರ ಮಗ.

ಯಶಸ್ವಿ ವೈದ್ಯರಾಗಿದ್ದರು ರೋಗಗ್ರಸ್ತ ಸಮಾಜ ಮತ್ತು ಸರಕಾರಿ ವ್ಯವಸ್ಥೆಗೊಂದು ಚಿಕಿತ್ಸೆ ನೀಡುವ ಪ್ರಯತ್ನಕ್ಕೆ ಕೈಹಾಕಿದರು. ಸುಳ್ಯದಲ್ಲಿ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಯೊಬ್ಬ ವಿರುದ್ಧ ಆರಂಭಿಸಿದ ಕರಪತ್ರ ಹೋರಾಟ ಅನಂತರ ಸುದ್ದಿ ಪತ್ರಿಕೆ ಸ್ಥಾಪನೆಗೆ ಕಾರಣವಾಯಿತು. ಗ್ರಾಹಕ ವೇದಿಕೆ ಮೂಲಕ ನಡೆಸಿದ ಹೋರಾಟಕ್ಕಾಗಿ ಡಾಕ್ಟರ್ ಅವರಿಗೆ ದೆಹಲಿಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಶಸ್ತಿಯ ಉತ್ತೇಜನ, ವೃತ್ತಿಯಲ್ಲಿ ಸಂಗ್ರಹಿಸಿದ ಆದಾಯ ಪತ್ರಿಕೆಯಲ್ಲಿ ಕರಗಿ ಹೋದರೂ ತಾಲೂಕಿನ ಜನರ ಬೆಂಬಲದಿಂದ ಪತ್ರಿಕಾ ಮಾಧ್ಯಮದಲ್ಲಿ ಯಶಸ್ವಿಯಾಗಿದ್ದಾರೆ. ಈಗ ಸುದ್ದಿ ಬಿಡುಗಡೆ 28 ವರ್ಷಗಳ ಇತಿಹಾಸ ಹೊಂದಿದೆ.  2011ರ ವರ್ಷ ರಾಜ್ಯ ಸರಕಾರ ಮಾಧ್ಯಮ ಅಕಾಡಮಿ ಅವರನ್ನು ಗುರುತಿಸಿ ಗೌರವಿಸಿದೆ.

ಇ ಪೇಪರ್ :

ಸುದ್ದಿಯ ಬೆಳವಣಿಗೆಯ ಮತ್ತೊಂದು ಮುಖ ಈ ಇ ಪೇಪರ್. ಇಡೀ ಪತ್ರಿಕೆ ಇಂಟರ್ನೆಟ್ (ಅಂತರ್ಜಾಲ)ನಲ್ಲಿ ದೊರೆಯುವ ವ್ಯವಸ್ಥೆಯೇ ಈ ಇ ಪೇಪರ್. ತಾಲೂಕು ಮಟ್ಟದ ಪತ್ರಿಕೆ ಪ್ರತಿ ದಿನದ ಮಧ್ಯರಾತ್ರಿ ಕಚೇರಿಯಿಂದ ಪತ್ರಿಕೆ ಮುದ್ರಣಕ್ಕೆ ಹೋಗುವ ಹಂತದಲ್ಲೇ ಈ ಇಡೀ ಪತ್ರಿಕೆ ಇ ಪೇಪರ್ ಆಗಿ ಇಂಟರ್ನೇಟ್ ಡೌನ್ ಲೋಡ್ ಆಗುತ್ತದೆ. ಈಗಾಗಲೇ ದೇಶ ವಿದೇಶದಲ್ಲಿ ಲಕ್ಷಾಂತರ ಮಂದಿ ಸುದ್ದಿಯನ್ನು ಇಂಟರ್ನಟ್ ನಲ್ಲಿ ಓದುತ್ತಿದ್ದಾರೆ. http://news.suddimahithi.com/

ಕೃಪೆ

ರಮೇಶ್ ಪೆರ್ಲ

http://folkslive.com/kannada/

ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಅಂಕಣಗಳು
* ತಾಲೂಕು ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳ ವರದಿ
* ಸಮಸ್ಯೆಗಳ ಬಗ್ಗೆ ವಿಶೇಷ ವರದಿ, ಜನಾಭಿಪ್ರಾಯ-ನಾಗರಿಕ ಜಾಗೃತಿ ಆಂದೋಲನ
* ಜನಪ್ರತಿನಿಧಿಗಳ, ಸಾರ್ವಜನಿಕರ ಗಮನ ಸೆಳೆಯಬಹುದಾದ ಸ್ಪಂದನಾ ವರದಿಗಳು
* ವಿವಿಧ ಇಲಾಖೆಗಳಿಂದ ಜನರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಇಲಾಖಾ ಮಾಹಿತಿ
* ಇಲಾಖಾ ಅಧಿಕಾರಿಗಳ, ಜನಪ್ರತಿನಿಧಿಗಳ, ಗ್ರಾಮಲೆಕ್ಕಿಗರ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಪ್ರತಿದಿನದ ಕಾರ್ಯಕ್ರಮ ಹಾಗೂ ವಾರದ ಕಾರ್ಯಕ್ರಮಗಳು
* ತಾಲೂಕಿನ ಅರ್ಹ ಬರಹಗಾರರ ವಿಶೇಷ ಲೇಖನಗಳು, ಅಂಕಣಗಳು, ಸುದ್ದಿ ಸಾಹಿತ್ಯ ಸಾಪ್ತಾಹಿಕ
* ಶಿಕ್ಷಣ ಸಂಸ್ಥೆಗಳ ವರದಿ,ಶಾಲಾ ಕಾಲೇಜು ಚಟುವಟಿಕೆಗಳ ಮಾಹಿತಿ, ಶೈಕ್ಷಣಿಕ ಕ್ಷೇತ್ರಕ್ಕೆ ಬೇಕಾದ ಮಾಹಿತಿ ಇತ್ಯಾದಿ ಒಳಗೊಂಡ ಶಿಕ್ಷಣ ಸಾಹಿತ್ಯ ಸಾಪ್ತಾಹಿಕ.
* ಪರವೂರಿನಲ್ಲಿರುವ ಪುತ್ತೂರಿನವರ ವಿಳಾಸ ಮತ್ತು ಪರಿಚಯ, ಸಾಧಕರ ವಿಶೇಷ ಬರಹಗಳು
* ಶುಭ ವಿವಾಹ, ಹುಟ್ಟು ಹಬ್ಬ, ನಿಧನದ ಸುದ್ದಿಗಳು
* ಶಿಕ್ಷಣ ಮತ್ತು ಉದ್ಯೋಗದ ಪ್ರಾಥಮಿಕ ಮಾಹಿತಿ
* ಗ್ರಾಮಾಂತರ ಸುದ್ದಿಗಳು
* ಚಿತ್ರ ಸುದ್ದಿಗಳು
* ವರ್ಗಾವಣೆ, ಪದೋನ್ನತಿ, ನಿವೃತ್ತಿ, ಸಾಧನೆಗಳ ವರದಿ

ಪತ್ರಿಕೆಯ ಉದ್ದೇಶ-ಮಾಹಿತಿ
* ವಿವಿಧ ಒತ್ತಡ, ಕರ್ತವ್ಯಗಳ ಮಧ್ಯೆ ಪ್ರತ್ಯೇಕಿತರಾಗಿ ಬದುಕುತ್ತಿರುವ ಮಂದಿಯನ್ನು ಮಾಧ್ಯಮದ ಮೂಲಕ ಸಮೀಪಿಸುವಂತೆ ಮಾಡುವುದು
* ಸಾಮಾಜಿಕ ನ್ಯಾಯವಂಚಿತರಿಗೆ ತಿಳುವಳಿಕೆಯನ್ನು ತುಂಬಿದ ಮಾಧ್ಯಮವಾಗಿ ಕಾರ್ಯನಿರ್ವಹಿಸುವುದು
* ತಾಲೂಕಿನಿಂದ ಹೊರಗೆ ಇರುವ ಮಂದಿಯ ವರದಿ, ಪರಿಚಯ, ಸಾಧನೆಗಳನ್ನು ಪ್ರಕಟಿಸಿ ಅವರನ್ನು ಊರಿಗೆ ಸಮೀಪಿಸುವಂತೆ ಮಾಡುವುದು
* ಪಕ್ಷಗಳ ರಾಜಕಾರಣಗಳ ಜವಾಬ್ದಾರಿಯನ್ನು ನೆನಪಿಸುವುದು
* ಜನರ ಸಮಸ್ಯೆಗಳನ್ನು ಬೇಡಿಕೆಗಳನ್ನು ತೆರೆದಿಟ್ಟು ಸಂಬಂಧಪಟ್ಟ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಗಮನ ಸೆಳೆಯುವುದು
* ಶ್ರೀಮಂತರು ಬಡವರು ಎಂಬ ಬೇಧವಿಲ್ಲದೆ ಸರ್ವರ ವರದಿ, ನೋವು-ನಲಿವುಗಳಿಗೆ ಸ್ಪಂದಿಸುವುದು
* ಸುದ್ದಿ ಪತ್ರಿಕೆಗೆ ಪುತ್ತೂರು ತಾಲೂಕಿನಲ್ಲಿ ಲಕ್ಷಕ್ಕೂ ಮಿಕ್ಕಿ ಓದುಗರಿದ್ದಾರೆ.
* ವೆಬ್ ಸೈಟ್ ನಲ್ಲಿ ವಿವಿಧ ರಾಷ್ಟ್ರಗಳಲ್ಲಿ ಸೇರಿದಂತೆ ಸುಮಾರು 25 ಸಾವಿರಕ್ಕೂ ಮಿಕ್ಕಿ ಓದುಗರು
* 20 ಸಾವಿರಕ್ಕೂ ಅಧಿಕ ಪ್ರತಿಗಳ ಪ್ರಸಾರ
* 2 ಸಾವಿರಕ್ಕೂ ಮಿಕ್ಕಿ ಚಂದಾದಾರರು
* ರಾಜ್ಯವ್ಯಾಪಿ ಪ್ರಸರಣ ಇರುವ ಶಿಕ್ಷಣ ಉದ್ಯೋಗ ಮಾಹಿತಿ ಪತ್ರಿಕೆ
* ಶಿಕ್ಷಣ ಉದ್ಯೋಗ ಮಾಹಿತಿ ಪತ್ರಿಕೆಯ ಮೂಲಕ ಉದ್ಯೋಗ, ಶಿಕ್ಷಣ ಮಾಹಿತಿ, ಉದ್ಯೋಗ ಸಲಹೆ, ಸರಕಾರಿ, ಖಾಸಗಿ ಕಂಪೆನಿಗಳ ಅರ್ಜಿ ಫಾರಂ ಮಾಹಿತಿ, ಆನ್ ಲೈನ್ ಅರ್ಜಿ ಗಳ ಬಗ್ಗೆ ವಿವರ
* ತಾಲೂಕಿನ ಶಿಕ್ಷಣ ಸಂಸ್ಥೆಗಳು, ಗ್ಯಾರೇಜ್, ವೈದ್ಯರು, ವೈದ್ಯಾಧಿಕಾರಿಗಳು, ದೇವಸ್ಥಾನಗಳು, ಸಭಾಭವನಗಳು, ಕಾರ್ ಪೆಂಟರ್ಸ್ ಅಡಿಕೆ ತೆಗೆಯುವರು , ಚಿನ್ನದ ಕೆಲಸಗಾರರು, ಇತ್ಯಾದಿ ಸಮಗ್ರ ಮಾಹಿತಿ.
* ಟೂರಿಸಂ ಮಾಹಿತಿ ಮತ್ತು ಮಾರ್ಗದರ್ಶನ
* ಹಾಳೆತಟ್ಟೆ ಇತ್ಯಾದಿ ಗೃಹ ಉದ್ಯಮ, ಸ್ವ ಉದ್ಯೋಗಗಳಿಗೆ ಪ್ರೋತ್ಸಾಹ,ಪ್ರಚಾರ
* ವಿವಿಧ ರೀತಿಯ ತರಬೇತಿಗಳು
* ಉದ್ಯೋಗಾಕಾಂಕ್ಷಿಗಳನ್ನು ಹಾಗೂ ಅಭ್ಯರ್ಥಿಗಳು ಬೇಕಾದ ಸಂಸ್ಥೆಗಳನ್ನು ಜೋಡಿಸುವ ಉದ್ಯೋಗ ಮೇಳಗಳು, ಮಾಹಿತಿ ಹಬ್ಬಗಳು
* ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ರೀತಿಯ ಶೈಕ್ಷಣಿಕ ಮಾಹಿತಿಗಳು
* ಉದ್ಯೋಗಕ್ಕೆ ಸಂದರ್ಶನ ಎದುರಿಸಲು, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬೇಕಾದ ತರಬೇತಿಗಳು.

ಪತ್ರಿಕೆಯ ಹೆಸರು : ಸುದ್ದಿ ಬಿಡುಗಡೆ   ವಾರ ಪತ್ರಿಕೆ

Dr. up shivananda

 
 
 
 
 
 
 
 
 
 
 
 
 
 
 
 
   
ಸಂಪಾದಕರು : ಡಾ.ಯು.ಪಿ ಶಿವಾನಂದ .ಎಂ.ಬಿ.ಬಿ.ಎಸ್
 
ಸುಳ್ಯ ಕಛೇರಿ ವಿಳಾಸ : 
ಸುದ್ದಿ ಬಿಡುಗಡೆ ವಾರ ಪತ್ರಿಕೆ
ಎರಡನೇ ಮಹಡಿ, ಶ್ರೀ ಹರಿ ಕಾಂಪ್ಲೆಕ್ಸ್
ಬಾಳೆಮಕ್ಕಿ, ಸುಳ್ಯ -574239
ಫೋ: 08257-230230, 9986416484, 9481186949.
ಬೆಂಗಳೂರು  ಕಛೇರಿ ವಿಳಾಸ: ಫ್ಲಾಟ್ ನಂ.#102/2, ಜನಕ್ ರೆಸಿಡೆನ್ಸಿ, ರೇಸ್ ಕೋರ್ಸ್ ರೋಡ್, ಕುಮಾರ ಕೃಪಾ ರಸ್ತೆ ಸಮೀಪ, ರೆಡ್ ಕ್ರಾಸ್ ಬಿಲ್ಡಿಂಗ್ ಎದುರು, ಬೆಂಗಳೂರು ಫೋ: 080-22342247, 9538542444

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top