ಅ. 22, 23: ಪೈಲಾರು ಯಕ್ಷೋತ್ಸವ 2022- ಹಿರಿಯ ಕಲಾವಿದ ಯುವರಾಜ್ ಜೈನ್ ರವರಿಗೆ ಪ್ರಶಸ್ತಿ ಪ್ರದಾನ

0

 

 

ಎರಡು ದಿನಗಳ ಕಾಲ ರಂಜಿಸಲಿದೆ ತೆಂಕು ಮತ್ತು ಬಡಗು ತಿಟ್ಟಿನ ಯಕ್ಷಗಾನ ಬಯಲಾಟ

 

ಅಮರಮುಡ್ನೂರು ಗ್ರಾಮದ
ಪೈಲಾರು ಫ್ರೆಂಡ್ಸ್ ಕ್ಲಬ್ ಮತ್ತು ಶೌರ್ಯ ಯುವತಿ ಮಂಡಲ ಪೈಲಾರು ಇದರ ಸಹಯೋಗದೊಂದಿಗೆ ಹತ್ತನೇ ವರ್ಷದ ಯಕ್ಷಗಾನ ಬಯಲಾಟ ಮತ್ತು ಯಕ್ಷೋತ್ಸವ 2022 ರ ಪ್ರಶಸ್ತಿ ಪ್ರದಾನ ಸಮಾರಂಭ “ಪೈಲಾರು ಯಕ್ಷೋತ್ಸವ 2022” ದಶ ಸಂಭ್ರಮ ಕಾರ್ಯಕ್ರಮವು ಅ. 22 ಮತ್ತು 23 ರಂದು ವಿಶ್ವನಾಥ ಗೌಡ ತೊಡಿಕಾನ ವೇದಿಕೆ, ವಿಶ್ವನಾಥ ರೈ ಬೆಳ್ಳಾರೆ ಸಭಾಂಗಣ ಪೈಲಾರು ಇದರ ವಠಾರದಲ್ಲಿ ನಡೆಯಲಿರುವುದು.
ಅ. 22 ರಂದು ಸಂಜೆ 6.15 ಕ್ಕೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ. ಎಂ ರುದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ. ಎಲ್ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಉದ್ಯಮಿ ಲಕ್ಷ್ಮೀನಾರಾಯಣ ಐವರ್ನಾಡು, ಜನಜಾಗೃತಿ ವೇದಿಕೆ ದೊಡ್ಡತೋಟ ವಲಯದ ಅಧ್ಯಕ್ಷ ರಾಜಾರಾಮ ಬೆಟ್ಟ, ಆಲೆಟ್ಟಿ ಸರಕಾರಿ ಪ್ರೌಢಶಾಲಾ ಶಿಕ್ಷಕಿ ರೇವತಿ ಮದುವೆಗದ್ದೆ, ಬೆಂಗಳೂರು ಇನ್ ಟ್ಯಾಕ್ ಇಂಕ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ವಿಠಲ್ ದಾಸ್ ಕಡಪಳ, ಪೈಲಾರು ಸ. ಹಿ. ಪ್ರಾ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ದೇವಕಿ ಪೈಲಾರು ಉಪಸ್ಥಿತರಿರುವರು.
ಅ.23 ರಂದು ರಾತ್ರಿ ಗಂಟೆ 8.00 ರಿಂದ ನಡೆಯಲಿರುವ ಸಮಾರಂಭದಲ್ಲಿ 2022 ರ ಯಕ್ಷೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಯುವರಾಜ ಜೈನ್ ಮರ್ಕಂಜ ರವರಿಗೆ ಯಕ್ಷೋತ್ಸವ ಪ್ರಶಸ್ತಿ ಪ್ರದಾನ ನೆರವೇರಲಿರುವುದು. ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ.ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅದ್ಯಕ್ಷತೆ ವಹಿಸಲಿರುವರು. ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ಕೆ.ವಿ.ರೇಣುಕಾ ಪ್ರಸಾ ದ್ ರವರು ಸನ್ಮಾನಿಸಲಿರುವರುವರು. ಶಿಕ್ಷಕ ಡಾ.ಸುಂದರ ಕೇನಾಜೆ ಅಭಿನಂದನಾ ಭಾಷಣ ಮಾಡಲಿರುವರು. ನಿವೃತ್ತ ಖಜಾನಾಧಿಕಾರಿ ಸಂಜೀವ ಮಡಪ್ಪಾಡಿ ಅತಿಥಿಗಳಾಗಿ ಭಾಗವಹಿಸಿಲಿರುವರು.
ಎರಡು ದಿನಗಳ ಕಾಲ ನಡೆಯಲಿರುವ ಯಕ್ಷೋತ್ಸವದಲ್ಲಿ ಯಕ್ಷಗಾನ ವೈಭವ, ಬಡಗುತಿಟ್ಟಿನ ಯಕ್ಷಗಾನ ಚಕ್ರ ಚಂಡಿಕೆ, ತೆಂಕು ತಿಟ್ಟಿನ ಅಮರೇಂದ್ರ ಪದ ವಿಜಯ, ಮಕರಾಕ್ಷ ಕಾಳಗ ಹಾಗೂ ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಯವರಿಂದ ಯಕ್ಷ ಪರಂಪರೆ ಎಂಬ ಪ್ರಸಂಗ ಪ್ರದರ್ಶನ ವಾಗಲಿದೆ. ಈ ಸಂದರ್ಭದಲ್ಲಿ ಅಪರಾಹ್ನ 2.30 ರಿಂದ ಯಕ್ಷಗಾನ ಪೂರ್ವರಂಗ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಮಾಡಲಾಗುವುದು.
ಕಳೆದ ವರುಷಗಳಲ್ಲಿ ಹಿರಿಯ ಕಲಾವಿದರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ,ಉಬರಡ್ಕ ಉಮೇಶ್ ಶೆಟ್ಟಿ,ಕೊಳ್ತಿಗೆ ನಾರಾಯಣ ಗೌಡ ,ಬೆಳ್ಳಾರೆ ವಿಶ್ವನಾಥ ರೈ,ಐತಪ್ಪ ಗೌಡ ಬೊಮ್ಮಾರು, ಪದ್ಯಾಣ ಗಣಪತಿ ಭಟ್,ವಿಶ್ವನಾಥ ತೊಡಿಕಾನ,ಸುಜನಾ ಸುಳ್ಯ ರವರಿಗೆ ಪೈಲಾರು ಯಕ್ಷೋತ್ಸವ ಪ್ರಶಸ್ತಿ ಪ್ರದಾನ ಮಾಡಿರುವುದಾಗಿ ಸಂಘಟಕರು ತಿಳಿಸಿದರು.