ಎ.30 : ಐವರ್ನಾಡು ಸ.ಹಿ.ಪ್ರಾ.ಶಾಲಾ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಜೆ. ನಿವೃತ್ತಿ

0

ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಜೆ ಯವರು ಎ.30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಇವರು ಸುದೀರ್ಘ 37 ವರ್ಷ 3 ತಿಂಗಳುಕಾಲ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.
ಪುತ್ತೂರು ತಾಲೂಕು ಹಿರೆಬಂಡಾಡಿ ಗ್ರಾಮದ ಜಾಡೆಂಕಿ ಮನೆತನದಲ್ಲಿ 1963 ಎಪ್ರಿಲ್ ತಿಂಗಳಲ್ಲಿ ಜನಿಸಿದರು.
ತಂದೆ ಉಗ್ಗಪ್ಪ ಗೌಡ ಜಾಡೆಂಕಿ ತಾಯಿ ಶ್ರೀಮತಿ ಮೀನಾಕ್ಷಿ ಕೆ.ದಂಪತಿಯ 2 ಗಂಡು 2 ಹೆಣ್ಣು ಮಕ್ಕಳಲ್ಲಿ ಇವರು ಮೊದಲನೆಯವರು.
ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ.ಹಿ.ಪ್ರಾ.ಶಾಲೆ ಹಿರೆಬಂಡಾಡಿಯಲ್ಲಿ ಮುಗಿಸಿ ಪ್ರೌಢಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜು ಉಪ್ಪಿನಂಗಡಿಯಲ್ಲಿ ಮುಗಿಸಿದರು.ಮುಂದಿನ ಶಿಕ್ಷಣವನ್ನು ಶಿಕ್ಷಕಿ ತರಬೇತಿ ಕೇಂದ್ರ ಮಹಾರಾಣಿ ಮಹಿಳೆಯರ ಪ್ರಶಿಕ್ಷಣ ಸಂಸ್ಥೆ ಮೈಸೂರಲ್ಲಿ ಪಡೆದುಕೊಂಡರು.
1986 ಜನವರಿ ತಿಂಗಳಲ್ಲಿ ಸ.ಕಿ.ಪ್ರಾ.ಶಾಲೆ ಮಂಡೆಕೋಲು ಇಲ್ಲಿಗೆ ಶಿಕ್ಷಕಿಯಾಗಿ ಸೇರ್ಪಡೆಗೊಂಡರು.
1998 ಜೂನ್ ತಿಂಗಳಲ್ಲಿ ಸ.ಹಿ.ಪ್ರಾ.ಶಾಲೆ ಐವರ್ನಾಡು ಇಲ್ಲಿಗೆ ವರ್ಗಾವಣೆಗೊಂಡರು.
1999 ಆಗಸ್ಟ್ ತಿಂಗಳಿನಿಂದ 2001 ಫೆಬ್ರವರಿವರೆಗೆ ಸ.ಕಿ.ಪ್ರಾ.ದೇರಾಜೆಯಲ್ಲಿ ಕರ್ತವ್ಯ ನಿರ್ವಹಿಸಿದರು.
ಮುಂದೆ ಎರಡು ಬಾರಿ ಕಿ.ಪ್ರಾ.ಶಾಲೆ ನಿಡುಬೆಗೆ ನಿಯುಕ್ತಿಗೊಂಡು ಕರ್ತವ್ಯ ನಿರ್ವಹಿಸಿದ್ದರು.
ಮಕ್ಕಳಿಗೆ ಕಥೆ ಮತ್ತು ಹಾಡುಗಳ ಮೂಲಕವೇ ಪಾಠ ಬೋದಿಸುತ್ತಿದ್ದ ಇವರು ಹೊಸ ಹೊಸ ಪುಸ್ತಕಗಳನ್ನು ಆವಿಷ್ಕಾರಗಳನ್ನು ಓದಿ ತಿಳಿದು ಪಾಠಕ್ಕೆ ಅನ್ವಯಿಸುವುದು ಇವರ ಹವ್ಯಾಸವಾಗಿತ್ತು.
ಐವರ್ನಾಡು ಗ್ರಾಮದ ನಿಡುಬೆ ಕಲ್ಲುಗದ್ದೆ ಹರಿರಾಂ ನಿಲಯದಲ್ಲಿ ನೆಲೆಸಿರುವ ಇವರ ಪತಿ ಶಾಂತಾರಾಮ ಕೆ.ಎಸ್.ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದು ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮಗಳು ಶ್ರೀಮತಿ ಹರ್ಷಿತಾ ಕೆ.ಎಸ್.ಎಂಬಿಎ ಪದವಿಯನ್ನು ಬೆಂಗಳೂರಿನ ನ್ಯೂ ಹರಿಝೋನ್ ಕಾಲೇಜಿನಲ್ಲಿ ಪೂರೈಸಿ ಸ್ವಂತ ಉದ್ಯೋಗಿಯಾಗಿದ್ದಾರೆ.
ಅಳಿಯ ರತ್ನಾಕರ್ ಮುಗೆರೋಡಿ ಇಂಜಿನಿಯರ್ ಆಗಿದ್ದು ಸ್ವಂತ ಉದ್ದಿಮೆ ನಡೆಸುತ್ತಿದ್ದಾರೆ.
ಮೊಮ್ಮಗ ಪೃಥ್ವಿರಾಜ್ ಅಲೆಕ್ಕಾಡಿ ಶಾಲೆಯಲ್ಲಿ ಯು.ಕೆ.ಜಿ ಯಲ್ಲಿ ಕಲಿಯುತ್ತಿದ್ದಾನೆ.
ಪುತ್ರ ಸಂದೇಶ್ ಕೆ.ಎಸ್.ಬೆಂಗಳೂರಿನ ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿ ಐಬಿಎಸ್ ಕಾಲೇಜು ಮುಂಬೈಯಲ್ಲಿ ಎಂಬಿಎ ಪದವಿ ಪಡೆದು ಮುಂಬೈಯ ಡಿಎಚ್ಎಲ್ ಕಂಪೆನಿಯಲ್ಲಿ ಅಕೌಂಟೆಂಟ್ ಮೆನೇಜರ್ ಆಗಿದ್ದಾರೆ.
ಸೊಸೆ ಶ್ರೀಮತಿ ಕೃಪಾ ಪಿ.ಎಚ್.ಎಂಬಿಎ ಪದವೀಧರೆಯಾಗಿದ್ದು ಅಮೆರಿಕನ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.