ಜ. 25 – 26 : ನಾಲ್ಕೂರು ಹುಲಿಮನೆ ತರವಾಡು ದೈವಗಳ ನೇಮೋತ್ಸವ

0


ನಾಲ್ಕೂರು ಗ್ರಾಮದ ಹುಲಿಮನೆ ತರವಾಡು ಮನೆಯ ದೈವಸ್ಥಾನದಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ಸ್ಥಳ ದೈವಗಳ ಧರ್ಮ ನೇಮೋತ್ಸವ ಜನವರಿ ೨೫ ರಿಂದ ೨೬ರವರೆಗೆ ನಡೆಯಲಿದೆ.
ಜ. ೨೫ರಂದು ಗಣಹೋಮ ಲಕ್ಷ್ಮಿ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ಮತ್ತು ಶ್ರೀ ವೆಂಕಟರಮಣ ದೇವರ ಹರಿಸೇವೆ ನಡೆದು ನಂತರ ಅನ್ನಸಂತರ್ಪಣೆ ನಡೆಯಲಿದೆ ಸಂಜೆ ಗಂಟೆ ೬ರಿಂದ ದೈವಗಳ ಭಂಡಾರ ಹಿಡಿದು, ಕಲ್ಲುರ್ಟಿ ಪಂಜುರ್ಲಿ ದೈವದ ಕೋಲ ನಡೆಯಲಿದೆ. ಜ. ೨೬ರಂದು ಧರ್ಮದೈವ ಕುಕ್ಕೆತ್ತಿಬಳ್ಳು ಹಾಗೂ ಗುಳಿಗ ದೈವದ ನೇಮ ನಡೆಯಲಿದೆ. (ವರದಿ: ಡಿ.ಹೆಚ್.)