ಫೆ. 25 26: ಕೊನ್ನಡ್ಕ ನೇಮೋತ್ಸವ

0

ಬಳ್ಪ ಗ್ರಾಮದ ಕೊನ್ನಡ್ಕ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ 8ನೇ ವರ್ಷದ ನೇಮೋತ್ಸವವು ಫೆ. 25 ಮತ್ತು 26ರಂದು ನಡೆಯಲಿದೆ.
ಫೆ. 25ರಂದು ಬೆಳಿಗ್ಗೆ 8.00 ಗಂಟೆಯಿಂದ ಗಣಪತಿ ಹೋಮ, ಸಂಜೆ 5.00 ಗಂಟೆಯಿಂದ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಬೀದಿಗುಡ್ಡೆ ಮತ್ತು ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಮಹಿಳಾ ಭಜನಾ ತಂಡ ಕಾಂಜಿ ಇವರಿಂದ ಭಜನಾ ಕಾರ್ಯಕ್ರಮ ಜರಗಲಿದೆ. ಸಂಜೆ 5.30 ಕ್ಕೆ ಹಿರಿಯ ಭಜನಾ ಸಾಧಕ ಪ್ರಶಸ್ತಿ ಪುರಸ್ಕೃತರಾದ ಅರ್ಗುಡಿ ವಿಶ್ವನಾಥ ರೈಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಂಜೆ 6.00 ಗಂಟೆಗೆ ಶ್ರೀ ನಾಗಬ್ರಹ್ಮ ದರ್ಶನ, ಬಳಿಕ ಗುಳಿಗ ದೈವದ ನೇಮೋತ್ಸವ, ರಾತ್ರಿ 9.00 ಗಂಟೆಗೆ ಅನ್ನಸಂತರ್ಪಣೆ, ಬಳಿಕ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು, ರಾತ್ರಿ ಗಂಟೆ 1.00 ಕ್ಕೆ ತನ್ನಿ ಮಾಣಿಗ ಗರಡಿ ಇಳಿಯುವುದು ನಡೆಯಲಿದೆ. ಬೆಳಿಗ್ಗೆ 5.00 ಗಂಟೆಗೆ ಮೊಗೇರ್ಕಳ ದೈವಗಳ ಹರಕೆ ಸೇವೆ ನಡೆಯಲಿದೆ.
ಫೆ. 26ರಂದು ಬೆಳಿಗ್ಗೆ ಲಘು ಉಪಾಹಾರದ ಬಳಿಕ 7.30ಕ್ಕೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆದು ಗಂಧ ಪ್ರಸಾದ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ.
ಫೆ. 18ರಂದು ನೇಮೋತ್ಸವಕ್ಕೆ ಗೊನೆ ಕಡಿಯಲಾಗುವುದು. ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದೈವಗಳ ಕೃಪೆಗೆ ಪಾತ್ರರಾಗುವಂತೆ ಆಡಳಿತ ಸಮಿತಿ ಅಧ್ಯಕ್ಷ ಮೋನಪ್ಪ ಕೊನ್ನಡ್ಕ, ಕಾರ್ಯದರ್ಶಿ ಕಿರಣ್ ಕೊನ್ನಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.