ಮಾ.19-20; ದುಗ್ಗಲಡ್ಕ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ

0

ನಾಳೆ ಗೊನೆ ಮುಹೂರ್ತ

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಮಾ.19 ಮತ್ತು 20 ರಂದು ಕುಂಟಾರು ವೇ। ಮೂ। ವಾಸುದೇವ ತಂತ್ರಿವರ್ಯರ ಆಶೀರ್ವಾದದಲ್ಲಿ ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಮತ್ತು ಜೋಗಿಯಡ್ಕ ರಾಧಾಕೃಷ್ಣ ಭಟ್ಟರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ
ಶ್ರೀ ದುಗ್ಗಲಾಯ, ಶ್ರೀ ರುಧಿರ ಚಾಮುಂಡಿ, ಶ್ರೀ ನಾಗದೇವರು ಪರಿವಾರ ದೈವಗಳ
ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ ಜರಗಲಿದೆ.
ಮಾ.11 ರಂದು
ಬೆಳಿಗ್ಗೆ 10-30ಕ್ಕೆ
ಗೊನೆ ಮುಹೂರ್ತದೊಂದಿಗೆ ಜಾತ್ರೋತ್ಸವ ಆರಂಭಗೊಳ್ಳಲಿದೆ.
ಮಾ.18 ರಂದು ಸಂಜೆ
ಹಸಿರುವಾಣಿ ಮೆರವಣಿಗೆ, ಉಗ್ರಾಣ ತುಂಬಿಸುವುದು. ಕುಣಿತ ಭಜನೆಯೊಂದಿಗೆ ಮೆರವಣಿಗೆ ಬರಲಿದೆ.
ಮಾ.19 ರಂದು ಬೆಳಿಗ್ಗೆ
ಗಣಪತಿ ಹವನ,ಶ್ರೀ ನಾಗದೇವರಿಗೆ ತಂಬಿಲ,ಶ್ರೀ ದುಗ್ಗಲಾಯ, ಶ್ರೀರುಧಿರ ಚಾಮುಂಡಿ, ಪರಿವಾರ ದೈವಗಳ ತಂಬಿಲ ಹಾಗೂ
ಶ್ರೀ ಸತ್ಯನಾರಾಯಣ ದೇವರ ಪೂಜೆ,ಮಹಾಮಂಗಳಾರತಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ನಡುಬೆಟ್ಟು ಚಾವಡಿಯಿಂದ ದುಗ್ಗಲಡ್ಕದ ಮೂಲಸ್ಥಾನಕ್ಕೆ ಶ್ರೀ ದೈವಗಳ ಭಂಡಾರ ಆಗಮಿಸಲಿದೆ.
ರಾತ್ರಿ ಗಂಟೆ 9-00ರಿಂದ ಶ್ರೀ ರುಧಿರ ಚಾಮುಂಡಿ ದೈವದ ನೇಮೋತ್ಸವ,
ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.


ಮಾ. 20 ರಂದು ಬೆಳಿಗ್ಗೆ 10-00ರಿಂದ ಶ್ರೀ ದುಗ್ಗಲಾಯ ದೈವದ ನೇಮೋತ್ಸವ, ಪ್ರಸಾದ ವಿತರಣೆ,
ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಮಾ.19 ರಂದು ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಸಚಿವ ಎಸ್.ಅಂಗಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕಿ ಕು.ಭಾಗೀರಥಿ ಮುರುಳ್ಯಸಭಾಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ‌ .ರವೀಶ್ ಪಡುಮಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಸೇನೆಯ ನಿವೃತ್ತ ಸೈನಿಕ ವಿದ್ಯಾಧರ ಎನ್.ಪಟ್ಟೆಯವರಿಗೆ ಸನ್ಮಾನ ನಡೆಯಲಿದೆ. ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಮಾ.21 ರಂದು ಬೆಳಿಗ್ಗೆ ಗುಳಿಗ ದೈವದ ನೇಮೋತ್ಸವ ನಡೆಯಲಿದೆ.